ಫೆಬ್ರವರಿ 6 ರಂದು ರೈತ ಸಂಘಟನಗಳು ದೇಶಾದ್ಯಂತ ಚಕ್ಕಾ ಜಾಮ್ ಪ್ರತಿಭಟನೆಗೆ ಕರೆ ನೀಡಿದ್ದಾರೆ. ದೇಶದಲ್ಲಿ ಕೊರೋನಾ ಹಾವಳಿ ತಗ್ಗಿದರೂ ಕೇರಳ ಹಾಗೂ ಮಾಹಾರಾಷ್ಟ್ರದಲ್ಲಿ ನಿಯಂತ್ರಣಕ್ಕೆ ಸಿಗುತ್ತಿಲ್ಲ. ತುಮಕೂರಿನಲ್ಲಿ ಜಿಲೆಟಿನ್ ಸ್ಫೋಟ, ಮನೆ ಛಿದ್ರ ಛಿದ್ರವಾಗಿದೆ. ಬೋಲ್ಡ್ ಲುಕ್‌ನಲ್ಲಿ ರಚಿತಾ ರಾಮ್, ಪತ್ರಗಳ ರಾಶಿ ನೋಡಿ ಹೌಹಾರಿದ ಬಿಎಸ್ ಯಡಿಯೂರಪ್ಪ ಸೇರಿದಂತೆ ಫೆಬ್ರವರಿ 2 ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.
ಫೆ.6ಕ್ಕೆ ಭಾರತ್ ಬಂದ್? ಏನಿದು ರೈತರು ಘೋಷಿಸಿದ ಚಕ್ಕಾ ಜಾಮ್ ಪ್ರತಿಭಟನೆ?...
ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಳಿಸಲು ಮತ್ತೊಂದು ಹೋರಾಟಕ್ಕೆ ಮುಂದಾಗಿದ್ದಾರೆ. ಫೆಬ್ರವರಿ 6 ರಂದು ದೇಶಾದ್ಯಂತ ಪ್ರತಿಭಟನೆ ತೀವ್ರಗೊಳಿಸಲು ಚಕ್ಕಾ ಜಾಮ್‌ಗೆ ಕರೆ ಕೊಟ್ಟಿದ್ದಾರೆ.
ಕೇರಳ, ಮಹಾರಾಷ್ಟ್ರದಲ್ಲಷ್ಟೇ ನಿಯಂತ್ರಣಕ್ಕೆ ಸಿಗ್ತಿಲ್ಲ ಕೊರೋನಾ, ಕೇಂದ್ರದಿಂದ ಸ್ಪೆಷಲ್ ಟೀಂ!...
ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೊರೋನಾ ಪರಿಸ್ಥಿತಿ ಸಂಬಂಧ ಕೇಂದ್ರ ಆರೋಗ್ಯ ಇಲಾಖೆ ಹಾಗೂ ಕುಟುಂಬ ಕಲ್ಯಾಣ ಇಲಾಖೆಬಹುದೊಡ್ಡ ಘೋಷಣೆ ಮಾಡಿದೆ. ಕೊರೋನಾ ನಿಯಂತ್ರಿಸುವ ಸಲುವಾಗಿ ಸಚಿವಾಲಯವು ಈ ಎರಡು ರಾಜ್ಯಗಳಿಗೆ ಎರಡು ವಿಶೇಷ ತಂಡ ಕಳುಹಿಸಲಿದೆ. ಸಚಿವಾಲಯದ ಈ ನಿರ್ಧಾರ್ದ ಹಿಂದೆ ಬಹುದೊಡ್ಡ ಕಾರಣವಿದೆ.
Aero India -2021 : ಬೆಂಗಳೂರು ಬಾನಂಗಳದಲ್ಲಿ ಲೋಹದ ಹಕ್ಕಿಗಳ ತಾಲೀಮು...
ಕೊರೋನಾ ಆತಂಕ ನಡುವೆಯೇ ಬುಧವಾರದಿಂದ ಪ್ರಾರಂಭವಾಗುತ್ತಿರುವ ವಿಶ್ವದ ಮೊಟ್ಟಮೊದಲ ಹೈಬ್ರಿಡ್ ಏರ್‌ಶೋ ಹಿನ್ನೆಲೆಯಲ್ಲಿ ಇಂದಿನಿಂದ ಯಲಹಂಕದ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳು ಪೂರ್ಣಪ್ರಮಾಣದಲ್ಲಿ ತಾಲೀಮು ಪ್ರದರ್ಶನ ನೀಡುತ್ತಿವೆ.
25 ದಿನ ರಥ ಯಾತ್ರೆಗೆ ದೀದಿ ಬಳಿ ಅನುಮತಿ ಕೇಳಿದ ಬಿಜೆಪಿ!...
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುದೀರ್ಘ ಒಂದು ತಿಂಗಳಕಾಲ ‘ರಥಯಾತ್ರೆ’ ನಡೆಸಲು ಸಜ್ಜು| ‘ರಥಯಾತ್ರೆ’ ನಡೆಸಲು ಪಶ್ಚಿಮ ಬಂಗಾಳ ಸರ್ಕಾರದ ಬಳಿ ಬಿಜೆಪಿ ಅನುಮತಿ
ಮುಷ್ತಾಕ್ ಅಲಿ ಟ್ರೋಫಿ ಗೆಲುವನ್ನು ಕೊನೆಯುಸಿರೆಳೆದ ತಾಯಿಗೆ ಅರ್ಪಿಸಿದ ಅಶ್ವಿನ್..!...
ತನ್ನ ಕ್ರಿಕೆಟ್ ಬೆಳವಣಿಗೆಗೆ ತನ್ನ ಜೀವವನ್ನೇ ಮುಡಿಪಾಗಿಟ್ಟಿದ್ದ ತಾಯಿಗೆ ಮುರುಗನ್ ಅಶ್ವಿನ್ ಭಾವಸ್ಪರ್ಷಿ ಸಂದೇಶ ರವಾನಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ತುಮಕೂರಿನಲ್ಲಿ ಜಿಲೆಟಿನ್ ಸ್ಫೋಟ, ಮನೆ ಛಿದ್ರ ಛಿದ್ರ...
ತುಮಕೂರು ತಾ. ಮಸ್ಕಲ್ ಗ್ರಾಮದಲ್ಲಿ ಜಿಲೆಟಿನ್ ಸ್ಫೋಟಗೊಂಡು ಮನೆ ಧ್ವಂಸವಾಗಿದೆ. ಕಲ್ಲು ಕ್ವಾರೆಯಲ್ಲಿ ಕೆಲಸ ಮಾಡುವ ಲಕ್ಷ್ಮೀಕಾಂತ್ ಎಂಬುವವರ ಮನೆಯಲ್ಲಿದ್ದ ಜಿಲೆಟಿನ್ ಕಡ್ಡಿ ಬಿಸಿಲಿತ ತಾಪಕ್ಕೆ ಸ್ಪೋಟಗೊಂಡಿದೆ.
ಯೆಲ್ಲೋ ನೇಲ್ ಪಾಲಿಶ್, ಕೈಯಲ್ಲಿ ಕಾಫಿ: ಚಿಲ್ ಮಾಡ್ತಿದ್ದಾರೆ ರಚಿತಾ...
ರಚಿತಾ ರಾಮ್ ಇತ್ತೀಚೆಗೆ ಬೋಲ್ಡ್ & ಟ್ರೆಂಡೀಯಾಗಿ ಕಾಣಿಸಿಕೊಳ್ತಿದ್ದಾರೆ. ಇದೀಗ ನಟಿ ಯೆಲ್ಲೋ ನೇಲ್ ಪಾಲಿಶ್ ಹಚ್ಚಿ ಸ್ಟೈಲಾಗಿ ಕಾಫಿ ಕುಡೀತಿದ್ದಾರೆ.
ಆರ್ಥಿಕತೆಗೆ ನಿರ್ಮಲಾ ಮದ್ದು, ಏರುತ್ತಿದ್ದ ಚಿನ್ನದ ದರಕ್ಕೆ ಬಿತ್ತು ಮತ್ತೆ ಗುದ್ದು!...
ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಫೆಬ್ರವರಿ 02 ಗೋಲ್ಡ್ ರೇಟ್
ಐತಿಹಾಸಿಕ ನಿರ್ಧಾರ;ಡ್ರೈವಿಂಗ್ ಲೈಸೆನ್ಸ್ ಪಡೆಯಲು ಗುಣ-ನಡತೆ ಸರ್ಟಿಫಿಕೇಟ್ ಕಡ್ಡಾಯ!...
ಕೆಲ ವರ್ಷಗಳ ಹಿಂದೆ ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಸುಲಭದ ಮಾತಾಗಿತ್ತು. ಡ್ರೈವಿಂಗ್ ಬರದಿದ್ದರೂ, ಲೈಸೆನ್ಸ್ ಕೈಯಲ್ಲಿರುವ ಕಾಲವಿತ್ತು. ಆದರೆ ಈಗ ಹಾಗಲ್ಲ. ಲೈಸೆನ್ಸ್ ಅಷ್ಟು ಸುಲಭದಲ್ಲಿ ಪಡೆಯಲು ಸಾಧ್ಯವಿಲ್ಲ. ಇದೀಗ ಮತ್ತೊಂದು ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಡ್ರೈವಿಂಗ್ ಲೆಸೆನ್ಸ್ ಪಡೆಯಲು ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೂಡ ಕಡ್ಡಾಯ ಮಾಡಲಾಗಿದೆ.
ಒಂದೇ ವಿಚಾರಕ್ಕೆ ಸಿಎಂಗೆ ಬಂತು ಸಾವಿರಾರು ಪತ್ರ: ಹೌಹಾರಿದ ವಿಧಾನಸಭಾ ಸಿಬ್ಬಂದಿ
ವಿಧಾನಸೌಧಕ್ಕೆ ಬಂತು ಸಾವಿರಾರು ಪತ್ರಗಳು ಬಂದಿವೆ. ಅದು ಒಂದೇ ವಿಚಾರವಾಗಿ ಒಂದಲ್ಲ ಎರಡಲ್ಲ ಬರೋಬ್ಬರಿ 15,000 ಸಾವಿರಕ್ಕೂ ಹೆಚ್ಚು ಪತ್ರಗಳು ಬಂದಿವೆ. ಹಾಗಾದ್ರೆ, ಇವುಗಳನ್ನು ಬರೆದವರು ಯಾರು?
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 2, 2021, 4:47 PM IST