ಚೆನ್ನೈ(ಮೇ 24)  ದಕ್ಷಿಣ ಭಾರತದ ಹಿರಿಯ ನಟಿ ವಾಣಿಶ್ರೀ ಅವರ ಪುತ್ರ ಅಭಿನಯ ವೆಂಕಟೇಶ್(36)  ಹೃದಯಾಘಾತದಿಂದ ನಿಧನರಾಗಿದ್ದಾರೆ.   ವೈದ್ಯರಾಗಿ ವೆಂಕಟೇಶ್ ಕಾರ್ಯನಿರ್ವಹಿಸುತ್ತಿದ್ದರು.

1960-70ರ ದಶಕದಲ್ಲಿ ನಟಿ ವಾಣಿಶ್ರೀ ಜನಪ್ರಿಯ ಕಲಾವಿದೆಯಾಗಿದ್ದವರು. ನಿದ್ರೆಯಲ್ಲಿ ಇದ್ದಾಗಲೇ ವೆಂಕಟೇಶ್ ಅವರಿಗೆ ಹೃದಯಾಘಾತ ಆಗಿದೆ.  ಊಟಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಡಾಕ್ಟರ್‌ ಆಗಿ ಅಭಿನಯ ವೆಂಕಟೇಶ್‌ ಸೇವೆ ಸಲ್ಲಿಸುತ್ತಿದ್ದರು. 80 ರ ದಶಕದ ನಂತರದಲ್ಲಿ ವಾಣಿಶ್ರೀ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. 

ಹಾರ್ಟ್ ಅಟ್ಯಾಕ್‌ ಗೂ ಮುನ್ನ ದೇಹ ಈ ಸೂಚನೆ ಕೊಡುತ್ತದೆ

ಅಭಿನಯ ವೆಂಕಟೇಶ್‌ ಪಾರ್ಥಿವ ಶರೀರವನ್ನು ವಾಣಿಶ್ರೀಯವರ ಚೆನ್ನೈ ನಿವಾಸಕ್ಕೆ ತರಲಾಗಿದ್ದು ಭಾನುವಾರ ಚೆನ್ನೈನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.  ನಟ ಮೋಹನ್‌ ಬಾಬು  ಸಂತಾಪ ಸೂಚಿಸಿದ್ದಾರೆ.

ತೆಲುಗು ಮತ್ತು ತಮಿಳಿನಲ್ಲಿ ಹೆಚ್ಚು ಸಕ್ರಿಯವಾಗಿದ್ದ ನಟಿ ವಾಣಿಶ್ರೀ ಅವರು ಕನ್ನಡದಲ್ಲೂ ಕೆಲವು ಸಿನಿಮಾ ಮಾಡಿದ್ದಾರೆ. 'ವೀರ ಸಂಕಲ್ಪ', 'ಮುರಿಯದ ಮನೆ', 'ಸತ್ಯ ಹರಿಶ್ಚಂದ್ರ', 'ಮಿಸ್‌ ಲೀಲಾವತಿ', 'ಮನೆ ಅಳಿಯ' ಮುಂತಾದ ಕನ್ನಡ ಚಿತ್ರಗಳಲ್ಲಿ ವಾಣಿಶ್ರೀ  ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದರು.