ಬೆಂಗಳೂರು, (ಮೇ.24): ರಾಜ್ಯ ಆರೋಗ್ಯ ಇಲಾಖೆ ಇಂದು (ಭಾನುವಾರ) ಬಿಡುಗಡೆ ಮಾಡಿರುವ ಮೊದಲ ಹೆಲ್ತ್ ಬುಲೆಟಿನ್‌ನಲ್ಲಿ  ಮತ್ತೆ 97 ಹೊಸ ಕೋವಿಡ್-19 ಸೋಂಕು ಪ್ರಕರಣ ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 2056ಕ್ಕೆ ಏರಿಕೆಯಾಗಿದೆ.

ಕೊರೋನಾಗೆ ಕಾಸರಕದ ಚಕ್ಕೆ ಮದ್ದು ತಿಂದ ಮಗ ಇನ್ನಿಲ್ಲ, ಅಪ್ಪ ಸೀರಿಯಸ್..!

ಚಿಕ್ಕಬಳ್ಳಾಪುರ 26, ಹಾಸನ 14, ಉಡುಪಿ 18, ಮಂಡ್ಯ 15, ತುಮಕೂರು 2, ಯಾದಗಿರಿ 6, ಕಲಬುರಗಿ 6, ದಾವಣಗೆರೆ 4, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಡಿಕೇರಿ ಜಿಲ್ಲೆಗಳಲ್ಲಿ ತಲಾ 1 ಕೇಸ್ ಪತ್ತೆಯಾಗಿವೆ. 

ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 42 ಮಂದಿ ಮೃತಪಟ್ಟಿದ್ದು, 1378 ಮಂದಿ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು ಪತ್ತೆಯಾದ 97 ಕೇಸ್ ಗಳಲ್ಲಿ 73 ಕೇಸ್ ಗಳು ಮಹಾರಾಷ್ಟ್ರದ ಸಂಪರ್ಕ ಇರುವ ಕೇಸ್ ಗಳಾಗಿವೆ.