ಡಿಂಪಲ್ ಕ್ವೀನ್ ರಚಿತಾ ರಾಮ್ ತಮ್ಮ ಸ್ಟೈಲಿಷ್ ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ತಮ್ಮ ಲೇಟೆಸ್ಟ್ ಅಪ್‌ಡೇಟ್ಸ್‌ಗಳನ್ನು ಸೋಷಿಯಲ್ ಮೀಡಿಯಾಗೆ ಪೋಸ್ಟ್ ಮಾಡುತ್ತಿರುತ್ತಾರೆ.

ಇದೀಗ ನಟಿ ತಮ್ಮ ಕಾಫಿ ಟೈಂ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಕೈಗೆ ಕೆಂಪು ನೂಲನ್ನು ಸುತ್ತಿದ್ದು, ಯೆಲ್ಲೋ ನೇಲ್ ಪಾಲಿಶ್ ಹಚ್ಕೊಂಡು ಕಾಫಿ ಕೈಯಲ್ಲಿಹಿಡ್ಕೊಂಡಿದ್ದಾರೆ ರಚಿತಾ.

ರಚಿತಾ ಬೋಲ್ಡ್... ಮೈತುಂಬ ಬಟ್ಟೆ ಹಾಕಿ ಎಂದ್ರು! ಅಸಲಿ ಕತೆ ಏನು?

ಕಾಫಿ ಟೈಂ ಎಂದೂ ಬರೆದುಕೊಂಡಿದ್ದಾರೆ. ಕಿರುತೆರೆ ನಟಿ ನಿಖಿತಾ ಶರ್ಮಾ ಅವರ ಫೋಟೋಗೆ ಕಿಡಿಗೇಡಿಗಳು ಮಾರ್ಫಿಂಗ್ ಮಾಡಿ ರಚಿತಾ ಅವರ  ಶಿರವನ್ನು ಅಂಟಿಸಿದ್ದರು. ಈ ಫೊಟೋ ಇತ್ತೀಚೆಗಷ್ಟೇ ವೈರಲ್ ಆಗಿತ್ತು.

ಇತ್ತೀಚೆಗಷ್ಟೇ ಸಹೋದರಿಯ ಹುಟ್ಟಿದ ಹಬ್ಬದ ಫೋಟೋ ಶೇರ್ ಮಾಡಿ ಹ್ಯಾಪಿ ಬರ್ತ್‌ಡೇ ನಿತ್ಯಾ ರಾಂ ಎಂದಿದ್ದಾರೆ. ನಿತ್ಯಾರಾಂ ಬಾಲ್ಯದ ಫೋಟೋಗಳನ್ನು ಕೊಲೇಜ್ ಮಾಡಿ ಪೋಸ್ಟ್ ಮಾಡಿದ್ದರು.