ಕೇರಳ, ಮಹಾರಾಷ್ಟ್ರದಲ್ಲಷ್ಟೇ ನಿಯಂತ್ರಣಕ್ಕೆ ಸಿಗ್ತಿಲ್ಲ ಕೊರೋನಾ, ಕೇಂದ್ರದಿಂದ ಸ್ಪೆಷಲ್ ಟೀಂ!
ದೇಶದಲ್ಲಿ ಇಳಿಮುಖವಾಗುತ್ತಿದೆ ಕೊರೋನಾ| ಎರಡು ರಾಜ್ಯದಲ್ಲಷ್ಟೇ ಕೊರೋನಾ ಹಾವಳಿ| ಮಹಾಮಾರಷ್ಟ್ರ, ಕೇರಳಕ್ಕೆ ಕೇಂದ್ರದ ತಂಡ
ನವದೆಹಲಿ(ಫೆ.02):ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೊರೋನಾ ಪರಿಸ್ಥಿತಿ ಸಂಬಂಧ ಕೇಂದ್ರ ಆರೋಗ್ಯ ಇಲಾಖೆ ಹಾಗೂ ಕುಟುಂಬ ಕಲ್ಯಾಣ ಇಲಾಖೆಬಹುದೊಡ್ಡ ಘೋಷಣೆ ಮಾಡಿದೆ. ಕೊರೋನಾ ನಿಯಂತ್ರಿಸುವ ಸಲುವಾಗಿ ಸಚಿವಾಲಯವು ಈ ಎರಡು ರಾಜ್ಯಗಳಿಗೆ ಎರಡು ವಿಶೇಷ ತಂಡ ಕಳುಹಿಸಲಿದೆ. ಸಚಿವಾಲಯದ ಈ ನಿರ್ಧಾರ್ದ ಹಿಂದೆ ಬಹುದೊಡ್ಡ ಕಾರಣವಿದೆ.
ಸ್ಪೆಷಲ್ ಟೀಂ ಯಾಕೆ?
ದೇಶದ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೋನಾ ಪ್ರಕರಣ ಹಾಗೂ ಸಾವಿನ ಸಂಖ್ಯೆ ಇಳಿಮುಖವಾಗುತ್ತಿದೆ. ಆದರೆ ಕೇರಳ ಹಾಗೂ ಮಹಾರಾಷ್ಟ್ರದಲ್ಲಷ್ಟೇ ಈಗಲೂ ಕೊರೋನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿಲ್ಲ. ಪ್ರಸ್ತುತ ಈ ಎರಡು ರಾಜ್ಯದಲ್ಲಿ ದೇಶದ ಶೇ. 70% ರಷ್ಟು ಕೊರೋನಾ ಸಕ್ರಿಯ ಪ್ರಕರಣಗಳಿವೆ.
ತಂಡದಲ್ಲಿ ಯಾರೆಲ್ಲಾ ಇರುತ್ತಾರೆ?
ಮಹಾರಾಷ್ಟ್ರಕ್ಕೆ ತೆರಳಲಿರುವ ಕೇಂದ್ರದ ತಂಡದಲ್ಲಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ(NCDC) ಹಾಗೂ ಡಾಕ್ಟರ್ ಆರ್‌ಎಂಎಲ್ ಆಸ್ಪತ್ರೆಯ ವಿಶೇಷ ತಜ್ಞರು ಇರುತ್ತಾರೆ. ಕೇರಳಕ್ಕೆ ತೆರಳಲಿರುವ ತಂಡದಲ್ಲಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ಇರಲಿದ್ದಾರೆ.
ರಾಜ್ಯದಲ್ಲಿ ತಂಡಗಳಿಗೇನು ಕೆಲಸ?
ಈ ತಂಡಗಳು ರಾಜ್ಯದ ಆರೋಗ್ಯ ಇಲಾಖೆಯೊಂದಿಗೆ ಸೇರಿ ಕೆಲಸ ನಿರ್ವಹಿಸಲಿವೆ. ಈ ರಾಜ್ಯಗಳಲ್ಲಿ ದಾಖಲಾಗುತ್ತಿರುವ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಫಾರಸು ಮಾಡಲಿವೆ.
ಕೊರೋನಾದಿಂದ ಮೃತಪಟ್ಟ ವೈದ್ಯರೆಷ್ಟು?
ಸಂಸತ್ತಿನಲ್ಲಿ ನೀಡಲಾದ ಉತ್ತರವೊಂದರಲ್ಲಿ ಕೇಂದ್ರ ಆರೋಗ್ಯ ಖಾತೆ ಸಚಿವರು ದೇಶದಲ್ಲಿ ಕೊರೋನಾದಿಂದಾಗಿ 22 ಜನವರಿ 2021ರವರೆಗೆ ಒಟ್ಟು 162 ಡಾಕ್ಟರ್ಸ್, 107 ನರ್ಸ್ ಹಾಗೂ 44 ಆಶಾ ಕಾರ್ಯಕರ್ತೆಯರು ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.