ಮುಂಬೈ ( ಜೂ. 17)  ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿ ಎಂಟು ಜನ ಬಾಲಿವುಡ್ ಸೆಲೆಬ್ರಿಟಿಗಳ ಮೇಲೆ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ. ಕರಣ್ ಜೋಹರ್, ಸಲ್ಮಾನ್ ಖಾನ್, ಆದಿತ್ಯ ಚೋಪ್ರಾ, ಸಜಿದ್ ನಯ್ಡಿದ್ವಾಲಾ, ಸಂಜಯ್ ಲೀಲಾ ಬನ್ಸಾಲಿ, ಭೂಷಣ್ ಕುಮಾರ್, ಏಕ್ತಾ ಕಪೂರ್ ಮತ್ತು ನಿರ್ದೇಶಕ ದಿನೇಶ್ ವಿರುದ್ಧ ದೂರು ನೀಡಿದ್ದಾರೆ

ವಕೀಲ ಸುಧೀರ್ ಕುಮಾರ್ ಎಂಬುವರು ದೂರು ನೀಡಿದ್ದ ಇವೆಲ್ಲರು ಸುಶಾಂತ್ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ. 

ಸುಶಾಂತ್ ಪಾರ್ಥಿವ ಶರೀರ ಕಂಡು ಬಿಕ್ಕಿ ಬಿಕ್ಕಿ ಅತ್ತ ಗೆಳತಿ

ಸೆಕ್ಷನ್  306, 109, 504  ಮತ್ತು 506 ಐಪಿಸಿ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಬಿಹಾರ ಮಿರ್ಜಾಪುರದ ಸ್ಥಳೀಯ ನ್ಯಾಯಾಲಯದಲ್ಲಿ ಜುಲೈ  3  ರಂದು ಈ ಪ್ರಕರಣ ವಿಚಾರಣೆಗೆ ಬರಲಿದೆ. ಸುಶಾಂತ್ ಸಿನಿಮಾ ಬಿಡುಗಡೆ ಮಾಡಲು ಇವರು ತಡೆ ಹಾಕುತ್ತಿದ್ದರು. ಸಿನಿಮಾ ಕಾರ್ಯಕ್ರಮಗಳಿಗೆ ಆಹ್ವಾನ ನೀಡುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ.

ಏಳಕ್ಕೂ ಅಧಿಕ ಚಿತ್ರಗಳಿಂದ ಸುಶಾಂತ್ ಅವರನ್ನು ಕೈಬಿಡಲಾಗಿತ್ತು. ಇಂಥ ಸಂದಿಗ್ಧ ಪರಿಸ್ಥಿತಿಯನ್ನು ಅವರಿಗೆ ತಂದಿಟ್ಟಿದ್ದರ ಪರಿಣಾಮ ನಟ ಕೆಟ್ಟ ನಿರ್ಧಾರ ಮಾಡಿದರು ಎಂದು ವಕೀಲರು ಆರೋಪಿಸಿದ್ದಾರೆ.

ನಟಿ ಕಂಗನಾ ರಣಾವತ್ ಅವರನ್ನು ಈ ಪ್ರಕರಣಕ್ಕೆ ಸಾಕ್ಷಿಯಾಗಿ ಮಾಡಲಾಗಿದೆ. ಕಂಗನಾ ಸಹ ಬಾಲಿವುಡ್ ಸೆಲೆಬ್ರಿಟಿಗಳ ಮೇಲೆ ನೇರ ಆರೋಪ ಮಾಡಿದ್ದರು.