ಕೊರೋನಾ ಸೋಂಕಿತರಿಗೆ ಮಾತ್ರೆ ಭಾಗ್ಯ, ಮತ್ತೋರ್ವ ಬಾಲಿವುಡ್ ನಟನಿಗೆ ಅನಾರೋಗ್ಯ? ಮೇ.01ರ ಟಾಪ್ 10 ಸುದ್ದಿ!
ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಇದೀಗ ಸೋಂಕಿತರ ಚಿಕಿತ್ಸೆಗೆ ಭಾರತದಲ್ಲಿ ಮಾತ್ರೆ ರೆಡಿಯಾಗಿದೆ. ಪ್ರಯೋಗಕ್ಕಾಗಿ ಕೇಂದ್ರ ಅನುಮಿತಾಗಿ ಕಾಯುತ್ತಿದೆ. ಮೇ.03ರ ಬಳಿಕ ಕೆಲ ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಲು ಕೇಂದ್ರ ನಿರ್ಧರಿಸಿದೆ. ರಾಜ್ಯದಲ್ಲಿನ ಲಾಕ್‌ಡೌನ್ ಹಾಗೂ ಆರ್ಥಿಕತೆ ಸುಧಾರಣೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಹತ್ವದ ಸಲಹೆ ನೀಡಿದ್ದಾರೆ. ಬಾಲಿವುಡ್ ಹಿರಿಯ ನಟ ನಾಸಿರುದ್ದೀನ್ ಶಾಗೆ ಅನಾರೋಗ್ಯ ಅನ್ನೋ ಮಾತುಗಳು ಕೇಳಿಬಂದಿದೆ. ಕೊರೋನಾ ಶವಸಂಸ್ಕಾರ ರಾಜಕೀಯ, ರಾಜದೂತ್ ಬೈಕ್ ಹಾಗೂ ರಿಶಿ ಕಪೂರ್ ನಂಟು ಸೇರಿದಂತೆ ಮೇ.1ರ ಟಾಪ್ 10 ಸುದ್ದಿ ಇಲ್ಲಿವೆ.
ರೆಡಿಯಾಯ್ತು ದೇಶದ ಮೊದಲ ಕೊರೋನಾ ಮಾತ್ರೆ, ಪರೀಕ್ಷೆಗೆ ಕೇಂದ್ರ ಸಮ್ಮತಿ: ಪ್ರಯೋಗವಷ್ಟೇ ಬಾಕಿ
ಕೊರೋನಾ ರೋಗಿಗಳ ಚಿಕಿತ್ಸೆಗೆ ಗ್ಲೆನ್‌ಮಾರ್ಕ್ ಫಾರ್ಮಾದ ಫಾವಿಪಿರಾವಿರ್ ಮಾತ್ರೆ ರೆಡಿಯಾಗಿದೆ. ಪ್ರಯೋಗಿಸಲು ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ (ಡಿಸಿಜಿಐ) ಒಪ್ಪಿಗೆಯನ್ನೂ ನೀಡಿದೆ. ಇನ್ನು ಪ್ರಯೋಗಿಸುವುದಷ್ಟೇ ಬಾಕಿ..!
ಮೂರನೇ ಲಾಕ್‌ಡೌನ್ ವಿಸ್ತರಣೆ ಫಿಕ್ಸ್ ಆದ್ರೆ ಹಲವೆಡೆ ರಿಲಾಕ್ಸ್..!.
ಎಲ್ಲಾ ರಾಜ್ಯಗಳ ಮುಖ್ಯಕಾರ್ಯದರ್ಶಿಗಳಿಗೆ ಹಸಿರು, ಕಿತ್ತಳೆ, ಕೆಂಪು ಜಿಲ್ಲೆಗಳ ಪರಿಷ್ಕರಣೆ ಮಾಡುವಂತೆ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಈಗಾಗಲೇ 130 ಕೆಂಪು, 284 ಕಿತ್ತಳೆ ಹಾಗೂ 319 ಹಸಿರು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ.
ಅಪ್ಪನ ಮಾತಿಗೆ ಆ ನಟಿಯ ಸಂಬಂಧವನ್ನೇ ಕಡಿದುಕೊಂಡಿದ್ದರು ರಿಷಿ ಕಪೂರ್
ಬಾಲಿವುಡ್ ಪ್ರಣಯರಾಜನಾಗಿ ಐದು ದಶಕಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ ರಿಷಿ ಕಪೂರ್ ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದಿದ್ದಾರೆ. ಆದರೆ, ಅವರು ಬಿಟ್ಟು ಹೋದ ನೆನಪುಗಳು ಸದಾ ಅಮರ. ಇವರ ಬಗ್ಗೆ ಹತ್ತು ಹಲವು ಗೊತ್ತಿರದ ವಿಷಯಗಳಿವೆ. ಪಿತೃ ವಾಕ್ಯ ಪಾಲನೆಗಾಗಿ ಆ ನಟಿಯ ಸಂಬಂಧವನ್ನೇ ಕಡಿಕೊಂಡಿದ್ದರು ಈ ಎವರ್‌ಗ್ರೀನ್ ಹೀರೋ
ನಟ ದರ್ಶನ್ ಸ್ಪರ್ಶಕ್ಕೆ ಕಾದಿದ್ದ ಕೆ.ಆರ್.ನಗರ ಬಸವನಿಗೆ ಅನಾರೋಗ್ಯ
ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಕಾಳಮ್ಮನ ಕೊಪ್ಪಲುಗೆ ಆಗಮಿಸಿದ ದರ್ಶನ್ ಸ್ಪರ್ಶಕ್ಕೆ ಕಾದಿದ್ದ ಬಸವ ಈಗ ಅನಾರೋಗ್ಯದಿಂದ ಬಳಲುತ್ತಿದೆ.
ಭಾರತಕ್ಕೆ ಗುಡ್‌ಬೈ ಹೇಳಲು ರೆಡಿಯಾಗಿದ್ದ ರಾಜದೂತ್ ಬೈಕ್ ನಸೀಬು ಬದಲಾಯಿಸಿದ್ದೇ ರಿಶಿ ಕಪೂರ್!
ರೋಮ್ಯಾಂಟಿಕ್ ಹೀರೋ ರಿಶಿ ಕಪೂರ್ ನಿಧನ ಬಾಲಿವುಡ್, ಅಭಿಮಾನಿಗಳಿಗೆ ಮಾತ್ರವಲ್ಲ ಎಲ್ಲಾ ಕ್ಷೇತ್ರಕ್ಕೂ ತೀವ್ರ ನೋವು ನೀಡಿದೆ. ಇದಕ್ಕೆ ಭಾರತದ ಆಟೋಮೊಬೈಲ್ ಇಂಡಸ್ಟ್ರಿ ಕೂಡ ಹೊರತಾಗಿಲ್ಲ. ರಿಶಿ ಕಪೂರ್ ಹಾಗೂ ಭಾರತದ ಆಟೋಮೊಬೈಲ್ ಇಂಡಸ್ಟ್ರಿಗೆ ಅವಿನಾಭ ನಂಟಿದೆ. 1970ರ ವೇಳೆ ಭಾರತದಲ್ಲಿ ಬಿಡುಗಡೆಯಾದ ರಾಜದೂತ್ ಬೈಕ್ ಮಾರಾಟ ಕಾಣದೇ ಇನ್ನೇನು ಸ್ಥಗಿತಗೊಳ್ಳುವ ಹಂತದಲ್ಲಿತ್ತು. ಆದರೆ ರಿಶಿ ಕಪೂರ್ ಎಂಟ್ರಿಯಿಂದ ರಾಜದೂತ್ ಬೈಕ್ ಹೊಸ ಸಂಚಲ ಮೂಡಿಸಿತು.
KIMSನಲ್ಲಿ ವಿವಿಧ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೋವಿಡ್-19 ಅಂಗವಾಗಿ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವಿಆರ್‌ಡಿಎಲ್ ಲ್ಯಾಬ್ ಸ್ಥಾಪಿಸಿದ್ದು, ಲ್ಯಾಬ್‌ನ ನಿರ್ವಹಣೆಗಾಗಿ ರಿಸರ್ಚ್ ಅಸಿಸ್ಟೆಂಟ್(ಮೆಡಿಕಲ್), ರಿಸರ್ಚ್ ಅಸಿಸ್ಟೆಂಟ್ (ನಾನ್-ಮೆಡಿಕಲ್), ರಿಸರ್ಚ್ ಅಸಿಸ್ಟೆಂಟ್, ಲ್ಯಾಬೊರೇಟರಿ ಟೆಕ್ನಿಷಿಯನ್ ಹುದ್ದೆಗಳಿಗಾಗಿ ಗುತ್ತಿಗೆ ಆಧಾರದ ಮೇಲೆ ನೇರ ಸಂದರ್ಶನದ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಲಾಕ್‌ಡೌನ್, ಆರ್ಥಿಕತೆ ಸೇರಿದಂತೆ ಮತ್ತಿತರ ಬಗ್ಗೆ ಮಹತ್ವದ ಸಲಹೆ ಕೊಟ್ಟ ಸಿದ್ದು
ಲಾಕ್‌ಡೌನ್ ಸಡಿಲಿಕೆ ಮಾಡಿ. ಇಲ್ಲವಾದ್ರೆ ಆರ್ಥಿಕ ಸಂಕಷ್ಟ ಎದುರಾಗಲಿದೆ ಎಂದು ಸರ್ಕಾರಕ್ಕೆ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
'ಕಲ್ಪತರುನಾಡಲ್ಲಿ' ಕೊರೋನಾ ಶವಸಂಸ್ಕಾರದ ರಾಜಕೀಯ..!.
ಶಾಸಕ ಗೌರಿಶಂಕರ್ ಅಧಿಕಾರಿಗಳ ಮೇಲೆ ಒತ್ತಡ ಹೇರಿ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಶವವನ್ನು ಮಣ್ಣು ಮಾಡಲಾಗಿದೆ ಎಂದು ಸುರೇಶ್ ಗೌಡ ಆರೋಪ ಮಾಡಿದ್ದಾರೆ. ಈ ಆರೋಪವನ್ನು ಗೌರಿಶಂಕರ್ ಅಲ್ಲಗಳೆದಿದ್ದಾರೆ.
ಹಿರಿಯ ನಟ ನಾಸಿರುದ್ದೀನ್ ಶಾಗೆ ಅನಾರೋಗ್ಯ? ಶಾಕ್‌ನಲ್ಲಿ ಬಾಲಿವುಡ್!
ಬಾಲಿವುಡ್ ನ ಖ್ಯಾತ ಕಲಾವಿದರಾದ ಇರ್ಫಾನ್ ಖಾನ್ ಮತ್ತು ರಿಷಿ ಕಪೂರ್ ನಿಧನದ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್ ನಟನ ಅನಾರೋಗ್ಯ ವದಂತಿ ಕೇಳಿಬರುತ್ತಿದೆ . ಈ ಎಲ್ಲಾ ಗಾಳಿ ಮಾತುಗಳಿಗೆ ಪುತ್ರನಿಂದ್ ಬ್ರೇಕ್....
ಮಹಾರಾಷ್ಟ್ರ ನಂಟು: ಮಂಡ್ಯದಲ್ಲಿ 8 ಪಾಸಿಟೀವ್ ಕೇಸ್ ಪತ್ತೆ
ಮುಂಬೈ ಲಿಂಕ್‌ನಿಂದ ಮಂಡ್ಯದಲ್ಲಿ ಇಂದು ಒಂದೇ ದಿನ 11 ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ಅದರಲ್ಲಿ 8 ಕೇಸ್‌ಗಳು ಮಂಡ್ಯದಲ್ಲಿ ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಮಂಡ್ಯಕ್ಕೆ ಶವ ತರಲಾಗುತ್ತದೆ. ನಿನ್ನೆ ಮೃತ ದೇಹ ತಂದ ನಾಲ್ವರಿಗೆ ಪಾಸಿಟೀವ್ ಬಂದಿದೆ. ಮಳವಳ್ಳಿಯ ನಾಲ್ವರು, ಕೆಆರ್ ಪೇಟೆಯ ಒಬ್ಬನಿಗೆ ಕೊರೊನಾ ಬಂದಿದೆ.