ಕೋಲಾರ (ಡಿ.06) :  ಸಿದ್ದರಾಮಯ್ಯ ನವರು ಮೊದಲಿಂದಲೂ ಎಲ್ಲರಿಗೂ ಮೋಸ ಮಾಡುತ್ತಿದ್ದಾರೆ. ಅದು ಕುಮಾರಸ್ವಾಮಿಯವರಿಗೆ ಈಗ ಗೊತ್ತಾಗುತ್ತಿದೆ ಎಂದು ಸಂಸದ ಎಸ್ ಮುನಿಸ್ವಾಮಿ ಹೇಳಿದರು.

ಕೋಲಾರದಲ್ಲಿ ಮಾತನಾಡಿದ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ, ಕುಮಾರಸ್ವಾಮಿಯವರು ಸಹ ಬಿಜೆಪಿಗೆ ಹಿಂದೆ ಮೋಸ ಮಾಡಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ರಾತ್ರೋ ರಾತ್ರಿ ಹೋಗಿ‌ ಅವರೊಂದಿಗೆ ಸೇರಿಕೊಂಡ್ರು. ಈಗ ಕಣ್ಣೀರು ಹಾಕುತಿದ್ದಾರೆ.

ದೇಶದಲ್ಲಿ ಕಾಂಗ್ರೆಸ್ ಕೇವಲ ಸರ್ವನಾಶ ಮಾತ್ರ ಮಾಡಿದೆ. ಈಗಲೂ ಕುಮಾರಸ್ವಾಮಿ ಯವರು ತಮ್ಮ‌ನಿಲುವಿಗೆ ಬದ್ದರಾಗಿದ್ದರೆ ಒಳ್ಳೆಯದು. ಅವರು ಕಾಂಗ್ರೆಸ್ ನೊಂದಿಗೆ ಕೈಜೋಡಿಸದೇ ಇದ್ದರಿದ್ದರೆ ಕನಿಷ್ಟ ಮೂರು ಎಂ ಪಿ ಸ್ಥಾನಗಳನ್ನು ಗೆಲ್ಲುತಿದ್ದರು ಎಂದರು.

ಸಂಪುಟ ವಿಸ್ತರಣೆ: ಕೈತೊಳೆದುಕೊಂಡ ಉಸ್ತುವಾರಿ, ಬಿಎಸ್‌ವೈಗೆ ಜವಾಬ್ದಾರಿ! ...

ದೇಶದ ಹಿತ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಅವರು ಎಚ್ಚೆತ್ತುಕೊಂಡು ಬಿಜೆಪಿಯೊಂದಿಗೆ ಕೈಜೋಡಿಸಲಿ. ಬಿಜೆಪಿಯೊಂದಿಗೆ ಇರುತಿದ್ದರೆ ಈಗಲು ಮುಖ್ಯಮಂತ್ರಿ ಆಗಿರುತಿದ್ದರೇನೋ ಎಂದು ಮುನಿಸ್ವಾಮಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕುರಿತು ವ್ಯಂಗ್ಯವಾಡಿದ್ದಾರೆ.