1) ‘ಶೀಘ್ರದಲ್ಲೇ ಎಚ್‌ಡಿಕೆ ಮತ್ತೆ ಕರ್ನಾಟಕ ಸಿಎಂ’

ಸದ್ಯ ದೋಸ್ತಿ ಸರ್ಕಾರ ಉರುಳಿ ಬಿಜೆಪಿ ಆಡಳಿತಕ್ಕೆ ಏರಿ ಅಧಿಕಾರ ನಿರ್ವಹಣೆ ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಮತ್ತೆ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿಯಲಾಗಿದೆ. 

2) ಮೋದಿ ಸಾಹಬ್ ದಯವಿಟ್ಟು ಆಶ್ರಯ ನೀಡಿ: ಕಣ್ಣೀರಿಟ್ಟ ಇಮ್ರಾನ್ ಪಕ್ಷದ ನಾಯಕ!

 ಭಾರತದ ವಿರುದ್ಧ ನಿರಂತರ ಬೆಂಕಿಯುಗುಳುತ್ತಿದ್ದ ಪಾಕಿಸ್ತಾನದ ವಿರುದ್ಧ ಸದ್ಯ ಅಲ್ಲಿನ ನಾಗರಿಕರೇ ಧ್ವನಿ ಎತ್ತಲಾರಂಭಿಸಿದ್ದಾರೆ. ಪಕ್ ಪ್ರಧಾನಿ ಇಮ್ರಾನ್ ಖಾನ್ ಪಕ್ಷ PTI ಶಾಸಕರಾಗಿದ್ದ ಬಲ್ ದೇವ್ ಕುಮಾರ್ ಸಿಂಗ್ ಸದ್ಯ ಪಾಕಿಸ್ತಾನಕ್ಕೆ ಗುಡ್ ಬೈ ಹೇಳಿ ಭಾರತಕ್ಕೆ ಬಂದಿದ್ದಾರೆ. ಪಂಜಾಬ್ ಗೆ ಮರಳಿರುವ ಸಿಂಗ್ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ಹೇಗೆ ದೌರ್ಜನ್ಯ ನಡೆಯುತ್ತಿದೆ ಎಂಬುವುದನ್ನು ಬಹಿರಂಗಪಡಿಸಿದ್ದಾರೆ. 

3) ಕಾಂಗ್ರೆಸ್‌ಗೆ ಮತ್ತೆ ಶಾಕ್: ಕೈಗೆ ಗುಡ್ ಬೈ ಎಂದ ಸ್ಟಾರ್ ನಟಿ!

ರಾಜೀನಾಮೆಯಿಂದ ಹಲವು ನಾಯಕರನ್ನು ಕಳೆದುಕೊಂಡಿದ್ದ ಕಾಂಗ್ರೆಸ್ ಗೆ ಮತ್ತೊಂದು ಶಾಕ್ ತಗುಲಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದ ಬಾಲಿವುಡ್ ನಟಿ ಉರ್ಮಿಳಾ ಮಾತೋಂಡ್ಕರ್ ಮಂಗಳವಾರದಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

4) ದಟ್ಟಾರಣ್ಯದಲ್ಲಿ ಜೀಪಿಂದ ಬಿದ್ದರೂ ಅಂಬೆಗಾಲಿಟ್ಟು ಬಂದ ಮಗು!

ಆಯುಷ್ಯ ಗಟ್ಟಿಇದ್ದರೆ ಯಮನೂ ಹತ್ತಿರ ಸುಳಿಯಲಾರ ಎನ್ನುವುದಕ್ಕೆ ಈ ಘಟನೆ ಒಂದು ನೈಜ ಉದಾಹರಣೆ. ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್‌ ಪ್ರದೇಶದ ದಟ್ಟಅರಣ್ಯದ ಮಧ್ಯೆ ಹೋಗುತ್ತಿದ್ದಾಗ ಜೀಪ್‌ನಿಂದ ಬಿದ್ದ ಮಗುವೊಂದು ಪವಾಡ ಸದೃಶ ರೀತಿಯಲ್ಲಿ ಸಾವಿನ ದವಡೆಯಿಂದ ಪಾರಾಗಿದೆ.

5) ಉಗ್ರ ರೂಪ ತಾಳಿದ ಕೋಚ್ ಶಾಸ್ತ್ರಿ; ಟೀಂ ಇಂಡಿಯಾ ಕ್ರಿಕೆಟಿಗರಿಗ ಎದುರಾಯ್ತು ಸಂಕಷ್ಟ!

ಟೀಂ ಇಂಡಿಯಾ ಕೋಚ್ ಆಗಿ ಪುನರ್ ಆಯ್ಕೆಯಾಗಿರುವ ರವಿ ಶಾಸ್ತ್ರಿ 2ನೇ ಅವಧಿಯ ಮೊದಲ ಸವಾಲು ಸೌತ್ ಆಫ್ರಿಕಾ ವಿರುದ್ದದ ಸರಣಿ. ಸೆ.15 ರಿಂದ ಟೂರ್ನಿ ಆರಂಭಗೊಳ್ಳಲಿದೆ. 2ನೇ ಬಾರಿ ಕೋಚ್ ಹುದ್ದೆ ಅಲಂಕರಿಸಿರುವ ಶಾಸ್ತ್ರಿ ತಮ್ಮ ಹಿಡಿತ ಬಿಗಿಗೊಳಿಸಿದ್ದಾರೆ.  ಇದು ಹಲವು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸಂಕಷ್ಟ ತಂದೊಡ್ಡಿದೆ.

6) ಬಿಗ್ ಬಾಸ್ ಸೀಸನ್-7; ಪ್ರಸಾರದ ಡೇಟ್ ರಿವೀಲ್ ಮಾಡಿದ ಕಿಚ್ಚ!

ಕಿರುತೆರೆ ಮೇಲೆ ಕಿಚ್ಚನನ್ನು ನೋಡುವುದೇ ಒಂದು ಮಜಾ. ವಾರದ ಕೊನೆಯಲ್ಲಿ ಯಾರು ಯಾರು ಎಲಿಮಿನೇಟ್ ಆಗುತ್ತಾರೆ? ಯಾರು ಸೇಫ್ ಆಗುತ್ತಾರೆ? ಕಿಚ್ಚ ಧರಿಸಿರುವ ಔಟ್ ಫಿಟ್ ಯಾವುದು? ಎಂದೆಲ್ಲಾ ಪ್ರಶ್ನೆ ಹಿಡಿದು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.


7) ಯಶ್ ಬಳಸಿದ #Boss ಟ್ಯಾಗ್: ಜೋಡೆತ್ತಿನ ಫ್ಯಾನ್ಸ್ ವಾರ್ ಶುರು!

ಬಾಕ್ಸ್ ಆಫೀಸ್ ಸುಲ್ತಾನ್ ಹಾಗೂ ರಾಕಿಂಗ್ ರಾಕಿ ಬಾಯ್ ಸ್ಯಾಂಡಲ್‌ವುಡ್ ಪಿಲ್ಲರ್‌ಗಳಿದ್ದಂತೆ. ಮಂಡ್ಯ ಚುನಾವಣೆಯಲ್ಲಿ ಮಂದರ್ ಇಂಡಿಯಾ ಸುಮಲತಾಗೆ ಒಂದಾದ ಜೋಡೆತ್ತುಗಳು ಇದೀಗ ಮತ್ತೆ ಅಭಿಮಾನಿಗಳ ಬಿಗ್ ವಾರ್ ಫೈಟಿನಲ್ಲಿ ಸಿಲುಕಿ ಹಾಕಿಕೊಂಡಂತೆ ಕಾಣಿಸುತ್ತದೆ.

8) ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಕೆ ಅಸಾಧ್ಯ: ESA ಅಭಿಮತ!

ಇಸ್ರೋದ ಚಂದ್ರಯಾನ-2 ಯೋಜನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿರುವ ಯುರೋಪಿಯನ್ ಸ್ಪೇಸ್ ಏಜೆನ್ಸಿ, ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸುವುದು ಅಸಾಧ್ಯ ಎಂಧು ಅಭಿಪ್ರಾಯಪಟ್ಟಿದೆ.

9) ಹವಾಯಿ ಚಪ್ಪಲ್, ಸ್ಲಿಪ್ಪರ್ ಹಾಕಿ ದ್ವಿಚಕ್ರ ವಾಹನ ಓಡಿಸಿದರೆ ಫೈನ್!


ಹೊಸ ನಿಯಮ ಜಾರಿಯಾದ ಬಳಿಕ ವಾಹನ ಹತ್ತೊ ಮೊದಲು ಸವಾರರು ಎರಡೆರಡು ಬಾರಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಕಾರಣ ದುಬಾರಿ ದಂಡಕ್ಕಿಂತ ನಿಯಮ ಪಾಲನೆ ಲೇಸು ಅನ್ನೋ ಅಭಿಪ್ರಾಯ ಮೂಡುತ್ತಿದೆ. ಇದೀಗ ದಾಖಲೆ, ಸಿಗ್ನಲ್ ಜಂಪ್ ಮಾತ್ರವಲ್ಲ ನೀವು ಧರಿಸೋ ಚಪ್ಪಲ್‌ನಿಂದಲೂ ನಿಮಗೆ ದಂಡದ ಹೊರೆ ಬೀಳಲಿದೆ.

10) ರಸ್ತೆ ರಿಪೇರಿ ಬಳಿಕ ಹೊಸ ರೂಲ್ಸ್ ಜಾರಿ; ನಿಟ್ಟುಸಿರು ಬಿಟ್ಟ ಸವಾರರು!

ಹೊಸ ಟ್ರಾಫಿಕ್ ನಿಯಮ ಜಾರಿಯಾಗುತ್ತಿದ್ದಂತೆ ಪರ ವಿರೋಧ ಕೇಳಿ ಬಂದಿದೆ. ಇದರಲ್ಲಿ ರಸ್ತೆ ರಿಪೇರಿ ಮಾಡಿ ಹೊಸ ನಿಯಮ ಜಾರಿ ಮಾಡಿ ಅನ್ನೋ ಒತ್ತಾಯ  ಕೇಳಿ ಬಂದಿತ್ತು. ಇದೀಗ ಈ ಮಾತನ್ನು ಗಂಭೀರವಾಗಿ ಪರಿಗಣಿಸಿರುವ ನೆರೆ ರಾಜ್ಯ ರಸ್ತೆ ರಿಪೇರಿ ಬಳಿಕ ಹೊಸ ನಿಯಮ ಜಾರಿ ಮಾಡಲು ಮುಂದಾಗಿದೆ.