ಚೆನ್ನೈ(ಜೂ.18): ಭಾರತ ಹಾಗೂ ಚೀನಾ ನಡುವಿನ ಗಡಿ ಬಿಕ್ಕಟ್ಟಿಗೆ ಭಾರತೀಯ ಸೇನೆ ಜೊತೆ ಪ್ರತಿಯೊಬ್ಬ ಭಾರತೀಯನು ಕೈಜೋಡಿಸುಬೇಕು ಎಂದು ಅಭಿಯಾನ ಆರಂಭವಾಗಿದೆ. ಸೇನೆ ಗುಂಡಿನ ಮೂಲಕ ಉತ್ತರ ನೀಡಿದರೆ, ಭಾರತೀಯ ನಾಗರೀಕ ಚೀನಿ ವಸ್ತುಗಳ ಬಹಿಷ್ಕರಿಸುವ ಮೂಲಕ ತಿರುಗೇಟು ನೀಡಬೇಕಿದೆ ಅನ್ನೋ ಕೂಗ ಜೋರಾಗಿದೆ. ಇಷ್ಟೇ ಅಲ್ಲ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ. ಆದರೆ ಚೀನಾ ದಾಳಿಗೆ 20 ಭಾರತೀಯ ಯೋಧರು ಹುತಾತ್ಮರಾದ ಬೆನ್ನಲ್ಲೇ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೈದ್ಯರೊಬ್ಬರು ಭಾರತೀಯ ಸೇನೆ ಹಾಗೂ ಪ್ರಧಾನಿ ಮೋದಿಯನ್ನು ವ್ಯಂಗ್ಯವಾಡಿ ಸರಿಯಾದ ಬೆಲೆ ತೆತ್ತಿದ್ದಾರೆ.

ಚೀನೀ ರಕ್ಕಸ ದಾಳಿಗೆ ಸಿಕ್ತು ಸಾಕ್ಷ್ಯ!

ಲಡಾಖ್ ಗಡಿಯಲ್ಲಿ ಚೀನಾ ದಾಳಿ ಮಾಡಿದ ಕಾರಣ ಭಾರತೀಯ 20 ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಯಾಗಿ ಭಾರತ ಸೇನೆ,  ಚೀನಾದ 35ಕ್ಕೂ ಸೈನಿಕರನ್ನು ಹೊಡೆದುರುಳಿಸಿದೆ. ಹುತಾತ್ಮರಾದ ಯೋಧರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಸಮಸ್ತ ಭಾರತೀಯರು ಕೆಚ್ಚೆದೆ ಹೋರಾಡಿದ ವೀರ ಸೈನಿಕರಿಗೆ ನಮನ ಸಲ್ಲಿಸುತ್ತಿದ್ದಾರೆ. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೈದ್ಯ ಮಧು ತೋಟಪಳ್ಳಿಲ್ ನಮ್ಮ ವೀರ ಸೈನಿಕರನ್ನು ಹಾಗೂ ಪ್ರಧಾನಿ ಮೋದಿಯನ್ನು ವ್ಯಂಗ್ಯವಾಡಿದ್ದಾರೆ.

ಸೆಪ್ಟೆಂಬರ್ 26ರಿಂದ ನವೆಂಬರ್ 08ರ ವರೆಗೂ ಐಪಿ​ಎಲ್‌?..

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದರು. ಮಧು ತೋಟಪಳ್ಳಿ ಮಾಡಿದ  ಪೋಸ್ಟ್ ವೈರಲ್ ಆಗಿತ್ತು. ಭಾರತೀಯರು ನೋವಿನಲ್ಲಿರುವಾಗಲೇ ಈ ರೀತಿ ವ್ಯಂಗ್ಯವಾಡಿದ CSK ಡಾಕ್ಟರ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಬೆದರಿಕೆ ಕೂಡ ಬಂದಿತ್ತು. ತಕ್ಷಣವೇ ಪೋಸ್ಟ್ ಡಿಲೀಟ್ ಮಾಡಿದ್ದರು. ಆದರೆ ಸ್ಕ್ರೀನ್ ಶಾಟ್ ಎಲ್ಲೆಡೆ ಹರಿದಾಡತೊಡಗಿತ್ತು.

ಇದರ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಕಳೆದ 10 ವರ್ಷದಿಂದ ತಂಡದ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಮಧು ತೋಟಪಳ್ಳಿಯನ್ನು ಅಮಾನತು ಮಾಡಿದೆ. ಸಿಎಸ್‌ಕೆ ತಂಡದ ನಾಯಕ ಎಂ.ಎಸ್.ಧೋನಿ. ಭಾರತೀಯ ಸೇನೆಯ ಟೆರಿಟೊರಿ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ. ಇನ್ನು ಭಾರತೀಯ ಸೇನೆ ಜೊತೆ ಸಾಮಾನ್ಯ ಯೋಧರಾಗಿ ಜಮ್ಮ ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸೇನೆಗೆ ಅತೀವ ಗೌರವ ನೀಡುವ ಧೋನಿ, ಮಧು ಪೋಸ್ಟ್‌ನಿಂದ ಅಸಮಾಧಾನ ಗೊಂಡಿದ್ದರು ಎನ್ನಲಾಗಿದೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತಕ್ಷಣವೇ ಮಧು ಅವರನ್ನು ಕಿತ್ತೆಸೆದಿದೆ.

CKS ನಿರ್ಧಾರದಿಂದ ದಿಕ್ಕೇ ತೋತದ ಡಾಕ್ಟರ್ ಕ್ಷಮೆ ಕೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅತೀ ದೊಡ್ಡ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಆದರೆ ಅಷ್ಟರಲ್ಲಿ ಕಾಲ ಮಿಂಚಿಹೋಗಿತ್ತು.