ಕೋಲ್ಕತ್ತ(ಫೆ.02): ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುದೀರ್ಘ ಒಂದು ತಿಂಗಳಕಾಲ ‘ರಥಯಾತ್ರೆ’ ನಡೆಸಲು ಪಶ್ಚಿಮ ಬಂಗಾಳ ಸರ್ಕಾರದ ಬಳಿ ಬಿಜೆಪಿ ಅನುಮತಿ ಕೇಳಿದೆ.

ಈ ಸಂಬಂಧ ರಾಜ್ಯ ಮುಖ್ಯಕಾರ‍್ಯದರ್ಶಿ ಅಲಾಪನ್‌ ಬಂಡೋಪಾಧ್ಯಾಯ ಅವರಿಗೆ ಪತ್ರ ಬರೆದಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಪ್ರತಾಪ್‌ ಬ್ಯಾನರ್ಜಿ, ‘ಫೆಬ್ರವರಿಯಿಂದ ರಥಯಾತ್ರೆಯ ಭಾಗವಾಗಿ ರಾಜ್ಯದಲ್ಲಿ 5 ರಾರ‍ಯಲಿಗಳನ್ನು ನಡೆಸುವ ಉದ್ದೇಶವಿದೆ. ಪ್ರತಿ ಯಾತ್ರೆಯು ಶಾಂತಿಯುತವಾಗಿ 20-25 ದಿನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಿಮ್ಮ ಭೇಟಿಗೆ ಅವಕಾಶ ನೀಡಬೇಕು’ ಎಂದು ಕೋರಿದ್ದಾರೆ.

2018ರಲ್ಲಿಯೂ ರಾಜ್ಯದಲ್ಲಿ ಇಂಥದ್ದೇ ರಾರ‍ಯಲಿಗಳನ್ನು ನಡೆಸಲು ಬಿಜೆಪಿ ಯೋಜನೆ ರೂಪಿಸಿತ್ತು. ಆದರೆ ರಾಜ್ಯ ಸರ್ಕಾರದಿಂದ ಅನುಮತಿ ದೊರಕದ ಹಿನ್ನೆಲೆಯಲ್ಲಿ ಕಾರ‍್ಯಕ್ರಮ ರದ್ದಾಗಿತ್ತು.