ನವದೆಹಲಿ(ಜೂ.18): ಭಾರತ ಹಾಗೂ ಚೀನಾ ನಡುವಿನ ಗಡಿ ಬಿಕ್ಕಟ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಲಡಾಕ್ ಪ್ರಾಂತ್ಯದಲ್ಲಿ ಭಾರತದ ಗಡಿಯೊಳಕ್ಕೆ ಪ್ರವೇಶಿಸಲು ಯತ್ನಿಸಿದ ಚೀನಾ ಯೋಧರ ಹಿಮ್ಮೆಟ್ಟಿಸುವಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಚೀನಾದ 35 ಸೈನಿಕರನ್ನು ಹೊಡೆದುರಳಿಸಿದೆ. ಈ ಘಟನೆ ಬಳಿಕ ಪರಿಸ್ಥಿತಿ ಗಂಭೀರವಾಗಿದೆ. ಭಾರತದಲ್ಲಿ ಚೀನಾ ಮಟ್ಟಹಾಕಲು ಕ್ರಮ ಕೈಗೊಳ್ಳುವಂತೆ ಆಗ್ರಹ ಹೆಚ್ಚಾಗಿದೆ. ಇಷ್ಟೇ ಅಲ್ಲ  ಚೀನಿ ವಸ್ತುಗಳ ಬಳಕೆ ನಿಷೇಧಿಸಲು ಸ್ವಯಂ ಪ್ರೇರಿತ ಕೂಗುಗಳು ಹೆಚ್ಚಾಗುತ್ತಿದೆ. ಇದೀಗ ಭಾರತೀಯ ಸಂಚಾರ್ ನಿಗಮ ಲಿಮಿಟೆಡ್( BSNL)ತನ್ನ ಎಲ್ಲಾ ಟೆಲಿಕಾಂ ಸರ್ವೀಸ್‌ಗಳಲ್ಲಿ ಚೀನಾ ವಸ್ತು ಬಳಕೆ ನಿಷೇಧಿಸಲು ಮುಂದಾಗಿದೆ.

ಕಲಬುರಗಿ: ಚೈನಾ ಮೇಡ್‌ ವಸ್ತುಗಳಿಗೆ ಬೆಂಕಿ..!.

ಭಾರತದ ಎಲ್ಲಾ ಭಾಗಗಳಲ್ಲಿ ತನ್ನ ಸರ್ವೀಸ್‌ನ್ನು 4Gಗೆ ಅಪ್‌ಗ್ರೇಡ್ ಮಾಡಲು ಮುಂದಾಗಿದೆ. ಅಪ್‌ಗ್ರೇಡೇಶನ್‌ಗೆ ಬಳಸಲಾಗುವು ಟಿಲಿಕಾಂ ಗೇರ್‌ಗೆ ಚೀನಾವನ್ನು ಅವಲಂಬಿಸಲಾಗಿತ್ತು. ಇದೀಗ BSNL 4Gಗೆ ಯಾವುದೇ ಚೀನಾ ವಸ್ತುಗಳನ್ನು ಬಳಸದಂತೆ ಭಾರತೀಯ ಟೆಲಿಕಾಂ ವಿಭಾಗ(DoT) ಸೂಚಿಸಿದೆ.

ರಣಹೇಡಿ ಚೀನಾ ಸೊಕ್ಕಡಗಿಸಲು ನಮ್ಮ ನಿಮ್ಮೆಲ್ಲರ ಕೈಯಲ್ಲೇ ಇದೆ ದಿವ್ಯಾಸ್ತ್ರ..!..

ಇಷ್ಟೇ ಅಲ್ಲ ಇತರ ಖಾಸಗಿ ಟೆಲಿಕಾಂ ಕಂಪನಿಗಳಿಗೂ ಚೀನಾ ವಸ್ತುಗಳನ್ನು ಬಳಸದಂತೆ ಭಾರತೀಯ ಟೆಲಿಕಾಂ ವಿಭಾಗ(DoT) ಮನವಿ ಮಾಡಿದೆ. ಟಿಲಿಕಾಂ ಕ್ಷೇತ್ರದಲ್ಲಿ ಚೀನಾ ವಸ್ತುಗಳ ಬಳಕೆಗೆ ಈ ಹಿಂದೇ ಆಕ್ಷೇಪಗಳು ವ್ಯಕ್ತವಾಗಿತ್ತು. ಟಿಲಿಕಾಂಗಳ ಮೂಲಕೇ ಎಲ್ಲಾ ಮಾಹಿತಿಗಳು ರವಾನೆಯಾಗುತ್ತವೆ. ಹಾಗೂ ಗೌಪ್ಯವಾಗಿ ಇಡಲಾಗುತ್ತದೆ. ಆದರೆ ಚೀನಾ ವಸ್ತುಗಳ ಬಳಕೆಯಿಂದ ಮಾಹಿತಿ ಸೋರಿಕೆ ಆತಂಕ ಉದ್ಭವಾಗಿತ್ತು. ಆದರೆ ಸುಲಭವಾಗಿ ಹಾಗೂ ಕಡಿಮೆ ಬೆಲೆಯಲ್ಲಿ ಚೀನಾ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಾಗುವ ಕಾರಣ ನೆಟ್‌ವರ್ಕಿಂಗ್‌ಗೆ ಚೀನಾ ವಸ್ತುಗಳ ಬಳಕೆಯಾಗುತ್ತಿತ್ತು.

ಇದೀಗ ಲಡಾಖ್ ಲಡಾಯಿ ಬಳಿಕ ಭಾರತದಲ್ಲಿ ಒಪ್ಪೋ ತನ್ನ 5G ಸ್ಮಾರ್ಟ್‌ಫೋನ್ ಲೈವ್ ಸ್ಟ್ರೀಮ್ ರದ್ದು ಮಾಡಿದೆ. ಆದರೆ ಫೋನ್ ಭಾರತದಲ್ಲಿ ಸದ್ದಿಲ್ಲದೆ ಬಿಡುಗಡೆಯಾಗಿದೆ. ಕ್ಸಿಯೋಮಿ, ಒಪ್ಪೋ, ರಿಯಲ್ ಮಿ ಹಾಗೂ ವಿವೋ ಭಾರತ ಮೊಬೈಲ್ ಮಾರುಕಟ್ಟೆಯಲ್ಲಿ ಶೇಕಡಾ 76ರಷ್ಟು ಆಕ್ರಮಿಸಿಕೊಂಡಿದೆ. ಹೀಗಾಗಿ ಇದೀಗ ಚೀನಾ ಫೋನ್‌ಗೆ ಬದಲಿಯಾಗಿ ಕಡಿಮೆ ಬೆಲೆಯ ಫೋನ್‌ಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗಲಿದೆ.