Asianet Suvarna News Asianet Suvarna News

ಭಾರತ-ಚೀನಾ ನಡುವೆ ಹೊಸ ಯುಗ ಆರಂಭ: ಮೋದಿ ಅಭಿಮತ!

ಭಾರತ-ಚೀನಾ ಅನೌಪಚಾರಿಕ ಶೃಂಗಸಭೆ ಅಂತ್ಯ| ಮಹತ್ವದ ಒಪ್ಪಂದಗಳಿಗೆ ಸೈ ಎಂದ ಮೋದಿ-ಕ್ಸಿ| ಅನೌಪಚಾರಿಕ ಶೃಂಗಸಭೆಯನ್ನು ಐತಿಹಾಸಿಕ ಎಂದು ಬಣ್ಣಿಸಿದ ಪ್ರಧಾನಿ ಮೋದಿ| ‘ಚೆನ್ನೈ ಮೂಲಕ ಭಾರತ ಹಾಗೂ ಚೀನಾ ಸಂಬಂಧಗಳ ಹೊಸ ಯುಗ ಆರಂಭ’| ‘ಭಾರತ-ಚೀನಾ ನಡುವಿನ ಆರ್ಥಿಕ ಬೆಸುಗೆಗೆ 2,000 ವರ್ಷಗಳ ಇತಿಹಾಸ’|‘ಭಿನ್ನಾಭಿಪ್ರಾಯಗಳನ್ನು ವಿವೇಕದಿಂದ ನಿರ್ವಹಿಸಲು ನಿರ್ಧಾರ’|

Chennai Connect Starts New Chapter In India and China Ties Says PM Modi
Author
Bengaluru, First Published Oct 12, 2019, 7:24 PM IST
  • Facebook
  • Twitter
  • Whatsapp

ಮಾಮಲ್ಲಾಪುರಂ(ಅ.12): ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಅನೌಪಚಾರಿಕ ಭಾರತ ಭೇಟಿ ಮುಕ್ತಾಯ ಕಂಡಿದ್ದು, ಪ್ರಧಾನಿ ಮೋದಿ ಅವರೊಂದಿಗಿನ ಮಾತುಕತೆ ವೇಳೆ ಹಲವು ಮಹತ್ವದ ಒಪ್ಪಂದಗಳಿಗೆ ಸೈ ಎಂದಿದ್ದಾರೆ.

ಚೀನಾ ಅಧ್ಯಕ್ಷರೊಂದಿಗಿನ ಅನೌಪಚಾರಿಕ ಶೃಂಗಸಭೆಯನ್ನು ಫಲಪ್ರದ ಎಂದು ಬಣ್ಣಿಸಿರುವ ಪ್ರಧಾನಿ ಮೋದಿ,  ಚೆನ್ನೈ ಮೂಲಕ ಭಾರತ ಹಾಗೂ ಚೀನಾ ಸಂಬಂಧಗಳ ಹೊಸ ಯುಗ ಆರಂಭಗೊಂಡಿದೆ ಎಂದು ಹೇಳಿದ್ದಾರೆ.

ವುಹಾನ್ ಶೃಂಗಸಭೆ ಉಭಯ ರಾಷ್ಟ್ರಗಳ ಸಂಬಂಧಗಳಲ್ಲಿ ಹೊಸ ಆವೇಗ, ನಂಬಿಕೆಯನ್ನು ಹುಟ್ಟು ಹಾಕಿತ್ತು. ಇಂದು ಚೆನ್ನೈ ಭಾರತ-ಚೀನಾ ರಾಷ್ಟ್ರಗಳ ನಡುವೆ ಹೊಸ ಯುಗವನ್ನೇ ಆರಂಭಿಸಿದೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದ್ದಾರೆ. 

ಚೀನಾ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಆಳವಾದ ಸಾಂಸ್ಕೃತಿಕ ಮತ್ತು ವ್ಯಾಪಾರ ಸಂಬಂಧಗಳಿದ್ದು, 2000 ವರ್ಷಗಳಿಂದಲೂ ಭಾರತ-ಚೀನಾ ನಡುವಿನ ಆರ್ಥಿಕ ಬೆಸುಗೆಗೆ 2,000 ವರ್ಷಗಳ ಇತಿಹಾಸವಿದೆ ಎಂದು ಮೋದಿ ಬಣ್ಣಿಸಿದ್ದಾರೆ.

ಪರಸ್ಪರ ಭಿನ್ನಾಭಿಪ್ರಾಯಗಳನ್ನು ವಿವೇಕದಿಂದ ನಿರ್ವಹಿಸಲು ಹಾಗೂ ಅವುಗಳನ್ನು ವಿವಾದಗಳಾಗಿ ಪರಿವರ್ತಿಸಲು ಬಿಡದಿರಲು ನಿರ್ಧರಿಸಿದ್ದು, ಭಾರತ-ಚೀನಾ ಹೊಸ ಭವಿಷ್ಯದತ್ತ ಒಟ್ಟಾಗಿ ಹೆಜ್ಜೆ ಇಡಲಿವೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

Follow Us:
Download App:
  • android
  • ios