ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆ| 50 ಸಾವಿರ ಗಡಿಯತ್ತ 10 ಗ್ರಾಂ ಚಿನ್ನದ ದರ| ಈಗ 48400 ರು.| 

ನವದೆಹಲಿ(ಜೂ.17): ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದ್ದು, 10 ಗ್ರಾಮ್‌ಗೆ 50 ಸಾವಿರ ಗಡಿಗೆ ಇನ್ನಷ್ಟು ಸಮೀಪವಾಗಿದೆ.

Add Asianetnews Kannada as a Preferred SourcegooglePreferred

ದೆಹಲಿಯಲ್ಲಿ 10 ಗ್ರಾಮ್‌ ಚಿನ್ನದ ದರ ಮಂಗಳವಾರ 761 ರು. ಏರಿಕೆಯಾಗಿದ್ದು, 48,414 ರು. ಆಗಿದೆ. ಇನ್ನೊಂದೆಡೆ ಮುಂಬೈ ಚಿನ್ನದ ಮಾರುಕಟ್ಟೆಯಲ್ಲಿ 10 ಗ್ರಾಮ್‌ ಶುದ್ಧ ಚಿನ್ನದ ದರ 47540 ರು. ಹಾಗೂ ಆಭರಣ ಚಿನ್ನದ ದರ 47350 ರು. ಆಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಮತ್ತು ರುಪಾಯಿ ಮೌಲ್ಯ ಕುಸಿತ ಚಿನ್ನದ ದರ ಏರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಇದೇ ವೇಳೆ ಒಂದು ಕೆ.ಜಿ. ಬೆಳ್ಳಿಯ ದರ 1,308 ರು. ಏರಿಕೆ ಆಗಿದ್ದು, 49,204 ರು. ಆಗಿದೆ.