ಚೆನ್ನೈ(ಅ.11): ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಚೀನಾ ಅಧ್ಯಕ್ಷ  ಕ್ಸಿ ಜಿನ್ ಪಿಂಗ್ ಅವರನ್ನು, ತಮಿಳುನಾಡಿನ ಮಹಾಬಲಿಪುರಂನಲ್ಲಿ ಪ್ರಧಾನಿ ಮೋದಿ ದೇಸಿ ಉಡುಪಿನಲ್ಲಿ ಬರಮಾಡಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ಮಹಾಬಲಿಪುರಂನಲ್ಲಿ ಚೀನಾ ಅಧ್ಯಕ್ಷರ ಆಗಮನಕ್ಕಾಗಿ ಕಾಯುತ್ತಿದ್ದ ಪ್ರಧಾನಿ ಮೋದಿ, ದಕ್ಷಿಣ ಭಾರತದ ಸಾಂಪ್ರದಾಯಿಕ ಧಿರಿಸು ಪಂಚೆ ಧರಿಸಿ ಕ್ಸಿ ಜಿನ್ ಪಿಂಗ್ ಅವರನ್ನು ಬರಮಾಡಿಕೊಂಡರು. ಅಲ್ಲದೆ ಐತಿಹಾಸಿಕ ತಾಣ ಮಹಾಬಲಿಪುರಂ ಕುರಿತು ಚೀನಾ ಅಧ್ಯಕ್ಷರಿಗೆ ಸ್ವತಃ ಗೈಡ್ ಮಾಡಿದರು. ಉಭಯ ನಾಯಕರು ಅಲ್ಲಿನ ಸ್ಮಾರಕಗಳನ್ನು ವೀಕ್ಷಿಸಿದ್ದಲ್ಲದೇ. ಮಹಾಬಲಿಪುರಂನ ದೇಗುಲಕ್ಕೂ ಭೇಟಿ ನೀಡಿದರು.

"

 

 

ಭಾರತ - ಚೀನಾ ಮುಖ್ಯಸ್ಥರ ನಡುವೆ ಅನೌಪಚಾರಿಕ ಸಭೆ ಇಂದು ಸಂಜೆ ಮಹಾಬಲಿಪುರಂನಲ್ಲಿ ಆರಂಭವಾಗಲಿದ್ದು, ಕಳೆದ ವರ್ಷ ಏಪ್ರಿಲ್‌ನಲ್ಲಿ ಚೀನಾದ ವುಹಾನ್ನಲ್ಲಿ ನಡೆದಿದ್ದ ಅನೌಪಚಾರಿಕ ಶೃಂಗಸಭೆಯ ಮುಂದುವರದ ಭಾಗ ಎಂದು ಬಣ್ಣಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಪ್ರಧಾನಿ ಮೋದಿ ಹಾಗೂ ಕ್ಸಿ ಜಿನ್​ಪಿಂಗ್ ಮೊದಲ ಬಾರಿಗೆ ಭೇಟಿಯಾಗುತ್ತಿದ್ದು, ಈ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.