ನವದೆಹಲಿ(ಮೇ.24): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಳಿ ಆಡಿ ಸೀರಿಸ್ ಕಾರುಗಳಿವೆ. ಆಡಿ ಕಾರಿನ ಭಾರತದ ಅಂಬಾಸಿಡರ್ ಆಗಿರುವ ಕೊಹ್ಲಿ ಬಿಡುಗಡೆಯಾದ ಬಹುತೇಕ ಎಲ್ಲಾ ಕಾರುಗಳನ್ನು ಖರೀದಿಸಿದ್ದಾರೆ. ಇದೀಗ ಕೊಹ್ಲಿಯನ್ನೇ ಸಹೋದರ ವಿಕಾಶ್ ಕೊಹ್ಲಿ ಮೀರಿಸಿದ್ದಾರೆ. ಲಾಕ್‌ಡೌನ ಸಡಿಲಿಕೆಯಾದ ಬೆನ್ನಲ್ಲೇ ವಿಕಾಶ್ ಕೊಹ್ಲಿ ಪೊರ್ಶೆ ಪನಮೆರಾ ಟರ್ಬೋ ಕಾರು ಖರೀದಿಸಿದ್ದಾರೆ.

ವಿರಾಟ್ ಕೊಹ್ಲಿ ಆಡಿ ಕಾರು ನಿಮ್ಮದಾಗಿಸಿಕೊಳ್ಳಲು ಇದೆ ಅವಕಾಶ!.

ಪೊರ್ಶೆ ಪನಮೆರಾ ಟರ್ಬೋ ಕಾರು  4.0-ಲೀಟರ್ ಟ್ವಿನ್ ಟರ್ಬೋ  V8 ಪೆಟ್ರೋಲ್ ಎಂಜಿನ್ ಹೊಂದಿದ್ದು,  550hp ಹಾಗೂ 770Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  8-ಸ್ಪೀಡ್ PDK ಆಟೋಮ್ಯಾಟಿಕ್  ಟ್ರಾನ್ಸ್‌ಮಿಶನ್ ಹೊಂದಿದೆ.  0-100 ಕಿ.ಮೀ ವೇಗದ ತಲುಪಲು ಈ ಕಾರು 3.8 ಸೆಕೆಂಡ್ ತೆಗೆದುಕೊಳ್ಳುತ್ತಿದೆ. ಪೊರ್ಶೆ ಪನಮೆರಾ ಕಾರಿನ ಗರಿಷ್ಠ ವೇಗ 306 kmph.

ರಾತ್ರಿ ಕಾರು ಡ್ರೈವ್‌ ಅಂದ್ರೆ ವಿರಾಟ್‌ ಕೊಹ್ಲಿಗೆ ಇಷ್ಟ!

ವಿಕಾಶ್ ಕೊಹ್ಲಿ ಖರೀದಿಸಿದ ಪೊರ್ಶೆ ಪನಮೆರಾ ಟರ್ಬೋ ಕಾರಿನ ಬೆಲೆ 2.13 ಕೋಟಿ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ).  LED ಹೆಡ್‌ಲೈಟ್ಸ್ , LED ಟೈಲ್ ಲೈಟ್ಸ್, ಇಂಟಿಗ್ರೇಟೆಡ್ ರೇರ್ ಸ್ಪಾಯ್ಲರ್, 20 ಇಂಚಿನ ಅಲೋಯ್ ವೀಲ್,  ಎರಜು ಪನರೋಮಿಕ್ ಸನ್‌ರೂಫ್, 12 ಇಂಚಿನ ಟಚ್ ಸ್ಕ್ರೀನ್, ಇನ್ಸ್ಟ್ರುುಮೆಂಟ್ ಕ್ಲಸ್ಟರ್  ಸೇರಿದಂತೆ ಹಲವು ಅತ್ಯಾಧುನಿಕ ಫೀಚರ್ಸ್ ಈ ಕಾರಿನಲ್ಲಿದೆ.