Asianet Suvarna News

ದೂರವಾಯ್ತು ಐಪಿಎಲ್ ಆಯೋಜನೆ ವಿಘ್ನ, 64ರ ವೃದ್ದೆಗೆ 26ರ ಯುವಕನ ಜೊತೆ ಲಗ್ನ; ಮೇ.24ರ ಟಾಪ್ 10 ಸುದ್ದಿ!

ಕರ್ನಾಟಕದಲ್ಲಿ ಕೊರೋನಾ ಸ್ಫೋಟಗೊಂಡಿದೆ. ಇದೀಗ ಸೋಂಕಿತರ ಸಂಖ್ಯೆ 2 ಸಾವಿರ ಗಡಿ ದಾಟಿದೆ. ಇತರ ರಾಜ್ಯದ ಕತೆ ಇದಕ್ಕಿಂತ ಭಿನ್ನವಾಗಿಲ್ಲ. ಹೀಗಾಗಿ ಸೋಂಕಿನಲ್ಲಿ 20ನೇ ಸ್ಥಾನದಲ್ಲಿದ್ದ ಭಾರತ ಇದೀಗ ಟಾಪ್ 10 ಪಟ್ಟಿಗೆ ಲಗ್ಗೆ ಇಟ್ಟಿದೆ. ಈ ವರ್ಷ ಐಪಿಎಲ್ ಆಯೋಜನೆ ಕುರಿತು ಕೇಂದ್ರ ಕ್ರೀಡಾ ಸಚಿವ ಸುಳಿವು ನೀಡಿದ್ದಾರೆ. ಇತ್ತ ಕೊರೋನಾ ವೈರಸ್ ನಡುವೆ ವಿದೇಶಕ್ಕೆ ಹಾರಲು ರಕ್ಷಿತ್ ಶೆಟ್ಟಿ ಸಜ್ಜಾಗಿದ್ದಾರೆ. 64ರ ವೃದ್ದೆಗೆ 4ನೇ ಮದುವೆ, ದುಬಾರಿ ಕಾರು ಖರೀದಿಸಿದ ವಿರಾಟ್ ಕೊಹ್ಲಿ ಸಹೋದರ ಸೇರಿದಂತೆ ಮೇ.24ರ ಟಾಪ್ 10 ಸುದ್ದಿ ಇಲ್ಲಿವೆ

IPL 2020 to Coronavirus Karnataka top 10 news of may 24
Author
Bengaluru, First Published May 24, 2020, 4:57 PM IST
  • Facebook
  • Twitter
  • Whatsapp

ಸೋಂಕಿನಲ್ಲಿ 20ನೇ ಸ್ಥಾನದಲ್ಲಿದ್ದ ಭಾರತ ಟಾಪ್ 10ರತ್ತ!

 ಕಳೆದ ಕೆಲ ದಿನಗಳಿಂದ ನಿತ್ಯವೂ 5000ಕ್ಕಿಂತ ಹೆಚ್ಚು ಹೊಸ ಕೊರೋನಾ ಪ್ರಕರಣ ದಾಖಲಿಸುತ್ತಿರುವ ಭಾರತ, ಇದೀಗ ವಿಶ್ವದಲ್ಲೇ ಅತ್ಯಂತ ಹೆಚ್ಚು ಸೋಂಕಿತರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಟಾಪ್‌ 10ರ ಸಮೀಪಕ್ಕೆ ಬಂದು ನಿಂತಿದೆ. 

ಶವ ಹಸ್ತಾಂತರಿಸಲು 3000 ಕಿ. ಮೀ ದೂರ ಪ್ರಯಾಣಿಸಿದ ಕರ್ನಾಟಕದ ಆ್ಯಂಬುಲೆನ್ಸ್ ಡ್ರೈವರ್ಸ್!

ಕರ್ನಾಟಕದ ಇಬ್ಬರು ಚಾಲಕರು ದೂರದ ನಾಗಾಲ್ಯಾಂಡ್‌ನ ಮಹಿಳೆಯ ಶವ ಆಕೆ ಕುಟುಂಬಕ್ಕೆ ಹಸ್ತಾಂತರಿಸಲು ಬರೋಬ್ಬರಿ ಮೂರು ಸಾವಿರ ಕಿ. ಮೀ ದೂರ ಆಂಬುಲೆನ್ಸ್ ಚಲಾಯಿಸಿರುವ ಘಟನೆ ವರದಿಯಾಗಿದೆ.

ಭಾನುವಾರವೂ ಕೊರೋನಾ ರಣಕೇಕೆ: ರಾಜ್ಯದಲ್ಲಿ 2 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

ರಾಜ್ಯ ಆರೋಗ್ಯ ಇಲಾಖೆ ಇಂದು (ಭಾನುವಾರ) ಬಿಡುಗಡೆ ಮಾಡಿರುವ ಮೊದಲ ಹೆಲ್ತ್ ಬುಲೆಟಿನ್‌ನಲ್ಲಿ  ಮತ್ತೆ 97 ಹೊಸ ಕೋವಿಡ್-19 ಸೋಂಕು ಪ್ರಕರಣ ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 2056ಕ್ಕೆ ಏರಿಕೆಯಾಗಿದೆ.


ಈ ವರ್ಷ ಐಪಿ​ಎಲ್‌ ಬಗ್ಗೆ ಕ್ರೀಡಾ ಸಚಿವ ಕಿರಣ್ ರಿಜಿಜು ಸುಳಿ​ವು...

ಈ ವರ್ಷ ಒಂದಾದರೂ ಟೂರ್ನಿ ನಡೆಯಲಿದೆ ಎನ್ನುವ ಮೂಲಕ ಐಪಿಎಲ್ ಆಯೋಜನೆಯ ಬಗ್ಗೆ ಆಶಾವಾದ ಹುಟ್ಟುಹಾಕುವಂತೆ ಸಂದೇಶವನ್ನು ಕ್ರೀಡಾಸಚಿವ ಕಿರಣ್ ರಿಜಿಜು ರವಾನಿಸಿದ್ದಾರೆ.

ಹಿರಿಯ ನಟಿ ವಾಣಿಶ್ರೀಗೆ ಪುತ್ರಶೋಕ, ಮಗ ವೆಂಕಟೇಶ್ ನಿಧನ

ದಕ್ಷಿಣ ಭಾರತದ ಹಿರಿಯ ನಟಿ ವಾಣಿಶ್ರೀ ಅವರ ಪುತ್ರ ಅಭಿನಯ ವೆಂಕಟೇಶ್(36)  ಹೃದಯಾಘಾತದಿಂದ ನಿಧನರಾಗಿದ್ದಾರೆ.   ವೈದ್ಯರಾಗಿ ವೆಂಕಟೇಶ್ ಕಾರ್ಯನಿರ್ವಹಿಸುತ್ತಿದ್ದರು.

ಕೊರೋನಾ ಇದ್ರೇನು ರಕ್ಷಿತ್‌ ಶೆಟ್ಟಿ ಈ ಕಾರಣದಿಂದ ವಿದೇಶಕ್ಕೆ ಹೋಗಲೇಬೇಕು?

 ಚಾರ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊರೋನಾ ಕೊಡ್ತು ಶಾಕ್. ಆದರೇನು ಮಾಡೋದು ರಕ್ಷಿತ್ ಈ ಕಾರಣಕ್ಕಾದರೂ ವಿದೇಶಕ್ಕೆ ಹೋಗಲೇಬೇಕು.....

2.9 ಕೋಟಿ ಭಾರತೀಯರ ವೈಯಕ್ತಿಕ ಮಾಹಿತಿ ಲೀಕ್‌!...

ಬರೋಬ್ಬರಿ 2.9 ಕೋಟಿ ಭಾರತೀಯರ ವೈಯಕ್ತಿಕ ಮಾಹಿತಿಯನ್ನು ಡಾರ್ಕ್ ವೆಬ್‌ನಲ್ಲಿ ಸೋರಿಕೆ ಮಾಡಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಭಾರತೀಯ ಉದ್ಯೋಗಾಕಾಂಕ್ಷಿಗಳ ಇ-ಮೇಲ್‌, ದೂರವಾಣಿ ಸಂಖ್ಯೆ, ಮನೆ ವಿಳಾಸ, ಶೈಕ್ಷಣಿಕ ಅರ್ಹತೆ, ಉದ್ಯೋಗ ಅನುಭವ ಮತ್ತಿತರೆ ಮಾಹಿತಿಯನ್ನು ಉಚಿತವಾಗಿ ಲೀಕ್‌ ಮಾಡಲಾಗಿದೆ ಎಂದು ಆನ್‌ಲೈನ್‌ ಗುಪ್ತಚರ ಸಂಸ್ಥೆಯಾಗಿರುವ ಸೈಬಲ್‌ ಬಹಿರಂಗಪಡಿಸಿದೆ.

10 ಮಕ್ಕಳ ತಾಯಿ, 64 ವರ್ಷದ ವೃದ್ಧೆಗೆ ನಾಲ್ಕನೇ ಮದುವೆ!

62 ವರ್ಷದ ಬ್ರಿಟನ್‌ನ ಇಸಾಬೆಲ ಡಿಬ್ಬೆಲೆ  26 ವರ್ಷದ ಯುವಕನಿಗೆ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾಳೆ.  ಇವರಿಬ್ಬರೂ ಪರಸ್ಪರ ಎಷ್ಟು ಇಷ್ಟಟ್ಟರೆಂದರೆ ಅಂತಿಮವಾಗಿ ಮದುವೆಯಾಗಿದ್ದಾರೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಕೊಹ್ಲಿಗಿಂತ ದುಬಾರಿ ಕಾರು ಖರೀದಿಸಿದ ಸಹೋದರ ವಿಕಾಶ್ ಕೊಹ್ಲಿ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಳಿ ಹಲವು ದುಬಾರಿ ಕಾರುಗಳಿವೆ. ಇದೀಗ ಕೊಹ್ಲಿ ಸಹೋದರ ವಿಕಾಶ್ ಕೊಹ್ಲಿ ವಿರಾಟ್ ಕೊಹ್ಲಿ ಬಳಿ ಇರುವ ಕಾರುಗಳಿಗಿಂತ  ದುಬಾರಿಯಾದ ಕಾರು ಖರೀದಿಸಿದ್ದಾರೆ. ಲಾಕ್‌ಡೌನ್ ಸಡಿಲಿಕೆಯಾದ ಬೆನ್ನಲ್ಲೇ ವಿಕಾಶ್ ಕೊಹ್ಲಿ ಕಾರು ಖರೀದಿಸಿದ್ದಾರೆ.


ಒಂದು ಕಳ್ಳದಾರಿ ಮುಚ್ಚಿದರೆ ಮತ್ತೊಂದು; ಬೆಂಗ್ಳೂರಿಗೆ ಕಾದಿದೆ ಆಪತ್ತು! 24, May 2020, 3:34 PM...

ಕೊರೋನಾ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಹೊರರಾಜ್ಯದಿಂದ ಬರುವವರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಅದಾಗ್ಯೂ ತಮಿಳುನಾಡಿನಿಂದ ಜನ ಕಳ್ಳದಾರಿಯ ಮೂಲಕ ಬೆಂಗಳೂರಿಗೆ ಪ್ರವೇಶಿಸುತ್ತಿದ್ದಾರೆ. ಪೊಲೀಸರು  ಒಂದು ದಾರಿ ಮುಚ್ಚಿದರೆ, ಜನ ಮತ್ತೊಂದು ದಾರಿ ಮೂಲಕ ಪ್ರವೇಶ ಮಾಡುತ್ತಿದ್ದಾರೆ.  

Follow Us:
Download App:
  • android
  • ios