ಚೀನೀ ರಕ್ಕಸ ದಾಳಿಗೆ ಸಿಕ್ತು ಸಾಕ್ಷ್ಯ!

ಭಾರತ ಚೀನಾ ನಡುವಿನ ತಿಕ್ಕಾಟ ಹೆಚ್ಚಾಗುತ್ತಿದೆ. ಗಡಿಯಲ್ಲಿ ಚೀನೀ ಸೈನಿಕರು ಭಾರತೀಯ ಯೋಧರನ್ನು ಹತ್ಯೆಗೈದ ಬಳಿಕ ದೇಶಾದ್ಯಂತ ಚೀನಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ತಕ್ಕ  ಪಾಠ ಕಲಿಸಬೇಕೆಂಬ ಕೂಗು ಎದ್ದಿದೆ. ಹೀಗಿರುವಾಗ ಭಾರತೀಯ ಸೇನೆ ಗಡಿಯುದ್ಧಕ್ಕೂ ಸೈನಿಕರನ್ನು ನೇಮಿಸಿದ್ದು, ಯುದ್ಧಕ್ಕೆ ಬೇಕಾಗುವ ಶಸ್ತ್ರಾಸ್ತ್ರಗಳನ್ನು ಪೂರೈಸಲಾಗುತ್ತಿದೆ. 

ಕೊರೋನಾಗೆ ವ್ಯಾಕ್ಸಿನ್: ಬ್ರಿಟನ್ ವೈದ್ಯರ ತಂಡದಲ್ಲಿ ಭಾರತೀಯ ವೈದ್ಯೆ

ಕೊರೋನಾಗೆ ವ್ಯಾಕ್ಸಿನ್ ಕಂಡು ಹಿಡಿಯುವ ಬ್ರಿಟನ್‌ ವೈದ್ಯರ ತಂಡದಲ್ಲಿ ಕೊಡಗಿನ ವೈದ್ಯೆಯೊಬ್ಬರು ಕೆಲಸ ಮಾಡುತ್ತಿದ್ದಾರೆ ಎಂಬುದು ಹೆಮ್ಮೆಯ ವಿಷಯ. ಕೊಡಗಿನ ಮೂಲದ ವೈದ್ಯೆ ಡಾ. ಅಫ್ರೀನ್ ಅಮೀರ್ ಡೆಕ್ಸಾಮಿತಾಸೋನ್ ಎಂಬ ಔಷಧಿ ಸಂಶೋಧನಾ ತಂಡದ ಭಾಗವಾಗಿದ್ದಾರೆ. 

ಭಾರತೀಯ ಸೇನೆ, ಪ್ರಧಾನಿ ಮೋದಿ ವ್ಯಂಗ್ಯವಾಡಿದ CSK ಡಾಕ್ಟರ್ ಅಮಾನತು!

ಚೀನಾ ಗಡಿಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ಸುದ್ದಿ ಪ್ರತಿಯೊಬ್ಬರ ಭಾರತೀಯನಿಗೆ ಅತೀವ ದುಃಖ ತಂದಿದೆ. ಎಲ್ಲರೂ ಒಗ್ಗಟ್ಟಾಗಿ ಹೋರಾಡಲು ಸಜ್ಜಾಗಿದ್ದಾರೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೈದ್ಯರೊಬ್ಬರು ಭಾರತೀಯ ಸೇನೆ ಹಾಗೂ ಪ್ರಧಾನಿ ಮೋದಿಯನ್ನು ವ್ಯಂಗ್ಯಾವಾಡಿ ಇದೀಗ ಅಮಾನತಾಗಿದ್ದಾರೆ. ಬೇಷರತ್ ಕ್ಷಮೆ ಯಾಚಿಸಿದ್ದರೂ, ಸಿಎಸ್‌ಕೆ ನಿರ್ಧಾರಿಂದ ಹಿಂದೆ ಸರಿದಿಲ್ಲ,

'ಸುಶಾಂತ್ ಸಾವಿಗೆ ಕರಣ್ ಜೋಹರ್, ಸಲ್ಮಾನ್ ಖಾನ್ ಸೇರಿ 8 ಜನ ಕಾರಣ'

ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿ ಎಂಟು ಜನ ಬಾಲಿವುಡ್ ಸೆಲೆಬ್ರಿಟಿಗಳ ಮೇಲೆ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ. ಕರಣ್ ಜೋಹರ್, ಸಲ್ಮಾನ್ ಖಾನ್, ಆದಿತ್ಯ ಚೋಪ್ರಾ, ಸಜಿದ್ ನಯ್ಡಿದ್ವಾಲಾ, ಸಂಜಯ್ ಲೀಲಾ ಬನ್ಸಾಲಿ, ಭೂಷಣ್ ಕುಮಾರ್, ಏಕ್ತಾ ಕಪೂರ್ ಮತ್ತು ನಿರ್ದೇಶಕ ದಿನೇಶ್ ವಿರುದ್ಧ ದೂರು ನೀಡಿದ್ದಾರೆ.

ದೀಪಿಕಾ ಪಡುಕೋಣೆ ಮನೆ ಮುಂದೆ ರೆಡ್‌ರೋಸ್‌ ಹಿಡಿದು 3 ಗಂಟೆ ಕಾದ ಮುಖೇಶ್!‌

ಬಾಲಿವುಡ್‌ ದಿವಾ ದೀಪಿಕಾ ಪಡುಕೋಣೆ ಕೋ ಸ್ಟಾರ್‌ ರಣವೀರ್‌ ಸಿಂಗ್‌ನ ಮಸ್ತಾನಿಯಾಗುವ ಮುನ್ನ ಮೊದಲು ಹಲವರ ಜೊತೆ ಹೆಸರು ಕೇಳಿಬರುತ್ತಿತ್ತು. ಬಾಲಿವುಡ್‌ ನಟ ನೀಲ್‌ ನಿತಿನ್‌ ಮುಖೇಶ್‌ ಸಹ ಆ ಪಟ್ಟಿಯಲ್ಲಿದ್ದಾರೆ. 2010ರಲ್ಲಿ ದೀಪಿಕಾ ಹಾಗೂ ನೀಲ್‌ ನಟಿಸಿದ ಸಿನಿಮಾ ಲಾಫಾಂಗೆ ಪರಿಂದೆ ಸಮಯದಲ್ಲಿ ಇಬ್ಬರ ಲಿಂಕ್‌ಅಪ್‌ ಸುದ್ದಿಗಳು ಹರಿದಾಡುತ್ತಿದ್ದವು. ಅದೇ ಸಮಯದಲ್ಲಿ ನೀಲ್‌ರ ಒಂದು ಟ್ವೀಟ್‌ ಇಬ್ಬರ ರಿಲೇ‍ನ್‌ಶಿಪ್‌ಗೆ ಮತ್ತಷ್ಟು ಪುಷ್ಠಿ ನೀಡಿತ್ತು.

ಲಡಾಖ್ ಲಡಾಯಿ; ಚೀನಾ ಟೆಲಿ ಗೇರ್ ಬಳಕೆ ನಿಷೇಧಿಸಿದ BSNL! 

ಭಾರದದ ಲಡಾಕ್ ಗಡಿ ಪ್ರದೇಶದಲ್ಲಿ ಚೀನಾ ಯೋಧರ ಅತಿ ಕ್ರಮಣಪ್ರವೇಶ ತಡೆದು ಹಿಮ್ಮೆಟ್ಟಿಸಿದ ಭಾರತ ಸೇನೆ, ಮತ್ತಷ್ಟು ಎಚ್ಚರವಾಗಿದೆ. ಆದರೆ ಈ ಹೊಡೆದಾಟದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆ ಬಳಿಕ ಚೀನಾ  ವಿರುದ್ಧ ಆಕ್ರೋಶ ಹೆಚ್ಚಾಗಿದೆ. ಚೀನಿ ವಸ್ತುಗಳ ನಿಷೇಧಕ್ಕೆ ಆಗ್ರಹ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ BSNL ದಿಟ್ಟ ಹೆಜ್ಜೆ ಇಟ್ಟಿದೆ.

50 ಸಾವಿರ ಗಡಿಯತ್ತ 10 ಗ್ರಾಂ ಚಿನ್ನದ ದರ!

ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದ್ದು, 10 ಗ್ರಾಮ್‌ಗೆ 50 ಸಾವಿರ ಗಡಿಗೆ ಇನ್ನಷ್ಟು ಸಮೀಪವಾಗಿದೆ.

ಬಜಾಜ್ ಪಲ್ಸರ್ 125 ಡಬಲ್ ಸೀಟ್ ಬೈಕ್ ಬಿಡುಗಡೆ!

ಬಜಾಜ್ ಆಟೋ ಲಿಮಿಟೆಡ್ ಇದೀಗ ತನ್ನ ಖ್ಯಾತ ಪಲ್ಸರ್ ಬೈಕ್ ಮತ್ತಷ್ಟು ಆಕರ್ಷಕ ಮಾಡಿ ಬಿಡುಗಡೆ ಮಾಡಿದೆ. 125, ಸ್ಪ್ಲಿ ಟ್ ಸೀಟ್ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಶೇಡ್ ಕಲರ್ ಸೇರಿದಂತೆ ಹಲವು ವಿಶೇಷತೆಗಳನ್ನು ಈ ಬೈಕ್ ಹೊಂದಿದೆ. 

ಭಾರತ ಯುದ್ಧಕ್ಕೆ ಸನ್ನದ್ಧವಾಗ್ತಿದ್ದಂತೆ ಎಚ್ಚೆತ್ತ ಕುತಂತ್ರಿ ಚೀನಾ!...

ಚೀನಾ ಹಾಗೂ ಭಾರತ ನಡುವಿನ ಸಂಘರ್ಷ ಮತ್ತಷ್ಟು ಹೆಚ್ಚಾಗಿದೆ. ಸೋಮವಾರ ರಾತ್ರಿ ಗಡಿಯಲ್ಲಿ ಚಿನಾ ಸೈನಿಕರು ಭಾರತದ ಇಪ್ಪತ್ತು ಸೈನಿಕರನ್ನು ಹತ್ಯೆಗೈದ ಬಳಿಕ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಮೂರೂ ಸೇನಾ ಪಡೆಗಳಿಗೆ ಯುದ್ಧಕ್ಕೆ ಸನ್ನದ್ಧವಾಗುವಂತೆ ಸರ್ಕಾರ ಸೂಚಿಸಿದ್ದು, ಪಿಎಂ ಮೋದಿ ಪ್ರತೀಕಾರದ ಪ್ರತಿಜ್ಞೆ ಮಾಡಿದ್ದಾರೆ.

'ಟಿಕೆಟ್‌ ಕೈ ತಪ್ಪೋದಕ್ಕೆ ಸಿದ್ದರಾಮಯ್ಯ ಕಾರಣ!' 'ಬಿಜೆಪಿಗೆ ಹೈಕಮಾಂಡ್ ನಾನೇನಾ?'

ವಿಧಾನ ಪರಿಷತ್ತು ಟಿಕೆಟ್ ಕೈತಪ್ಪಿರುವುದರ ಹಿಂದೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಪಾತ್ರ ಇದೆ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಆರೋಪಿಸಿದ್ದಾರೆ.  ಟಿಕೆಟ್ ಸಿಕ್ಕಿಲ್ಲ ಅಂತ ಬೇಸರ ಆಗಿಲ್ಲ, ರಾಜ್ಯದಿಂದ ನನ್ನ ಹೆಸರು ಶಿಫಾರಸು ಮಾಡಲಾಗಿತ್ತು, ದೆಹಲಿಯಲ್ಲಿ ಬದಲಾವಣೆ ಆಗಿದೆ. ಯಡಿಯೂರಪ್ಪ ಅವರ ಮೇಲೆ ಇನ್ನೂ ನನಗೆ ನಂಬಿಕೆ ಇದೆ. ಎಂಟಿಬಿಗೊಂದು ನ್ಯಾಯ ನನಗೊಂದು ನ್ಯಾಯ ಯಾಕೆ? ಅವರು ಸೋತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.