ರೈತರ ಜತೆ ಕೇಂದ್ರ ಸರ್ಕಾರ ಮಾತುಕತೆ ವಿಫಲಗೊಂಡ ಕಾರಣ ಭಾರತ್ ಬಂದ್ ಖಚಿತಗೊಂಡಿದೆ. ಕೊರೋನಾ ವೈರಸ್ ಕಾರಣ ಈ ಬಾರಿ ಹೊಸ ವರ್ಷಾಚರಣೆ ಸಂಭ್ರಮಕ್ಕೆ ಬ್ರೇಕ್ ಹಾಗೂ ರಾಜ್ಯ ಸರ್ಕಾರ ನಿರ್ಧರಿಸಿದೆ. ತುಂಬಾ ಹೇಳೋಕಿದೆ, ಎಲ್ಲಿಂದ ಶುರು ಮಾಡ್ಲಿ ಎಂದ ಸನ್ನಿಲಿಯೋನ್, ಕುಮಾರಸ್ಮಾಮಿ ಕಣ್ಣೀರ ಕಹಾನಿ ಸೇರಿದಂತೆ ಡಿಸೆಂಬರ್ 6ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.
ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯ ಗೆದ್ದು ಹಲವು ದಾಖಲೆ ಬರೆದ ಕೊಹ್ಲಿ ಸೈನ್ಯ!...
ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ಭಾರತ 6 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ ಟಿ20 ಸರಣಿ ಕೂಡ ವಶಪಡಿಸಿಕೊಂಡಿದೆ. ಇಷ್ಟೇ ಅಲ್ಲ ಈ ಗೆಲುವಿನ ಮೂಲಕ ಟೀಂ ಇಂಡಿಯಾ ದಾಖಲೆಯನ್ನೂ ಬರೆದಿದೆ. ಈ ಕುರಿತ ವಿವರ ಇಲ್ಲಿದೆ.
ರೈತರ ಸಭೆಯಲ್ಲಿ ಹೈಡ್ರಾಮಾ: ಬೇಡಿಕೆ ಒಪ್ಪದ್ದಕ್ಕೆ ಬಹಿಷ್ಕಾರದ ಬೆದರಿಕೆ!...
ಕೃಷಿ ಕಾಯ್ದೆ ಬಿಕ್ಕಟ್ಟು ಇತ್ಯರ್ಥಕ್ಕೆ ಶನಿವಾರ ಇಲ್ಲಿ ನಡೆದ ರೈತ ಸಂಘಟನೆಗಳು ಮತ್ತು ಕೇಂದ್ರ ಸಚಿವರ ನಡುವಿನ ಸಭೆ ನಾಟಕೀಯ ಘಟನೆಗಳಿಗೆ ಸಾಕ್ಷಿಯಾಯಿತು. ಕಾಯ್ದೆ ರದ್ದಿಗೆ ರೈತರು ಪಟ್ಟು ಹಿಡಿದರೆ, ಸರ್ಕಾರ ತಿದ್ದುಪಡಿಗೆ ಒಲವು ವ್ಯಕ್ತಪಡಿಸಿತು.
ಕೇಂದ್ರ, ರೈತರ ಮಾತುಕತೆ ಮತ್ತೆ ವಿಫಲ, ರೈತರಿಂದ ಭಾರತ್ ಬಂದ್ ಖಚಿತ!...
ಕೇಂದ್ರದ 3 ನೂತನ ಕೃಷಿ ಕಾಯ್ದೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕಳೆದ 10 ದಿನಗಳಿಂದ ದೆಹಲಿಗೆ ಸಂಪರ್ಕ ಕಲ್ಪಿಸುವ 5 ಗಡಿಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆ ಕೇಂದ್ರ ಸರ್ಕಾರ ಶನಿವಾರ ನಡೆಸಿದ ಐದನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ.
ಹೊಸ ವರ್ಷಾಚರಣೆಗೆ ಬ್ರೇಕ್: ಸಾರ್ವಜನಿಕ ಸಂಭ್ರಮಕ್ಕೆ ನಿರ್ಬಂಧ!...
ಕೋವಿಡ್-19 ಎರಡನೇ ಅಲೆ ಆತಂಕದ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯದಲ್ಲಿ ಸಾರ್ವಜನಿಕವಾಗಿ ಹೊಸ ವರ್ಷಾಚರಣೆಗೆ ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಈ ವಿಚಾರವನ್ನು ಸ್ವತಃ ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ತುಂಬಾ ಹೇಳೋಕಿದೆ, ಎಲ್ಲಿಂದ ಶುರು ಮಾಡ್ಲಿ ಎಂದ್ರು ಸನ್ನಿಲಿಯೋನ್...
ಬಾಲಿವುಡ್ ನಟಿ ಸನ್ನಿ ಲಿಯೋನ್ ಕ್ಯೂಟ್ ಕ್ಯೂಟ್ ಫೋಟೋ ಶೇರ್ ಮಾಡುತ್ತಾರೆ. ಮುಂಬೈಗೆ ಬಂದ ನಟಿ ಹೇಗಿದ್ದಾರೆ ನೋಡಿ
ರಾತ್ರೋ ರಾತ್ರಿ ಅವರ ಜೊತೆ ಸೇರಿಕೊಂಡ್ರು ಕುಮಾರಸ್ವಾಮಿ-ಈಗ ಕಣ್ಣಿರ್ ಹಾಕ್ತಿದಾರೆ...
ರಾತ್ರೋ ರಾತ್ರಿ ಹೋಗಿ ಅವರೊಂದಿಗೆ ಸೇರಿಕೊಂಡ್ರು. ಈಗ ಕಣ್ಣೀರು ಹಾಕುತಿದ್ದಾರೆ. ಇನ್ನಾದರೂ ಅವರಿಗೆ ಒಳ್ಳೆಯದಾಗಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬಗ್ಗೆ ವ್ಯಂಗ್ಯ ಮಾಡಲಾಗಿದೆ.
ಕೊರೋನಾ ಆರ್ಥಿಕ ಹೊರೆ: ಈ ದೇಶದಲ್ಲಿ ಶ್ರೀಮಂತರ ಮೇಲೆ ತೆರಿಗೆ!...
ಕೊರೋನಾ ವೈರಸ್ ಸೃಷ್ಟಿಸಿದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅರ್ಜೆಂಟೀನಾ ಸರ್ಕಾರ ಶ್ರೀಮಂತರ ಮೇಲೆ ತೆರಿಗೆ ವಿಧಿಸುವ ತೀರ್ಮಾನ ಕೈಗೊಂಡಿದೆ.
ಜಾಗ್ವಾರ್ to BMW; ಕಿಚ್ಚ ಸುದೀಪ್ ಬಳಿ ಇರುವ ದುಬಾರಿ ಕಾರುಗಳ ಪಟ್ಟಿ!...
ಸ್ಯಾಂಡಲ್‌ವುಡ್ ಸ್ಟಾರ್ ನಟ, ಹಿಂದಿ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲೂ ಅಪಾರ ಜನಮನ್ನಣೆಗಳಿಸಿರುವ ನಟ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಕಿಚ್ಚ ಸುದೀಪ್ ಬಳಿ ಎಷ್ಟು ಕಾರುಗಳಿವೆ? ಅಭಿಮಾನಿಗಳಲ್ಲಿರುವ ಈ ಕುತೂಹಲ ಹಲವು ಬಾರಿ ಚರ್ಚೆಗೆ ಒಳಗಾಗಿದೆ. ಸುದೀಪ್ ಕೆಲ ಸಂದರ್ಭಗಳಲ್ಲಿ ತಮ್ಮ ದುಬಾರಿ ಕಾರುಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಮದುಮಗಳ ಲಂಗದೊಳಗೆ ನುಗ್ಗಿದ ಸ್ನೇಹಿತರು; ಸತ್ಯ ತಿಳಿಯಲು ಫೋಟೋ ನೋಡಿ!...
ವಿವಾಹ ಪೂರ್ವ ಶಾಸ್ತ್ರಗಳಲ್ಲಿ ಭಾಗಿಯಾಗಿರುವ ನಾಗಬಾಬು ಪುತ್ರಿ ನಿಹಾರಿಕಾ ಶೇರ್ ಮಾಡಿಕೊಂಡ ಡಿಫರೆಂಟ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್....
'ಸಿದ್ದರಾಮಯ್ಯ ಹೋರಾಟದ ನೇತೃತ್ವ ವಹಿಸಿಕೊಳ್ಳಲಿ, RSS, ಈಶ್ವರಪ್ಪ ಯಾಕೆ ಬೇಕು?'...
ಮಾಜಿ ಸಿಎಂ ಸಿದ್ದರಾಮಯ್ಯನವರೇ ಬಂದು ಹೋರಾಟದ ನೇತೃತ್ವ ವಹಿಸಿಕೊಳ್ಳಲಿ. ಆರ್‌ಎಸ್‌ಎಸ್, ಈಶ್ವರಪ್ಪ ಯಾಕೆ ಬೇಕು? ಆತನೇ ನೇತೃತ್ವ ವಹಿಸಿಕೊಂಡರೆ ಈಶ್ವರಪ್ಪನೂ ಹೋಗುತ್ತಾನೆ. ಆರ್‌ಎಸ್‌ಎಸ್ ಕೂಡ ಹೋಗುತ್ತೆ ಎಂದು ಎಸ್ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಕೆ ವಿರೂಪಾಕ್ಷಪ್ಪ ಹೇಳಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 6, 2020, 6:30 PM IST