ದರ್ಶನ್ ಖಾಯಂ ಜಾಮೀನು ಅರ್ಜಿ, ವಕೀಲರ ಜಿದ್ದಾಜಿದ್ದಿ; ಖಾಕಿ ಕೂಡ ಎಡವಿದೆಯಾ?

ಎಲ್ಲರ ಕಣ್ಣು ಇತ್ತ ತಿರುಗಿದೆ. ಇಷ್ಟು ದಿನ ಬರೀ ಮಧ್ಯಂತರ ಜಾಮೀನಿನ ಸುದ್ದಿ ಓಡಾಡುತ್ತಿತ್ತು. ಸರ್ಜರಿ...ಕತ್ತರಿ...ಬೆನ್ನು ನೋವು...ಇದೇ ಮಾತು ಕೇಳುತ್ತಿತ್ತು. ಮೊಟ್ಟ ಮೊದಲ ಬಾರಿ ದರ್ಶನ್ ಖಾಯಂ ಜಾಮೀನು ಅರ್ಜಿ ವಿಷಯ ರಣಕಣಕ್ಕೆ ಇಳಿದಿದೆ. ಇಬ್ಬರೂ ವಕೀಲರು ಯುದ್ಧ..

kannada actor darshan permanent bail enquiry debate from lawyers srb


ಎಲ್ಲರ ಕಣ್ಣು ಇತ್ತ ತಿರುಗಿದೆ. ಇಷ್ಟು ದಿನ ಬರೀ ಮಧ್ಯಂತರ ಜಾಮೀನಿನ ಸುದ್ದಿ ಓಡಾಡುತ್ತಿತ್ತು. ಸರ್ಜರಿ...ಕತ್ತರಿ...ಬೆನ್ನು ನೋವು...ಇದೇ ಮಾತು ಕೇಳುತ್ತಿತ್ತು. ಮೊಟ್ಟ ಮೊದಲ ಬಾರಿ ದರ್ಶನ್ (Actor Darshan) ಖಾಯಂ ಜಾಮೀನು ಅರ್ಜಿ ವಿಷಯ ರಣಕಣಕ್ಕೆ ಇಳಿದಿದೆ. ಇಬ್ಬರೂ ವಕೀಲರು ಯುದ್ಧಕ್ಕೆ ಸಜ್ಜಾಗಿದ್ದಾರೆ. ನಟ ದರ್ಶನ್‌ರನ್ನು ಈ ಪ್ರಕರಣದಿಂದ ಪಾರು ಮಾಡಲೇಬೇಕು...' ಇದು ದಾಸನ ಪರ ವಕೀಲರ ಹಠ. ದರ್ಶನ್‌ರನ್ನು ಹೆಡಮುರಿಗೆ ಕಟ್ಟಿ ಸತ್ತಿರುವ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು...' ಇದು ಎಸ್‌ಪಿಪಿ ಪ್ರಸನ್ನಕುಮಾರ್ ಶಪಥ. ಅದರ ಮೊದಲ ಮೆಟ್ಟಲಾಗಿ ಜಿಗಿದು ನಿಂತಿದೆ ಜಿದ್ದಾಜಿದ್ದಿ...

ಐದೂವರೆ ತಿಂಗಳು. ನಟ ದರ್ಶನ್ ಆರೋಪಿಯಾಗಿ ದಿನ ತಳ್ಳುತ್ತಿದ್ದಾರೆ. ಮಧ್ಯಂತರ ಜಾಮೀನು ಪಡೆದು ಸದ್ಯಕ್ಕೆ ಆಸ್ಪತ್ರೆಯಲ್ಲಿದ್ದಾರೆ. ಸರ್ಜರಿ ಕಾರಣದಿಂದ ಪಡೆದ ಬೇಲು ವಿಚಾರಣೆ ಆಗಬೇಕಿದೆ. ಆಪರೇಶನ್ ಆಗಬೇಕೊ ಬೇಡವೊ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಹೈಕೋರ್ಟ್ ಕೊಟ್ಟ ತೀರ್ಪನ್ನು ವಿರೋಧಿಸಿ ಖಾಕಿ ಸುಪ್ರೀಂ ಮೆಟ್ಟಿಲು ಏರಲು ತಯಾರಾಗಿದೆ. ಅಲ್ಲಿನ್ನೂ ಅರ್ಜಿ ಸಲ್ಲಿಕೆಯಾಗಿಲ್ಲ. ಅದಕ್ಕೂ ಮುನ್ನವೇ ದರ್ಶನ್ ಖಾಯಂ ಜಾಮೀನು ಅರ್ಜಿ ವಿಚಾರಣೆ ಮಂಗಳವಾರ ಹೈ ಕೋರ್ಟ್ನಲ್ಲಿ ಶುರುವಾಗಿದೆ. ಎರಡೂ ಬಣದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಫಲಿತಾಂಶ ಹಾದಿಯಲ್ಲಿದೆ...

ಬಿಗ್‌ ಬಾಸ್‌ನಿಂದ ಹೊರಬಿದ್ದ ಧರ್ಮ ಮಹಿಳೆಯರ ಜೊತೆ 'ದಾಸರಹಳ್ಳಿ'ಯಲ್ಲಿ!

ರೇಣುಕಾಸ್ವಾಮಿ ಕೊಲೆಯನ್ನು ನಟ ದರ್ಶನ್ & ಟೀಮ್ ಮಾಡಿದೆ ಎಂಬ ಆರೋಪವಿದೆ. ಇದನ್ನು ಸಾಬೀತು ಪಡಿಸಲು ಖಾಕಿ ತಂಡ ಸುಮಾರು ಮೂರು ತಿಂಗಳು ಬೆವರು ಹರಿಸಿತ್ತು. ಕಮಿಶನರ್ ದಯಾನಂದ್ ಹಾಗೂ ಎಸಿಪಿ ಚಂದನ್‌ಕುಮಾರ್ ನೇತೃತ್ವದಲ್ಲಿ ಹಗಲು ರಾತ್ರಿ ಸಾಕ್ಷಿಗಳನ್ನು ಸಂಗ್ರಹಿಸಲಾಗಿತ್ತು. ಯಾವುದೇ ಚಿಕ್ಕ ಕಾರಣವೂ ದರ್ಶನ್‌ಗೆ ವರವಾಗಬಾರದು. ಹೀಗಂತ ತೀರ್ಮಾನಿಸಿ ನಿದ್ದೆಗೆಟ್ಟು ಮಾಹಿತಿ ಕೂಡಿ ಹಾಕಿತ್ತು. ಪ್ರತ್ಯಕ್ಷ-ಪರೋಕ್ಷ ಸಾಕ್ಷಿಗಳಿಂದ ಹೇಳಿಕೆ ಪಡೆಯಿತು. ಸ್ಥಳ ಮಹಜರು ನಡೆಸಿತು. ಕೊಲೆಗೆ ಬಳಸಿದ್ದಾರೆನ್ನಲಾದ ವಸ್ತುಗಳನ್ನು ವಶಕ್ಕೆ ಪಡೆಯಿತು. ಅದನ್ನು ಪರೀಕ್ಷೆ ಮಾಡಲಾಯಿತು. 

ತಾಂತ್ರಿಕ ಸಾಕ್ಷಿ...ಇದು ಮುಖ್ಯವಾಗಿತ್ತು. ಹೀಗಾಗಿ ದರ್ಶನ್ ಟೀಮ್ ಮೊಬೈಲ್‌ಗಳನ್ನು ರಿಟ್ರೀವ್ ಮಾಡಲಾಯಿತು. ದರ್ಶನ್, ಪವಿತ್ರಾ ಗೌಡ ಸೇರಿದಂತೆ ಉಳಿದೆಲ್ಲರ ಮೊಬೈಲ್‌ನಲ್ಲಿರುವ ಕೊಲೆಗೆ ಸಂಬಂಧಿಸಿದ ಮಾಹಿತಿ ಹೊರ ತೆಗೆಯಲಾಯಿತು. ಅದರಲ್ಲಿ ರೇಣುಕಾಸ್ವಾಮಿ ಮಾಡಿದ್ದ ಸಂದೇಶಗಳೂ ಸಿಕ್ಕವು. ಜೊತೆಗೆ ರೇಣುಕಾ ಹತ್ಯೆಯಾಗುವ ಮುಂಚಿನ ಫೋಟೊಗಳು ಸಿಕ್ಕವು. ಕಾಲ್ ರೆಕಾರ್ಡಿಂಗ್ ಕೂಡ ದಕ್ಕಿದವು. ದರ್ಶನ್ ಹತ್ಯೆ ಸಮಯ ತೊಟ್ಟಿದ್ದ ಬಟ್ಟೆ, ಬೂಟು...ಇತ್ಯಾದಿಗಳನ್ನು ಎಫ್‌ಎಸ್‌ಎಲ್‌ಗೆ ಕಳಿಸಿ ಖಚಿತತೆ ಪಡೆಯಲಾಯಿತು. 

ವಿಷ್ಣುವರ್ಧನ್ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್; ಡೌಟ್ ಇದ್ರೆ ಇಲ್ನೋಡಿ!

ಬರೀ ಇಷ್ಟೇ ಅಲ್ಲ...ಚಿಕ್ಕ ಚಿಕ್ಕ ವಿವರಗಳನ್ನೂ ಖಾಕಿ ಬಿಡಲಿಲ್ಲ. ಹೋಗಲಿ ಬಿಡು ಎನ್ನಲಿಲ್ಲ. ಎಲ್ಲವನ್ನೂ ದುರ್ಬೀನು ಹಾಕಿ ಚೆಕ್ ಮಾಡಿದರು. ಮಣ್ಣು, ರಕ್ತ, ಕಟ್ಟಿಗೆ, ಹಗ್ಗ, ಮೆಗ್ಗರ್ ಮಶಿನ್, ಲಾರಿ, ಬಟ್ಟೆ...ಎಲ್ಲವನ್ನೂ ಕೂಲಂಕುಶವಾಗಿ ಪರೀಕ್ಷೆಗ ಒಳಪಡಿಸಿದರು. ಲೂಮಿನಲ್ ಪರೀಕ್ಷೆಯಿಂದ ದರ್ಶನ್ ರಕ್ತವೇ ರೇಣುಕಾ ದೇಹದ ಮೇಲಿದೆ ಎಂದು ಪತ್ತೆ ಹಚ್ಚಿದರು. ಹೈ ಪ್ರೊಫೈಲ್ ಕೇಸ್ ಆರೋಪಿ ಅಗುಳಿನಷ್ಟೂ ನುಣುಚಿಕೊಳ್ಳಬಾರದು. ಅದಕ್ಕೆ ಏನೇನೊ ಬೇಕೊ ಎಲ್ಲವನ್ನೂ ಮುಗಿಸಿ, ಸುಮಾರು ನಾಲ್ಕು ಸಾವಿರ ಪುಟದ ಚಾರ್ಜ್ಶೀಟ್ ಸಲ್ಲಿಸಿ ಎದೆ ಉಬ್ಬಿಸಿದರು ಪೊಲೀಸರು. 

ಕೆಲವೇ ದಿನಗಳ ಹಿಂದೆ ಇನ್ನೊಂದು ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಸುಮಾರು ಒಂದು ಸಾವಿರದ ಮುನ್ನೂರು ಪುಟಗಳಿವೆ. ಅದರಲ್ಲಿ ಇನ್ನಷ್ಟು ಸಾಕ್ಷಿಗಳನ್ನು ಕೂಡಿ ಹಾಕಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾದದ್ದು ಆ ಎಂಟು ಫೋಟೊಗಳು. ಹತ್ಯೆಯನ್ನು ನೋಡಿದ ಪ್ರಮುಖ ಸಾಕ್ಷಿ ಪುನೀತ್ ಮೊಬೈಲ್‌ನಿಂದ ಎಂಟು ಫೋಟೊಗಳನ್ನು ತೆಗೆಯಲಾಗಿದೆ. ಆರೋಪಿಗಳ ಜೊತೆ ದರ್ಶನ್ ಫೋಟೊ ತೆಗೆಸಿಕೊಂಡಿದ್ದಕ್ಕೆ ಇದು ಸಾಕ್ಷಿಯಾಗಿದೆ. ಜೊತೆಗೆ ಹತ್ಯೆ ನಡೆದ ಸ್ಥಳದಲ್ಲಿ ದರ್ಶನ್ ಇದ್ದರು ಎನ್ನುವುದನ್ನು ಖಚಿತಪಡಿಸಿದೆ. 

ಡಾ ರಾಜ್ ಅಂತಿಮ ದರ್ಶನಕ್ಕೆ ಬಂದ ವಿಷ್ಣುಗೆ ಬೈಯ್ದು ಕಳಿಸಿದ್ರು ಪಾರ್ವತಮ್ಮ; ಎಂಥಾ ಕರುಣಾಮಯಿ! 

ಹೀಗೆ ದರ್ಶನ್ ಜಾತಕವನ್ನು ಇಂಚಿಂಚಾಗಿ ಬಯಲು ಮಾಡಲು ಪೊಲೀಸರು ಪ್ರಮಾಣ ಮಾಡಿದ್ದಾರೆ. ಇದಕ್ಕೆ ಉತ್ತರ ಕೊಡಲು ದರ್ಶನ್ ಪರ ಸಿ ವಿ ನಾಗೇಶ್ ಹಾಜರಾಗಿದ್ದಾರೆ. ಈಗಾಗಲೇ ದರ್ಶನ್‌ಗೆ ಮಧ್ಯಂತರ ಜಾಮೀನು ಕೊಡಿಸಿದ್ದಾರೆ ನಾಗೇಶ್. ಇದೀಗ ಖಾಯಂ ಜಾಮೀನು ಅರ್ಜಿ ಅಖಾಡಕ್ಕೆ ಬಂದಿದೆ. ಮಂಗಳವಾರ ಮೊದಲ ದಿನ ಮುಂಜಾನೆಯಿಂದ ವಾದ ಆರಂಭಿಸಿದರು ನಾಗೇಶ್. ಸುಮಾರು ಎರಡೂವರೆ ಗಂಟೆ ವಾದ ಮಂಡಿಸಿದರು. ಚಾರ್ಜ್ಶೀಟ್ ಅಂಶಗಳಲ್ಲಿ ಸತ್ಯ ಎಷ್ಟು ಸುಳ್ಳೆಷ್ಟು ಎಂದು ಪ್ರಶ್ನಿಸಿದರು. ನ್ಯಾಯಾಧೀಶರೂ ಅನುಮಾನಕ್ಕೆ ಸ್ಪಷ್ಟನೆ ಪಡೆದರು. 

ಇದು ನೋಡಿ ನ್ಯಾಯಾಲಯದಲ್ಲಿ ನಡೆದ ವಾದದ ವಿವರ. ಸಿ ವಿ ನಾಗೇಶ್ ಹಿರಿಯ ವಕೀಲರು. ಅನೇಕ ಮಹತ್ವದ ಕೇಸ್‌ಗಳನ್ನು ಗೆದ್ದಿದ್ದಾರೆ. ಹೀಗಾಗಿಯೇ ದರ್ಶನ್ ಪರವಾಗಿ ವಾದ ಮಾಡಿದ್ದಾರೆ. ಚಾರ್ಜ್ಶೀಟ್‌ನ ಕೆಲವು ಅಂಶಗಳಿಗೆ ಅನುಮಾನ ವ್ಯಕ್ತ ಪಡಿಸಿದ್ದಾರೆ. ಖಾಕಿ ಪಡೆ ಮಾಡಿರಬಹುದಾದ ತಪ್ಪುಗಳನ್ನು ಇಟ್ಟುಕೊಂಡೇ ಬಾಣ ಬಿಡುತ್ತಿದ್ದಾರೆ. 

ಕ್ಯಾನ್ಸರ್‌ ಭಾದೆ ಬಗ್ಗೆ ಶಿವಣ್ಣ ಅಂತರಂಗದ ಮಾತು, ಎಂಥವರಿಗೂ ಕಣ್ಣೀರು ಬರದೇ ಇರದು!

ಲಾಠಿ...ಹಗ್ಗ...ರಕ್ತ...ಮಹಜರು...ಇತ್ಯಾದಿ ವಿಷಯಗಳಲ್ಲಿ ಖಾಕಿ ಕೂಡ ಎಡವಿತಾ ? ಆ ಅನುಮಾನ ಬರುವಂತಿದೆ ನಾಗೇಶ್ ವಾದ ಸರಣಿ. ನ್ಯಾಯಾಧೀಶರೂ ಇದಕ್ಕೆ ಸ್ಪಷ್ಟನೆ ಪಡೆದು ಎಲ್ಲವನ್ನೂ ಕೇಳುತ್ತಿದ್ದಾರೆ. ಮುಂದೇನು ಎಂಬುದನ್ನು ಕಾದು ನೋಡಬೇಕಿದೆ! ಎಲ್ಲವನ್ನೂ ವಿಡಿಯೋದಲ್ಲಿ ನೋಡಿ..

Latest Videos
Follow Us:
Download App:
  • android
  • ios