ಜಾಗ್ವಾರ್ to BMW; ಕಿಚ್ಚ ಸುದೀಪ್ ಬಳಿ ಇರುವ ದುಬಾರಿ ಕಾರುಗಳ ಪಟ್ಟಿ!
First Published Dec 6, 2020, 2:29 PM IST
ಸ್ಯಾಂಡಲ್‌ವುಡ್ ಸ್ಟಾರ್ ನಟ, ಹಿಂದಿ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲೂ ಅಪಾರ ಜನಮನ್ನಣೆಗಳಿಸಿರುವ ನಟ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಕಿಚ್ಚ ಸುದೀಪ್ ಬಳಿ ಎಷ್ಟು ಕಾರುಗಳಿವೆ? ಅಭಿಮಾನಿಗಳಲ್ಲಿರುವ ಈ ಕುತೂಹಲ ಹಲವು ಬಾರಿ ಚರ್ಚೆಗೆ ಒಳಗಾಗಿದೆ. ಸುದೀಪ್ ಕೆಲ ಸಂದರ್ಭಗಳಲ್ಲಿ ತಮ್ಮ ದುಬಾರಿ ಕಾರುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ಬಳಿ ಇರುವ ದುಬಾರಿ ಕಾರುಗಳ ಕುರಿತ ವಿವರ ಇಲ್ಲಿದೆ.

ಕಿಚ್ಚ ಸುದೀಪ್ ಮಲ್ಟಿಟ್ಯಾಲೆಂಟೆಡ್ ನಟ. ನಿರ್ದೇಶಕ, ಸ್ಕ್ರೀನ್‌ರೈಟರ್, ನಿರ್ಮಾಪಕ, ಟಿವಿ ನಿರೂಪಕ, ಅದ್ಭುತ ಕ್ರಿಕೆಟಿಗ ಹೀಗೆ ಸುದೀಪ್ ಪ್ರತಿಭಾ ಕೌಶಲ್ಯದ ಪಟ್ಟಿ ಬೆಳೆಯುತ್ತಲೇ ಹೋಗುತ್ತೆ.

ಕನ್ನಡದ ಅಭಿನಯ ಚಕ್ರವರ್ತಿ ಅನ್ನೋ ಬಿರುದು ಪಡೆದಿರುವ ಸುದೀಪ್, ಹಿಂದಿ, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡ ಅಭಿಮಾನಿಗಳ ಮನ ಗೆದ್ದಿದ್ದಾರೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?