ಬಾಕ್ಸ್ ಆಫೀಸ್ ಸುಲ್ತಾನ್ ಹಾಗೂ ರಾಕಿಂಗ್ ರಾಕಿ ಬಾಯ್ ಸ್ಯಾಂಡಲ್‌ವುಡ್ ಪಿಲ್ಲರ್‌ಗಳಿದ್ದಂತೆ. ಮಂಡ್ಯ ಚುನಾವಣೆಯಲ್ಲಿ ಮಂದರ್ ಇಂಡಿಯಾ ಸುಮಲತಾಗೆ ಒಂದಾದ ಜೋಡೆತ್ತುಗಳು ಇದೀಗ ಮತ್ತೆ ಅಭಿಮಾನಿಗಳ ಬಿಗ್ ವಾರ್ ಫೈಟಿನಲ್ಲಿ ಸಿಲುಕಿ ಹಾಕಿಕೊಂಡಂತೆ ಕಾಣಿಸುತ್ತದೆ.

ಜಗನ್ನಾಥ್ ಚಿತ್ರಕ್ಕೆ ಯಶ್ ಬದಲು ವಿಜಯ್ ದೇವರಕೊಂಡ ಪಕ್ಕಾ!

ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಯಶ್ ಪ್ರಚಾರ ಮಾಡುತ್ತಿರುವ ‘Beardo Thunder’ ಎಂಬ ಗಡ್ಡದ ಎಣ್ಣೆಯ ವೀಡಿಯೋ ಅಪ್‌ಲೋಡ್ ಮಾಡಿದ್ದರು. ಇದಕ್ಕೆ #BeardoBoss ಎಂದು ಟ್ಯಾಗ್ ಬಳಸಿದ್ದರು. ಈ ಪೋಸ್ಟಿಗೆ ಯಶ್ ಅಭಿಮಾನಿಗಳು #BeardoBoss ಎಂದು ಕೊಂಡಾಡಿದರು. ಅಲ್ಲಿಂದಲೇ ಆರಂಭವಾಗಿದೆ ಯಶ್ ಹಾಗೂ ದರ್ಶನ್ ಅಭಿಮಾನಿಗಳ ವಾರ್. ಸ್ಯಾಂಡಲ್‌ವುಡ್‌ಗೆ ದರ್ಶನ್ ಬಾಸ್ ಎಂದು ಬಲವಾಗಿ ನಂಬಿರುವ ಅಭಿಮಾನಿಗಳು ಈ ಬಗ್ಗೆ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆದುಕೊಳ್ಳಲು ಆರಂಭಿಸಿದ್ದಾರೆ.

 

 
 
 
 
 
 
 
 
 
 
 
 
 

Beardo's THUNDER is about to STRIKE ⚡ on the 16th of September, STAY TUNED! @beardo.official #BeardoThunder #BeardoBoss

A post shared by Yash (@thenameisyash) on Sep 9, 2019 at 4:31am PDT

ಇವರಿಬ್ಬರ ಮಧ್ಯೆ ವಾರ್ ಏಕೆ?

ಯಶ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಈ ಮುಂಚಿನಿಂದಲೂ BOSS ವಿಷಯವಾಗಿ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಅಭಿಮಾನಿಗಳು ಈಗಾಗಲೇ ತಮ್ಮ ನಟನಿಗೆ ಡಿ ಬಾಸ್ ಪಟ್ಟ ಕೊಟ್ಟಾಗಿದೆ. ಇದನ್ನು ಅಪ್ಪಿ ತಪ್ಪಿ ಯಶ್ ಫ್ಯಾನ್ಸ್ ಬಳಸಿದರೆ ಸಿಕ್ಕಾಪಟ್ಟೆ ಸಿಟ್ಟಾಗುತ್ತಾರೆ. ಈ ಆಕ್ರೋಶ ವಿಧ ವಿಧವಾಗಿ ಅಭಿವ್ಯಕ್ತಗೊಳ್ಳುತ್ತದೆ. ಅಭಿಮಾನಿಗಳ ನಡುವೆ ನಡೆಯುವ ಈ ಗುದ್ದಾಟಕ್ಕೆ ನಟರು ಸಾಮಾನ್ಯವಾಗಿ ಮೌನವಾಗಿರುತ್ತಾರೆ.

ಒಟ್ಟಿನಲ್ಲಿ ನೆಚ್ಚಿನ ನಟನ ಹೆಸರಲ್ಲಿ ಫ್ಯಾನ್ಸ್ ಕಿಚ್ಚಾಡಿಕೊಳ್ಳುತ್ತಾರೆ. ಅಭಿಮಾನಿಗಳ ಹುಚ್ಚಿಗೆ ಏನು ಹೇಳಬೇಕೋ ಗೊತ್ತಿಲ್ಲ. ಬೇಡದ ವಿಷಯಗಳಿಗೆ ಗರಂ ಆಗುವ ಬದಲು, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡು, ತಮ್ಮ ನೆಚ್ಚಿನ ನಟನ ಮೇಲಿನ ಪ್ರೀತ್ಯಾದರವನ್ನು ಸೂಚಿಸಿದರೆ ಸೂಕ್ತ ಅಲ್ಲವೇ?