Aero India -2021 : ಬೆಂಗಳೂರು ಬಾನಂಗಳದಲ್ಲಿ ಲೋಹದ ಹಕ್ಕಿಗಳ ತಾಲೀಮು
ಕೊರೋನಾ ಆತಂಕ ನಡುವೆಯೇ ಬುಧವಾರದಿಂದ ಪ್ರಾರಂಭವಾಗುತ್ತಿರುವ ವಿಶ್ವದ ಮೊಟ್ಟಮೊದಲ ಹೈಬ್ರಿಡ್ ಏರ್‌ಶೋ ಹಿನ್ನೆಲೆಯಲ್ಲಿ ಇಂದಿನಿಂದ ಯಲಹಂಕದ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳು ಪೂರ್ಣಪ್ರಮಾಣದಲ್ಲಿ ತಾಲೀಮು ಪ್ರದರ್ಶನ ನೀಡುತ್ತಿವೆ.
(Photo - ಎ. ವೀರಮಣಿ , ಕನ್ನಡಪ್ರಭ)
ಕೊರೋನಾ ಆತಂಕ ನಡುವೆಯೇ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಬುಧವಾರದಿಂದ ಪ್ರಾರಂಭವಾಗುತ್ತಿರುವ ವಿಶ್ವದ ಮೊಟ್ಟಮೊದಲ ಹೈಬ್ರಿಡ್ ಏರ್‌ಶೋ
(Photo - ಎ. ವೀರಮಣಿ , ಕನ್ನಡಪ್ರಭ)
ಯಲಹಂಕದ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳು ಪೂರ್ಣಪ್ರಮಾಣದಲ್ಲಿ ತಾಲೀಮು
ಫೆ.3ರಿಂದ 5 ವರೆಗೆ ನಡೆಯುವ ‘ಏರೋ ಇಂಡಿಯಾ-2021’ ವೈಮಾನಿಕ ಪ್ರದರ್ಶನ
ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನಕ್ಕಾಗಿ ಕಳೆದ ಎರಡ್ಮೂರು ದಿನದಿಂದ ನಡೆಯುತ್ತಿರುವ ತಾಲೀಮು
ಇದೇ ಮೊದಲ ಬಾರಿಗೆ ‘ಸೂರ್ಯಕಿರಣ್ ಹಾಗೂ ಸಾರಂಗ್’ ವೈಮಾನಿಕ ಪ್ರದರ್ಶನ ತಂಡಗಳು ಜಂಟಿ ಪ್ರದರ್ಶನ ನೀಡಲಿವೆ
‘ಚಿನೂಕ್ ಟ್ವಿನ್ ಇಂಜಿನ್’ ಹೆಲಿಕಾಪ್ಟರ್‌ನ ವೈಮಾನಿಕ ಪ್ರದರ್ಶನದಲ್ಲಿ ಭಾಗಹಿಸುತ್ತಿರುವುದು ವಿಶೇಷ.
ಏರೋ ಇಂಡಿಯಾತಾಲೀಮು ವೀಕ್ಷಿಸಲು ಯಲಹಂಕಕ್ಕೆ ಆಗಮಿಸಿದ ಯುವತಿಯರಿಂದ ಸೆಲ್ಫಿ.......
ಪ್ರತ್ಯಕ್ಷ ಹಾಗೂ ವರ್ಚುಯಲ್ ಎರಡೂ ಮಾದರಿಯಲ್ಲಿ ಏಕಕಾಲದಲ್ಲಿ ನಡೆಯಲಿರುವ 13ನೇ ಏರೋ ಇಂಡಿಯಾ ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಲಿದೆ. ಏರೋ ಇಂಡಿಯಾದಲ್ಲಿ ಭಾರತ ಸೇರಿ ಇನ್ನಿತರ ದೇಶಗಳ 63 ವಿಮಾನಗಳು ಪ್ರದರ್ಶನಗೊಳ್ಳಲಿವೆ.
ದೇಶ-ವಿದೇಶಗಳ ವಿಮಾನಗಳಿಂದ ನಡೆಯಲಿದೆ ವೈಮಾನಿಕ ಪ್ರದರ್ಶನ
ಭಾರತ ಸೇರಿ ಇನ್ನಿತರ ದೇಶಗಳ 63 ವಿಮಾನಗಳು ಪ್ರದರ್ಶನಗೊಳ್ಳಲಿವೆ.
ಬಾನಂಗಳದಲ್ಲಿ ಚಿತ್ತಾರ ಬಿಡಿಸಲು ಸಜ್ಜಾಗಿವೆ ವಿವಿಧ ದೇಶಗಳ ಬಣ್ಣದ ಹಕ್ಕಿಗಳು