ರೆಡಿಯಾಯ್ತು ದೇಶದ ಮೊದಲ ಕೊರೋನಾ ಮಾತ್ರೆ, ಪರೀಕ್ಷೆಗೆ ಕೇಂದ್ರ ಸಮ್ಮತಿ: ಪ್ರಯೋಗವಷ್ಟೇ ಬಾಕಿ
ಕೊರೋನಾ ರೋಗಿಗಳ ಚಿಕಿತ್ಸೆಗೆ ಗ್ಲೆನ್‌ಮಾರ್ಕ್ ಫಾರ್ಮಾದ ಫಾವಿಪಿರಾವಿರ್ ಮಾತ್ರೆ ರೆಡಿಯಾಗಿದೆ. ಪ್ರಯೋಗಿಸಲು ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ (ಡಿಸಿಜಿಐ) ಒಪ್ಪಿಗೆಯನ್ನೂ ನೀಡಿದೆ. ಇನ್ನು ಪ್ರಯೋಗಿಸುವುದಷ್ಟೇ ಬಾಕಿ..!
ನವದೆಹಲಿ(ಮೇ.01): ಕೊರೋನಾ ರೋಗಿಗಳ ಚಿಕಿತ್ಸೆಗೆ ಗ್ಲೆನ್‌ಮಾರ್ಕ್ ಫಾರ್ಮಾದ ಫಾವಿಪಿರಾವಿರ್ ಮಾತ್ರೆಯನ್ನು ಪ್ರಯೋಗಿಸಲು ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ (ಡಿಸಿಜಿಐ) ಒಪ್ಪಿಗೆ ನೀಡಿದೆ. ಅದರೊಂದಿಗೆ ಭಾರತದಲ್ಲಿ ಕೊರೋನಾ ಚಿಕಿತ್ಸೆಗೆ ಔಷಧಿಯೊಂದನ್ನು ಪ್ರಯೋಗಿಸಲು ಅನುಮತಿ ಪಡೆದ ಮೊದಲ ಸಂಸ್ಥೆ ಗ್ಲೆನ್‌ಮಾರ್ಕ್ ಆಗಿದೆ.
ಮುಂಬೈ ಮೂಲದ ಗ್ಲೆನ್‌ಮಾರ್ಕ್ ಫಾರ್ಮಾದ ಫಾವಿಪಿರಾವಿರ್ ಮಾತ್ರೆ ಆ್ಯಂಟಿವೈರಲ್ ಮಾತ್ರೆಯಾಗಿದ್ದು, ಈಗಾಗಲೇ ವಿವಿಧ ವೈರಸ್ ಸಂಬಂಧಿ ಅನಾರೋಗ್ಯಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತಿದೆ. ಜಪಾನ್‌ನಲ್ಲೂ ಕೊರೋನಾ ರೋಗಿಗಳಿಗೆ ಈ ಮಾತ್ರೆ ಪ್ರಯೋಗಿಸಲು ಅನುಮತಿ ದೊರೆತಿದೆ.
ಮಹಾರಾಷ್ಟ್ರದಲ್ಲಿ ಪ್ಲಾಸ್ಮಾ ಥೆರಪಿ ವಿಫಲ, ಸೋಂಕಿತ ಸಾವು
ಇದೀಗ ಭಾರತದಲ್ಲಿ ಸಾಮಾನ್ಯ ಪ್ರಮಾಣದ ಕೊರೋನಾ ಸೋಂಕಿನಿಂದ ಬಳಲುತ್ತಿರುವ ರೋಗಿಗಳ ಮೇಲೆ ಇದರ ಪ್ರಯೋಗ ಆರಂಭವಾಗಲಿದೆ. ಇದು ಯಶಸ್ವಿಯಾದರೆ ಕೊರೋನಾಕ್ಕೆ ಮೊದಲ ಔಷಧವೊಂದು ಭಾರತಕ್ಕೆ ಸಿಕ್ಕಂತಾಗಲಿದೆ.
ಕ್ಲಿನಿಕಲ್ ಟ್ರಯಲ್‌ನ ನಿಯಮಗಳ ಪ್ರಕಾರ ಈ ಮಾತ್ರೆಯನ್ನು 150 ರೋಗಿಗಳಿಗೆ ನೀಡಿ ಪರೀಕ್ಷಿಸಬೇಕಾಗುತ್ತದೆ. ಚಿಕಿತ್ಸೆಯ ಅವಧಿ 14 ದಿನಗಳಾಗಿದ್ದು, ಪ್ರಯೋಗಕ್ಕೆ ಗರಿಷ್ಠ 28 ದಿನಗಳನ್ನು ನೀಡಲಾಗುತ್ತದೆ.
ಕೊರೋನಾಗಿಂತ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗಲಿದೆ; ಎಚ್ಚರಿಕೆ ನೀಡಿದ ಇನ್ಫಿ ಮೂರ್ತಿ!
ರೋಗಿಗಳು ಇದರಿಂದ ಗುಣಮುಖರಾದರೆ 28 ದಿನಗಳ ನಂತರ ಈ ಮಾತ್ರೆಯನ್ನು ಸಾಮಾನ್ಯ ಪ್ರಮಾಣದ ಕೊರೋನಾ ಸೋಂಕಿರುವ ಎಲ್ಲರಿಗೂ ನೀಡಬಹುದಾಗಿದೆ. ಈಗಾಗಲೇ ಚೀನಾ, ಜಪಾನ್ ಹಾಗೂ ಅಮೆರಿಕದಲ್ಲಿ ಕೊರೋನಾ ಚಿಕಿತ್ಸೆಗೆ ವಿವಿಧ ಔಷಧಗಳಿಗೆ ಕ್ಲಿನಿಕಲ್ ಟ್ರಯಲ್‌ನ ಅನುಮತಿ ನೀಡಲಾಗಿದೆ.