80 ದಶಕದಲ್ಲಿ  'ನಿಶಾಂತ್' ಚಿತ್ರದ ಮೂಲಕ ಬಾಲಿವುಡ್‌ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟ ನಾಸಿರುದ್ದೀನ್ ಶಾ ಆರೋಗ್ಯದ ಬಗ್ಗೆ ಬಿ-ಟೌನ್‌ನಲ್ಲಿ ವದಂತಿಗಳು ಹರಿದಾಡುತ್ತಿವೆ . ನಾಸಿರುದ್ದೀನ್ ಶಾ ಆರೋಗ್ಯದಲ್ಲಿ ಏರು ಪೇರು ಕಂಡ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾದ ಸುದ್ದಿ ಅನೇಕರಲ್ಲಿ ಆಘಾತವುಂಟು ಮಾಡಿದೆ.

ಶಾ ಆರೋಗ್ಯ ಬಗ್ಗೆ ಹರಿದಾಡುತ್ತಿರುವ ವದಂತಿಗೆ ಫುಲ್‌ಸ್ಟಾಪ್‌ ಇಟ್ಟ ಪುತ್ರ:

'ಎಲ್ಲವೂ ಚನ್ನಾಗಿದೆ. ಬಾಬಾ ಆರೋಗ್ಯವಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಹರಿದಾಡುತ್ತಿರುವುದು ಸುಳ್ಳು ಸುದ್ದಿ.  ನಾವು ಇರ್ಫಾನ್‌ ಬಾಯ್‌ ಹಾಗೂ ಚಿಂಟು ಜೀಗಾಗಿ ಪ್ರಾರ್ಥನೆ ಮಾಡುತ್ತಿದ್ದೇವೆ . ಇದು ನಮ್ಮೆಲ್ಲರಿಗೂ ತುಂಬಾ ದೊಡ್ಡ ನಷ್ಟ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

 

ನಾಸಿರುದ್ದೀನ್ ಶಾ ಬೇಗ ಗುಣಮುಖರಾಗಿ ಎಂದು ಅಭಿಮಾನಿಗಳು ಬರೆದುಕೊಳ್ಳುತ್ತಿದ್ದಾರೆ ಅವರ ಪ್ರೀತಿ ಮೆಚ್ಚಿಕೊಂಡು ಸ್ವತಃ ನಾಸಿರುದ್ದೀನ್ ಶಾ ಫೇಸ್‌ಬುಕ್‌ನಲ್ಲಿ 'ನನ್ನ ಆರೋಗ್ಯ ಬಗ್ಗೆ  ಕಾಳಜಿ ವಹಿಸಿ ವಿಚಾರಿಸಿದ  ಪ್ರತಿಯೊಬ್ಬರಿಗೂ ಧನ್ಯವಾದಗಳು ಹೇಳುತ್ತೇನೆ. ನಾನು ಮನೆಯಲ್ಲಿಯೇ ಇರುವೆ ಹಾಗೂ ಚನ್ನಾಗಿದ್ದೇನೆ. ಲಾಕ್‌ಡೌನ್‌ನನ್ನು ಗಮನದಲ್ಲಿ ಇಟ್ಟುಕೊಂಡಿರುವೆ. ಎಲ್ಲರೂ ಆರೋಗ್ಯವಾಗಿರಿ ಹಾಗೂ ಮನೆಯಲ್ಲಿಯೇ ಇರಿ.  ದಯವಿಟ್ಟು ಹರಿದಾಡುತ್ತಿರುವ ಯಾವುದೇ ವದಂತಿಗಳನ್ನು ನಂಬಬೇಡಿ' ಎಂದು ಬರೆದುಕೊಂಡಿದ್ದಾರೆ.

ಲಾಕ್‌ಡೌನ್‌ನಲ್ಲಿ ನಾಸಿರುದ್ದೀನ್ ಶಾ ಏನು ಮಾಡುತ್ತಿದ್ದಾರೆ:

ಕೊರೋನಾ ವೈರಸ್‌ ಲಾಕ್‌ಡೌನ್‌ ಇರುವ ಕಾರಣ ನಾಸಿರುದ್ದೀನ್ ಶಾ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ತಮ್ಮ ಇಬ್ಬರು ಗಂಡು ಮಕ್ಕಳು ವಿವಾನ್‌ ಹಾಗೂ ಇಮಾದ್‌ ಜೊತೆ ವಿಲಿಯಂಷೇಕ್ಸ್ಪಿಯರ್‌ ನಾಟಕವನ್ನು ಓದುತ್ತಿದ್ದಾರೆ.  ಇಬ್ಬರೂ ಮಕ್ಕಳು ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲವೆಂದು 2017ರಲ್ಲಿ 'ದಿ ಹಂಗ್ರಿ' ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದಾರೆ.

ನಟ ಹಾಗೂ ನಿರ್ದೇಶಕನಾಗಿ ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಾಸಿರುದ್ದೀನ್ ಶಾ ನ್ಯಾಷನಲ್‌ ಫಿಲ್ಮ್‌ ಅವಾರ್ಡ್‌, ಫಿಲ್ಮ್‌ ಫೇರ್‌ ಪ್ರಶಸ್ತಿ ಹಾಗೂ ಭಾರತ ಸರ್ಕಾರದಿಂದ ಪದ್ಮ ಶ್ರೀ ಹಾಗೂ ಪದ್ಮ ವಿಭೂಷಣ  ಪ್ರಶಸ್ತಿಗಳನ್ನು ನೀಡಿ  ಗೌರವಿಸಲಾಗಿದೆ.

11 ದಿನಗಳಲ್ಲಿ 25 ಲಕ್ಷ ರೂ ಗಳಿಸಿದ ‘ಫಾದರ್’!

ನಾಸಿರುದ್ದೀನ್ ಶಾ ಮೂಲತಃ ಮೀರಟ್‌ನವರಾಗಿದ್ದು ಆಲಿಗರ್‌ ಮುಸ್ಲಿಂ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.  ಕೆಲ ದಿನಗಳ  ಹಿಂದೆ ನಾಸಿರುದ್ದೀನ್ ಶಾ ಅವರ ಸಿಗ್ನೇಚರ್‌ ವೈರಲ್‌ ಆಗಿತ್ತು, ಯಾರೂ ಫೋರ್ಚ್ ಮಾಡಲು ಅಸಾಧ್ಯವಾದದ್ದು ಎಂದು ಟ್ರೋಲ್‌ ಮಾಡಿದರು.  1982ರಲ್ಲಿ ರತ್ನ ಪಾಠಕ್ ಅವರನ್ನು ಪ್ರೀತಿಸಿ ಮದುವೆಯಾಗಿ ಇಬ್ಬರು ಮಕ್ಕಳ ಜೊತೆ ಮುಂಬೈನಲ್ಲಿ ವಾಸವಾಗಿದ್ದಾರೆ.