ಭಾರತಕ್ಕೆ ಗುಡ್‌ಬೈ ಹೇಳಲು ರೆಡಿಯಾಗಿದ್ದ ರಾಜದೂತ್ ಬೈಕ್ ನಸೀಬು ಬದಲಾಯಿಸಿದ್ದೇ ರಿಶಿ ಕಪೂರ್!

ರೋಮ್ಯಾಂಟಿಕ್ ಹೀರೋ ರಿಶಿ ಕಪೂರ್ ನಿಧನ ಬಾಲಿವುಡ್‌, ಅಭಿಮಾನಿಗಳಿಗೆ ಮಾತ್ರವಲ್ಲ ಎಲ್ಲಾ ಕ್ಷೇತ್ರಕ್ಕೂ ತೀವ್ರ ನೋವು ನೀಡಿದೆ. ಇದಕ್ಕೆ ಭಾರತದ ಆಟೋಮೊಬೈಲ್ ಇಂಡಸ್ಟ್ರಿ ಕೂಡ ಹೊರತಾಗಿಲ್ಲ. ರಿಶಿ ಕಪೂರ್‌ ಹಾಗೂ ಭಾರತದ ಆಟೋಮೊಬೈಲ್ ಇಂಡಸ್ಟ್ರಿಗೆ ಅವಿನಾಭ ನಂಟಿದೆ. 1970ರ ವೇಳೆ ಭಾರತದಲ್ಲಿ ಬಿಡುಗಡೆಯಾದ ರಾಜದೂತ್ ಬೈಕ್ ಮಾರಾಟ ಕಾಣದೇ ಇನ್ನೇನು ಸ್ಥಗಿತಗೊಳ್ಳುವ ಹಂತದಲ್ಲಿತ್ತು.  ಆದರೆ ರಿಶಿ ಕಪೂರ್ ಎಂಟ್ರಿಯಿಂದ ರಾಜದೂತ್ ಬೈಕ್ ಹೊಸ ಸಂಚಲ ಮೂಡಿಸಿತು.

Rajdoot bike gained cult status after shared screen with Rishi Kapoor in Bobby

ಮುಂಬೈ(ಮೇ.01): ಹಿರಿಯ ನಟ, ರೋಮ್ಯಾಂಟಿಕ್ ಹೀರೋ ಎಂದೇ ಗುರುತಿಸಿಕೊಂಡಿದ್ದ ರಿಶಿ ಕಪೂರ್‌ ಅಗಲಿಕೆ ಅಭಿಮಾನಿಗಳಿಗೆ ತೀವ್ರ ನೋವು ತಂದಿದೆ. ಅದರಲ್ಲೂ 1970ರ ದಶಕದಲ್ಲಿ ಬಾಲಿವುಡ್ ಚಿತ್ರದಲ್ಲಿ ಹೊಸ ಸಂಚಲನ ಮೂಡಿಸಿದ ರಿಶಿ ಕಪೂರ್ ನಿಧನಕ್ಕೆ ಹಲವು ದಿಗ್ಗಜರು ಸಂತಾಪ ಸೂಚಿಸಿದ್ದಾರೆ. ಆಟೋಮೊಬೈಲ್ ಇಂಡಸ್ಟ್ರೀ ದಿಗ್ಗಜರೂ ರಿಶಿ ಕಪೂರ್‌ಗೆ ಸಂತಾಪ ಸೂಚಿಸಿದ್ದಾರೆ. ಮಹೀಂದ್ರ ಕಂಪನಿ ಚೇರ್ಮೆನ್ ಆನಂದ್ ಮಹೀಂದ್ರ, ಹೀರೋ ಮೋಟಾರ್ಸ್ ಚೇರ್ಮೆನ್ ಪವನ್ ಮುಂಜಾಲ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಕಾರಣ ಭಾರತದ ಆಟೋಮೊಬೈಲ್ ಕ್ಷೇತ್ರದ ಬೆಳವಣಿಗೆಯಲ್ಲಿ ರಿಶಿ ಕಪೂರ್ ಪಾತ್ರವಿದೆ.

ನೆಚ್ಚಿನ ಕಾರು ಬಳಸುವ ಮೊದಲೇ ಇಹಲೋಕ ತ್ಯಜಿಸಿದ ಇರ್ಫಾನ್ ಖಾನ್!.

ಭಾರತದ ಆಟೋಮೊಬೈಲ್ ಇಂಡಸ್ಟ್ರಿಗೂ ರಿಶಿ ಕಪೂರ್‌ಗೆ ಅವಿನಾಭಾವ ನಂಟಿದೆ. ಅದರಲ್ಲೂ ರಾಜದೂತ್ ಬೈಕ್‌ಗೆ ಪುನರ್ಜನ್ಮ ನೀಡಿದ್ದೇ ಇದೇ ರಿಶಿ ಕಪೂರ್. 1970ರ ವೇಳೆ ಭಾರತದಲ್ಲಿ ರಾಜದೂತ್ ಬೈಕ್ ಬಿಡುಗಡೆಯಾಗಿದ್ದರೂ ನಿರೀಕ್ಷಿತ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ. ಕಾರಣ 173CC, 2 ಸ್ಟ್ರೋಕ್ ಎಂಜಿನ್ ಹೊಂದಿದ್ದ ರಾಜದೂತ್ ಕಡಿಮೆ ಪವರ್ ಹೊಂದಿತ್ತು. ಕೇವಲ 7.5 bhp ಪವರ್ ಹಾಗೂ 12.7 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿತ್ತು. ಹೀಗಾಗಿ ರಾಜದೂತ್ GTS 175 ಮಾರಾಟಾ ಕಾಣದೇ ಬಹುತೇಕ ಸ್ಥಗಿತಗೊಳ್ಳುವ ಹಂತದಲ್ಲಿತ್ತು. 

ಅಂತರ ಕಾಯ್ದುಕೊಳ್ಳಲು ರಿಕ್ಷಾ ಚಾಲಕನ ಐಡಿಯಾ; ಭರ್ಜರಿ ಆಫರ್ ನೀಡಿದ ಆನಂದ್ ಮಹೀಂದ್ರ!.

ಇದೇ ವೇಳೆ ಅಂದರೆ 1970ರಲ್ಲಿ ತಂದೆ ಕಪೂರ್ ನಿರ್ಮಾಣದ ಬಾಬಿ ಚಿತ್ರದ ಮೂಲಕ ರಿಶಿ ಕಪೂರ್ ನಾಯಕನಾಗಿ ಬಾಲಿವುಡ್‌ಗೆ ಎಂಟ್ರಿಕೊಟ್ಟರು. ಈ ಚಿತ್ರದಲ್ಲಿ ರಿಶಿ ಕಪೂರ್ ರೊಮ್ಯಾಂಟಿಕ್ ಹೀರೋ ಆಗಿ ಕಾಣಿಸಿಕೊಂಡರು. ಇಷ್ಟೇ ಅಲ್ಲ ಇದೇ ರಾಜದೂತ್ GTS 175 ಬೈಕ್ ಬಳಸಿದ್ದರು. ಪ್ರೇಯಸಿ ಜೊತೆಗಿನ ಸುತ್ತಾಟ, ಹಾಡು, ಸೇರಿದಂತೆ ಚಿತ್ರದ ಹಲವು ಸೀನ್‌ಗಳಲ್ಲಿ ರಾಜದೂತ್ ಬೈಕ್ ಕಾಣಿಸಿಕೊಂಡಿತ್ತು. 

ರಿಶಿ ಕಪೂರ್ ಬಾಬಿ ಚಿತ್ರ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಆದರೆ ಗುಡ್‌ಬೈ ಹೇಳಲು ರೆಡಿಯಾಗಿದ್ದ ರಾಜದೂತ್ GTS 175 ಬೈಕ್ ಯುವಕರ ನೆಚ್ಚಿನ ಬೈಕ್ ಆಗಿ ಮಾರ್ಪಟ್ಟಿತು. ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿತ್ತು. ಎಲ್ಲಾ ಡೀಲರ್‌ಗಳ ಬಳಿ ಹಾಟ್ ಕೇಕ್ ರೀತಿ ಸೇಲಾಯ್ತು. ಇಷ್ಟೇ ಅಲ್ಲ ಬುಕಿಂಗ್ ಹಾಗೂ ಡೆಲಿವರಿಗಾಗಿ ಜನರು ಕಾಯುವಂತಾಯಿತು. ರಾಜದೂತ್ GTS 175 ಬೈಕ್‌ಗೆ ಎಲ್ಲರೂ ಬಾಬಿ ಬೈಕ್ ಎಂದೇ ಕರೆಯಲು ಆರಂಭಿಸಿದರು. 

ಈ ಚಿತ್ರದ ಬಳಿಕ ಹಲವು ಆಟೋಮೊಬೈಲ್ ಕಂಪನಿಗಳು ರಿಶಿ ಕಪೂರ್‌ ಮುಂದಿನ ಚಿತ್ರಗಳಲ್ಲಿ ತಮ್ಮ ಕಂಪನಿ ಬೈಕ್ ಬಳಸಲು ದುಂಬಾಲು ಬಿದ್ದಿತ್ತು. ಬಹು ದೊಡ್ಡ ಮೊತ್ತವನ್ನು ನೀಡಲು ಕೂಡ ಕಂಪನಿಗಳು ರೆಡಿಯಾಗಿತ್ತು.

Latest Videos
Follow Us:
Download App:
  • android
  • ios