ಹೈದರಾಬಾದ್[ಆ.17]: ಹೈದರಾಬಾದ್‌ನಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮನೆಗೆ ಹೋಗಲು ಸೂಕ್ತ ದಾರಿ ಕಾಣದ ಯುವಕನೊಬ್ಬ ಬುದ್ಧಿ ಉಪಯೋಗಿಸಿ ಉಚಿತವಾಗಿ ತನ್ನ ಮನೆ ಸೇರಿದ್ದಾನೆ. ಅಷ್ಟಕ್ಕೂ ಆತ ಮಾಡಿದ್ದೇನು? Zomato ಫ್ರೀ ರೈಡ್ ನೀಡಿದ್ದೇಕೆ? ಇಲ್ಲಿದೆ ಇಂಟರೆಸ್ಟಿಂಗ್ ಕತೆ.

ಮುಸ್ಲಿಂ ಬೇಡ, ಹಿಂದೂ ಡೆಲಿವರಿ ಬಾಯ್ ಕಳ್ಸಿ ಎಂದ ಗ್ರಾಹಕ: Zomato ಉತ್ತರ ಮನಮೋಹಕ!

ಒಬೇಶ್ ಕೊಮಿರಿಸೆಟ್ಟಿ ಎಂಬಾತ ಮನೆ ತಲುಪಲು Zomato ಸಹಾಯ ಪಡೆದಿದ್ದಾನೆ. ಈ ಕುರಿತಾಗಿ ಅವರು ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಸವಿಸ್ತಾರವಾಗಿ ಬರೆದುಕೊಂಡಿದ್ದು, ಸದ್ಯ ಒಬೇಶ್ ೖಡಿಯಾ ಎಲ್ಲೆಡೆ ವೈರಲ್ ಆಗುತ್ತಿದೆ.

ಒಮ್ಮೊಮ್ಮೆ ಮನೆಯೂಟ ಮಾಡಿ: Zomato ಟ್ವೀಟ್ ಮಾಡಿದೆ ಮೋಡಿ!

ಅದು ರಾತ್ರಿ 11.50 ಸಮಯ, ನಾನಿನ್ನೂ ಇನ್ ಆರ್ಬಿಟ್ ಮಾಲ್ ರಸ್ತೆಯಲ್ಲಿ ಆಟೋಗಾಗಿ ಕಾಯುತ್ತಿದ್ದೆ. ಆದರೆ ಆಟೋಗಳು ಸಿಗದಿದ್ದಾಗ ಉಬರ್ ಆ್ಯಪ್ ಓಪನ್ ಮಾಡಿ ಕ್ಯಾಬ್ ಬುಕ್ ಮಾಡಲು ಮುಂದಾದರೆ. ಆದರೆ ಅದು ದುಬಾರಿ ಬೆಲೆ ತೋರಿಸುತ್ತಿತ್ತು. ತುಂಬಾ ತಡವಾಗಿದ್ದರಿಂದ ಹಸಿವು ಕೂಡಾ ಆಗುತ್ತಿತ್ತು. ಹೀಗಾಗಿ Zomato ಆ್ಯಪ್ ಓಪನ್ ಮಾಡಿ ಹತ್ತಿರದಲ್ಲಿರುವ ಹೋಟೆಲ್ ಗಾಗಿ ಹುಡುಕಾಡಿದೆ. ನಾನಿದ್ದ ಪರಿಸರದ ಆಸುಪಾಸಿನಲ್ಲಿ ದೋಸೆ ಜಂಕ್ಷನ್ ಒಂದಿತ್ತು. ಅಲ್ಲಿಂದ ಎಗ್ ದೋಸೆ ಆರ್ಡರ್ ಮಾಡಿದೆ.

ವಿಶೇಷ ಚೇತನ Zomato ಉದ್ಯೋಗಿಗೆ ಸಿಕ್ತು ಎಲೆಕ್ಟ್ರಿಕ್ ವಾಹನ!

ನನ್ನ ಆರ್ಡರ್ ಸ್ವೀಕೃತವಾಗಿತ್ತು. ಡೆಲಿವರಿ ಬಾಯ್ ಸೋಸೆ ಜಂಕ್ಷನ್ ಗೆ ನನ್ನ ಆರ್ಡರ್ ತೆಗೆದುಕೊಳ್ಳಲು ಹೊರಟಿದ್ದ. ಕೂಡಲೇ ನಾನು ಆತನಿಗೆ ಕರೆ ಮಾಡಿ ಇದು ನಾನು ಮಾಡಿದ ಆರ್ಡರ್ ಎಂದು ತಿಳಿಸಿ. ನನ್ನನ್ನು ಮನೆಗೆ ಡ್ರಾಪ್ ಮಾಡುವಂತೆ ಮನವಿ ಮಾಡಿಕೊಂಡೆ. ಹೀಗಾಗಿ ಆತ ಕೊಟ್ಟ ಆರ್ಡರ್ ಜೊತೆ ನಾನು ಕೊಟ್ಟ ಲೊಕೇಷನ್[ನನ್ನ ರೂಂ ಅಡ್ರೆಸ್]ಗೆ ನನ್ನನ್ನು ತಲುಪಿಸಿದ. ಹೊರಡುವ ವೇಳೆ ಮುಗ್ಧತೆಯಿಂದ 'ಸರ್ ದಯವಿಟ್ಟು 5 ಸ್ಟಾರ್ ಕೊಡಿ' ಎಂದು ಕೇಳಿದ. ಇದಕ್ಕೆ ಪ್ರತ್ಯುತ್ತರವಾಗಿ ನಾನು ಸರಿ ಎಂದೆ ಎಂದು ಬರೆದುಕೊಂಡಿದ್ದಾರೆ.

ಆಹಾರ ಪಾರ್ಸೆಲ್‌ ತಲುಪಿಸಲು ಈಗ ಡೆಲಿವರಿ ಗರ್ಲ್ಸ್!

ಈ ಯುವಕನ ಈ ಐಡಿಯಾಗೆ ಖುದ್ದು Zomato ತಲೆ ಬಾಗಿದೆ. ಇದರೊಂದಿಗೆ ತಾವು ಭಾರತದ 500 ನಗರಗಳಿಗೆ ಪುಡ್ ಡೆಲಿವರಿ ಸರ್ವಿಸ್ ವಿಸ್ತರಿಸಿರುವುದಾಗಿಯೂ ತಿಳಿಸಿದ್ದಾರೆ. ಸದ್ಯ Zomato 1.5ಲಕ್ಷ ರೆಸ್ಟೋರೆಂಟ್ ಪಾರ್ಟ್ನರ್ಸ್ ಹೊಂದಿದೆ. 

ಅನಾಥ ಮಕ್ಕಳ ಪಾಲಿನ ಅನ್ನದಾತ ಈ Zomato ಡೆಲಿವರಿ ಬಾಯ್!