ಕೋಲ್ಕತ್ತಾ ಮೂಲದ ಡಾ. ಜಯ್ ಭಟ್ಟಾಚಾರ್ಯ ಅವರನ್ನು ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್‌ಐಎಚ್) ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಟ್ರಂಪ್ ಅವರ ಎರಡನೇ ಅವಧಿಯಲ್ಲಿ ಈ ಹುದ್ದೆಯನ್ನು ಅಲಂಕರಿಸಲಿದ್ದಾರೆ. ಆರೋಗ್ಯ ಸಂಶೋಧನೆ ಮತ್ತು ಜೀವ ಉಳಿಸುವ ಕಾರ್ಯಗಳನ್ನು ಮುನ್ನಡೆಸಲಿದ್ದಾರೆ.

ನವದೆಹಲಿ (ನ.27): ಕೋಲ್ಕತ್ತಾ ಮೂಲದ, ಸ್ಟ್ಯಾನ್‌ಪೋರ್ಡ್‌ನಲ್ಲಿ ತರಬೇತಿ ಪಡೆದ ವೈದ್ಯ ಹಾಗೂ ಅರ್ಥಶಾಸ್ತ್ರಜ್ಞ ಡಾ.ಜಯ್‌ ಭಟ್ಟಾಚಾರ್ಯ ಅವರನ್ನು ಅಮೆರಿಕ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ದೇಶದ ಪ್ರಧಾನ ವೈದ್ಯಕೀಯ ಸಂಶೋಧನಾ ಸಂಸ್ಥೆಯಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್‌ಐಎಚ್) ಮುಖ್ಯಸ್ಥರಾಗಿ ನಾಮನಿರ್ದೇಶನ ಮಾಡಿದ್ದಾರೆ. ಜೀವಜಗತ್ತಿಗೆ ಅಗತ್ಯವಾದ ಸಂಶೋಧನೆಗಳನ್ನು ಮಾಡುವ ಮೂಲಕ ಆರೋಗ್ಯಗಳನ್ನು ಸುಧಾರಿಸಿ ಮತ್ತು ಜೀವಗಳನ್ನು ಉಳಿಸುವ ಸಲುವಾಗಿ ಈ ನಿರ್ಧಾರ ಮಾಡಿದ್ದಾಗಿ ತಿಳಿಸಿದ್ದಾರೆ. ಟ್ರಂಪ್‌ ಅವರ 2ನೇ ಅಧ್ಯಕ್ಷೀಯ ಅವಧಿಯಲ್ಲಿ ಆರೋಗ್ಯ ಮತ್ತು ಮಾನವ ಸೇವೆಗಳ ವಿಭಾಗದ ಮುಖ್ಯಸ್ಥರಾಗಿರುವ ರಾಬರ್ಟ್ ಎಫ್ ಕೆನಡಿ ಜೂನಿಯರ್ ಅವರ ಸಹಕಾರದಲ್ಲಿ ಸ್ಟ್ಯಾನ್‌ಫೋರ್ಡ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ 56 ವರ್ಷದ ಪ್ರಾಧ್ಯಾಪಕರು ಕೆಲಸ ಮಾಡಲಿದ್ದಾರೆ.

ಎನ್‌ಐಎಚ್‌ ನಿರ್ದೇಶಕರಾಗಿ, ಅವರು ಆರಂಭಿಕ ಹಂತದ ಸಂಶೋಧನೆಯನ್ನು ನಡೆಸುವ 27 ಸಂಸ್ಥೆಗಳು ಮತ್ತು ಕೇಂದ್ರಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ಭವಿಷ್ಯದಲ್ಲಿ ಬರುವ ಸಾಂಕ್ರಾಮಿಕದ ಬೆದರಿಕೆಗಳಿಗೆ ಲಸಿಕೆಯನ್ನು ಅಭಿವೃದ್ಧಿ ಮಾಡುವುದು ಹೊಸ ಔಷಧ ಚಿಕಿತ್ಸೆಗಳಿಗೆ ಟಾರ್ಗೆಟ್‌ಗಳನ್ನು ಗುರುತಿಸುವುದು ಮುಂತಾದ ಕ್ಷೇತ್ರಗಳನ್ನು ವ್ಯಾಪಿಸುತ್ತದೆ.

ಭಟ್ಟಾಚಾರ್ಯ ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಪ್ರಾಧ್ಯಾಪಕರಾಗಿದ್ದಾರೆ ಮತ್ತು ಅರ್ಥಶಾಸ್ತ್ರ ಮತ್ತು ಆರೋಗ್ಯ ಸಂಶೋಧನಾ ನೀತಿಯಲ್ಲಿ ಗೌರವ ಪ್ರೊಫೆಸರ್‌ ಆಗಿ ಕೆಲಸ ಮಾಡುತ್ತಿದ್ದಾಋಏ. ಆಔಋಊ ಸ್ಟ್ಯಾನ್‌ಫೋರ್ಡ್ ಇನ್‌ಸ್ಟಿಟ್ಯೂಟ್ ಫಾರ್ ಎಕನಾಮಿಕ್ ಪಾಲಿಸಿ ರಿಸರ್ಚ್ ಮತ್ತು ಫ್ರೀಮನ್ ಸ್ಪೋಗ್ಲಿ ಇನ್‌ಸ್ಟಿಟ್ಯೂಟ್ ಫಾರ್ ಇಂಟರ್‌ನ್ಯಾಶನಲ್ ಸ್ಟಡೀಸ್‌ನಲ್ಲಿ ಹಿರಿಯ ಸಹೋದ್ಯೋಗಿಯಾಗಿದ್ದಾರೆ. ಹೆಚ್ಚುವರಿಯಾಗಿ, ಅವರು ಸ್ಟ್ಯಾನ್‌ಫೋರ್ಡ್‌ನ ಸೆಂಟರ್ ಫಾರ್ ಡೆಮೊಗ್ರಫಿ ಮತ್ತು ಎಕನಾಮಿಕ್ಸ್ ಆಫ್ ಹೆಲ್ತ್ ಅಂಡ್ ಏಜಿಂಗ್ ಅನ್ನು ನಿರ್ದೇಶಿಸುತ್ತಾರೆ.

'ಗೆದ್ದಾಗ ಸರಿ, ಸೋತಾಗ ಸರಿಯಿರಲ್ವ..' ಇವಿಎಂಗೆ ಗ್ರೀನ್‌ ಸಿಗ್ನಲ್‌ ನೀಡಿದ ಸುಪ್ರೀಂ ಕೋರ್ಟ್‌

ಅವರ ಸಂಶೋಧನೆಯು ಪ್ರಾಥಮಿಕವಾಗಿ ಆರೋಗ್ಯ ರಕ್ಷಣೆಯ ಅರ್ಥಶಾಸ್ತ್ರದ ಮೇಲೆ ಕೇಂದ್ರೀಕರಿಸುತ್ತದೆ, ದುರ್ಬಲ ಜನಸಂಖ್ಯೆಯ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ನಿರ್ದಿಷ್ಟ ಒತ್ತು ನೀಡುತ್ತದೆ.

ಶಬರಿಮಲೆಯ 18 ಪವಿತ್ರ ಮೆಟ್ಟಿಲು ಮೇಲೆ ನಿಂತು ಕೇರಳ ಪೊಲೀಸರ ಫೋಟೋಶೂಟ್‌!

ಕೋವಿಡ್‌ ಸಮಯದಲ್ಲಿ ಬಿಡೆನ್‌ ಸರ್ಕಾರದ ಕೋವಿಡ್‌ ನೀತಿಗಳನ್ನು ಕಟುವಾಗಿ ಟೀಕಿಸಿದ ವ್ಯಕ್ತಿಗಳಲ್ಲಿ ಜಯ್‌ ಭಟ್ಟಾಚಾರ್ಯ ಕೂಡ ಒಬ್ಬರಾಗಿದ್ದರು. ಕೋವಿಡ್‌ ಕಾಲದಲ್ಲಿ ಲಾಕ್‌ಡೌನ್‌ಗಳು ಹಾಗೂ ಮಾಸ್ಕ್‌ ಹಾಕುವ ನಿಯಮಗಳಿಗೆ ದೊಡ್ಡ ಮಟ್ಟದ ವಿರೋಧ ತೋರಿದ್ದರು.