ದೀಪಿಕಾ ಪಡುಕೋಣೆ ಮನೆ ಮುಂದೆ ರೆಡ್‌ರೋಸ್ ಹಿಡಿದು 3 ಗಂಟೆ ಕಾದ ಮುಖೇಶ್!
ಬಾಲಿವುಡ್ ದಿವಾ ದೀಪಿಕಾ ಪಡುಕೋಣೆ ಕೋ ಸ್ಟಾರ್ ರಣವೀರ್ ಸಿಂಗ್‌ನ ಮಸ್ತಾನಿಯಾಗುವ ಮುನ್ನ ಮೊದಲು ಹಲವರ ಜೊತೆ ಹೆಸರು ಕೇಳಿಬರುತ್ತಿತ್ತು. ಬಾಲಿವುಡ್ ನಟ ನೀಲ್ ನಿತಿನ್ ಮುಖೇಶ್ ಸಹ ಆ ಪಟ್ಟಿಯಲ್ಲಿದ್ದಾರೆ. 2010ರಲ್ಲಿ ದೀಪಿಕಾ ಹಾಗೂ ನೀಲ್ ನಟಿಸಿದ ಸಿನಿಮಾ ಲಾಫಾಂಗೆ ಪರಿಂದೆ ಸಮಯದಲ್ಲಿ ಇಬ್ಬರ ಲಿಂಕ್‌ಅಪ್ ಸುದ್ದಿಗಳು ಹರಿದಾಡುತ್ತಿದ್ದವು. ಅದೇ ಸಮಯದಲ್ಲಿ ನೀಲ್‌ರ ಒಂದು ಟ್ವೀಟ್ ಇಬ್ಬರ ರಿಲೇನ್‌ಶಿಪ್‌ಗೆ ಮತ್ತಷ್ಟು ಪುಷ್ಠಿ ನೀಡಿತ್ತು.

ಬಿ ಟೌನ್‌ನಲ್ಲಿ ನೀಲ್ ನಿತಿನ್ ಮುಖೇಶ್ ಹೆಸರು ದೀಪಿಕಾ ಪಡುಕೋಣೆಯ ಜೊತೆ ಬಹಳ ಚರ್ಚೆಯಲ್ಲಿದ್ದ ದಿನಗಳಿದ್ದವು.

2010ರಲ್ಲಿ ತೆರೆಗೆ ಬಂದ ನೀಲ್ ನಿತಿನ್ ಮುಖೇಶ್ ಮತ್ತು ದೀಪಿಕಾ ಪಡುಕೋಣೆಯ ಚಲನಚಿತ್ರ ಲಾಫಾಂಗೆ ಪರಿಂದೆ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಸಾಧನೆ ಮಾಡಲಿಲ್ಲ. ಆದರೆ ಈ ನಟರಿಬ್ಬರ ನಡುವಿನ ಸ್ನೇಹ ಗಾಡವಾಯಿತು ಆ ದಿನಗಳಲ್ಲಿ.

ಚಿತ್ರದ ಸೆಟ್‌ನಲ್ಲಿ ಅವರ ಬಗ್ಗೆ ಹಲವು ಗಾಳಿ ಸುದ್ದಿಗಳು ಹರಡಿದ್ದವು. ವದಂತಿಗಳು ಹಬ್ಬಿದ್ದವು. ಮತ್ತು ನಂತರ ನೀಲ್ ಮಾಡಿದ ಟ್ವೀಟ್ ಬೆಂಕಿಗೆ ತುಪ್ಪ ಸುರಿದ ಹಾಗಾಯಿತು.

'ನಾನು ನಿನ್ನೆ ದೀಪಿಕಾ ಬಾಗಿಲಿನ ಹೊರಗೆ ಮೂರು ಗಂಟೆಗಳ ಕಾಲ ರೆಡ್ ರೋಸ್ ಹಿಡಿದು ನಿಂತಿದ್ದೆ. ಅವಳು ಆರಕ್ಷನ ಸಿನಿಮಾ ಪ್ರಚಾರಕ್ಕಾಗಿ ಹೋಗಿದ್ದಾಳೆಂದು ನನಗೆ ನಂತರ ಅರಿವಾಯಿತು,' ಎಂಬುದು ನೀಲ್‌ರ ಟ್ವೀಟ್ ಆಗಿತ್ತು.

ಅಂದು ನೀಲ್ ಮಾಡಿದ ಟ್ವೀಟ್ ಈಗ ಮತ್ತೆ ವೈರಲ್ ಆಗಿದೆ.

ದೀಪಿಕಾ ತುಂಬಾ ಸ್ವೀಟ್ ಪರ್ಸನ್ ಆಗಿರುವುದರಿಂದ ನನಗೆ ಇಷ್ಟವಾಗುತ್ತಾರೆ ಎಂದು ನೀಲ್ ಒಪ್ಪಿಕೊಂಡಿದ್ದರು. 'ಅವಳು ನನಗೆ ತಿಳಿದಿರುವ ಅತ್ಯಂತ ಒಳ್ಳೆಯ ಜನರಲ್ಲಿ ಒಬ್ಬಳು,' ಎಂದು ನೀಲ್ ಪ್ರಮುಖ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

'ಅವಳು ಬಹುತೇಕ ಕುಟುಂಬ ಇದ್ದ ಹಾಗೆ - ನನ್ನ 4 am ಸ್ನೇಹಿತೆ. ನಾನು ಯಾರ ಬಗ್ಗೆ ಮತ್ತು ಎಲ್ಲದರ ಬಗ್ಗೆಯೂ ಮಾತನಾಡಬಲ್ಲೆ. ಅವಳ ನಗು ತುಂಬಾ ಸಾಂಕ್ರಾಮಿಕವಾಗಿದೆ. ನಾನು ಅವಳನ್ನು ತುಂಬಾ ಇಷ್ಟಪಡುತ್ತೇನೆ,' ಎಂದಿದ್ದ ನಟ ನೀಲ್ ನಿತಿನ್ ಮುಖೇಶ್.

ಕೇವಲ ನೀಲ್ ಮಾತ್ರವಲ್ಲ ದೀಪಿಕಾ ಸಹ ಆತನನ್ನು ತುಂಬಾ ಕೇರಿಂಗ್ ಎಂದು ಕರೆದಿದ್ದರು.

'ನಿಲ್ ಜೊತೆ ಕೆಲಸ ಮಾಡುವುದು ಒಂದು ಅದ್ಭುತ ಅನುಭವ, ಅವನು ಒಳ್ಳೆಯವನು. ಸೆಟ್‌ನಲ್ಲಿ ಪ್ರತಿಯೊಬ್ಬರ ಬಗ್ಗೆ ಕಾಳಜಿ ವಹಿಸುವ ಮನುಷ್ಯ ಆತ ಎಂದು ನಾನು ಭಾವಿಸುತ್ತೇನೆ. ಫಿಲ್ಮಂ ನಿರ್ಮಾಣ ಒಂದು ಫ್ಯಾಮಿಲಿ ರಿಯೂನಿಯನ್ ಇದ್ದಹಾಗೆ. ಎಲ್ಲರ ಒಟ್ಟುಗೂಡುವಿಕೆಯಲ್ಲಿ ಆತ ಆಸಕ್ತಿ ವಹಿಸುತ್ತಾನೆ. ನೀಲ್ ಜೊತೆ ಕೆಲಸ ಮಾಡುವುದನ್ನು ನಾನು ವೈಯಕ್ತಿಕವಾಗಿ ಇಷ್ಟಪಟ್ಟೆ' ಎಂದು ಪಿಕು ನಟಿ ವೆಬ್ ಪೋರ್ಟಲ್‌ಗೆ ನೀಡಿದ ಇಂಟರ್‌ವ್ಯೂವ್‌ನಲ್ಲಿ ಹಂಚಿಕೊಂಡಿದ್ದರು ನೀಲ್ ಬಗ್ಗೆ ಹೇಳಿದ್ದರು.

ನೀಲ್ ಒಂದು ದಿನ ತನಗೆ ಮೇಕಪ್ ಮಾಡಿದ್ದಾನೆ ಎಂದು ದೀಪಿಕಾ ಹೇಳಿದ್ದಾರೆ. 'ಪ್ರಾಮಾಣಿಕವಾಗಿ, ನಾನು ಕೆಲಸ ಮಾಡಿದ 2010ರ ನಟರಲ್ಲಿ ನೀಲ್ ಹೆಚ್ಚು ಕೊಡುವಾತ ಎಂದು ನಾನು ಭಾವಿಸುತ್ತೇನೆ. ಆತ ಹೆಚ್ಚು ಬೆಂಬಲ ನೀಡುವವ ಎಂದು ನಾನು ಖಂಡಿತವಾಗಿ ಹೇಳಬಲ್ಲೆ. ಅವನಿಗಿಂತ ನನಗೆ ಆದ್ಯತೆ ಕೊಡುತ್ತಾನೆ. ಅವನಿಗೆ ಸಹ ಒಂದು ಪ್ರಮುಖ ಸೀನ್ ಇರುವ ದಿನಗಳಾಗಿತ್ತು, ಆದರೆ ಅವನು ನನ್ನನ್ನು ಬೆಂಬಲಿಸಲು ಮತ್ತು ನನ್ನ ಅಭಿನಯದ ಬಗ್ಗೆ ಚಿಂತೆ ಮಾಡಲು ಇರುತ್ತಿದ್ದ,' ಎಂದು ಹೇಳಿದ್ದರು ಪದ್ಮಾವತ್ ನಟಿ.