ಫೆ.6ಕ್ಕೆ ಭಾರತ್ ಬಂದ್? ಏನಿದು ರೈತರು ಘೋಷಿಸಿದ ಚಕ್ಕಾ ಜಾಮ್ ಪ್ರತಿಭಟನೆ?

ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಳಿಸಲು ಮತ್ತೊಂದು ಹೋರಾಟಕ್ಕೆ ಮುಂದಾಗಿದ್ದಾರೆ. ಫೆಬ್ರವರಿ 6 ರಂದು ದೇಶಾದ್ಯಂತ ಪ್ರತಿಭಟನೆ ತೀವ್ರಗೊಳಿಸಲು ಚಕ್ಕಾ ಜಾಮ್‌ಗೆ ಕರೆ ಕೊಟ್ಟಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Farmers union announces Nationwide chakka jam road block protest on February 6 ckm

ದೆಹಲಿ(ಫೆ.02): ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ದೆಹಲಿ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಯನ್ನು ಇದೀಗ ಚುರುಕುಗೊಳಿಸಿದ್ದಾರೆ. ಟ್ರಾಕ್ಟರ್ ರ್ಯಾಲಿ ಆಯೋಜಿಸಿ ಹಿಂಸಾ ರೂಪ ಪಡೆದ ಬಳಿಕ ರೈತರು ಹಾಗೂ ಸರ್ಕಾರದ ನಡುವಿನ ಕಂದಕ ಹೆಚ್ಚಾಗಿದೆ. ಹೀಗಾಗಿ ಫೆಬ್ರವರಿ 6 ರಂದು ರೈತರು ದೇಶಾದ್ಯಂತ ಚಕ್ಕಾ ಜಾಮ್ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ.

ಪ್ರತಿಭಟನಾ ನಿರತ ರೈತರಿಂದ ತಲ್ವಾರ್ ದಾಳಿ; ಒರ್ವ ಪೊಲೀಸ್ ಗಂಭೀರ!...

ಚಕ್ಕಾ ಜಾಮ್ ಅಂದರೆ ರಸ್ತೆ ತಡೆ. ದೇಶಾದ್ಯಂತ ರಸ್ತೆ ತಡೆ ನಡೆಸಲು ರೈತ ಸಂಘಟನೆಗಳು ಕರೆ ನೀಡಿದೆ. ಒಂದರ್ಥದಲ್ಲಿ ಇದು ಭಾರತ್ ಬಂದ್ ಇದ್ದ ರೀತಿ. ದೆಹಲಿ ಗಡಿ ಭಾಗದಲ್ಲೂ ಪ್ರತಿಭಟನೆ ಹಿಂಸಾ ರೂಪ ಪಡೆದ ಕಾರಣ, ಸರ್ಕಾರ ಇಂಟರ್‌ನೆಟ್ ಸೇವೆ ಸೇರಿದಂತೆ ಕೆಲ ಸೇವೆಗಳನ್ನು ಬಂದ್ ಮಾಡಲಾಗಿದೆ. ಇದರ ವಿರುದ್ಧ ರೈತ ಸಂಘಟನೆಗಳು ಶನಿವಾರ(ಫೆ.06) ಚಕ್ಕಾ ಜಾಮ್‌ಗೆ ಕರೆ ನೀಡಿದೆ.

ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲೂ ರೈತರನ್ನು ನಿರ್ಲಕ್ಷ್ಯಿಸಲಾಗಿದೆ. ಹೀಗಾಗಿ ರೈತರ ಆಕ್ರೋಶ ಹೆಚ್ಚಾಗಿದೆ. ಫೆಬ್ರವರಿ 6 ರಂದು ಮಧ್ಯಾಹ್ನ 12 ಗಂಟೆಯಿಂದ 3 ಗಂಟೆ ವರೆಗೆ ರಸ್ತೆ ತಡೆ ನಡೆಸಲು ರೈತರು ಕರೆ ನೀಡಿದ್ದಾರೆ. ದೇಶದ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗುವುದು ಎಂದು ರೈತ ಸಂಘಟನೆಗಳು ಘೋಷಿಸಿದೆ.

ದೆಹಲಿ ಗಲಭೆಗೆ ತಿಂಗಳ ಹಿಂದೆ ಸ್ಕೆಚ್; ಟ್ರಾಕ್ಟರ್ ರ‍್ಯಾಲಿ ಹಿಂದಿನ ಸ್ಫೋಟಕ ಮಾಹಿತಿ ಬಹಿರಂಗ!...

ಚಕ್ಕಾ ಜಾಮ್ ರೂಪು ರೇಷೆಯನ್ನು ರೈತ ಸಂಘಟನೆಗಳೊಂದಿಗೆ ಚರ್ಚಿಸಿ ಪ್ರಕಟಿಸಲಾಗುವುದು ಎಂದು ರೈತ ಮುಖಂಡ ಬಲ್ಬೀರ್ ಸಿಂಗ್ ರಜೇವಾಲ ಹೇಳಿದ್ದಾರೆ.  ಕಿಸಾನ್ ಮೋರ್ಚಾ, ಟ್ರಾಕ್ಟರ್ 2 ಸೇರಿದಂತೆ ಹಲವು ಟ್ವಿಟರ್ ಖಾತೆಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ನಕಲಿ ಖಾತೆಗಳ ಬದಲು ನಮ್ಮ ಖಾತೆಗಳನ್ನು ನಿರ್ಬಂಧಿಸಿರುವುದು ತಪ್ಪು ಎಂದು ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ. 

ಈ ಎಲ್ಲಾ ಕಾರಣಕ್ಕಾಗಿ ರೈತರು ಚಕ್ಕಾ ಜಾಮ್ ಪ್ರತಿಭಟನೆಗೆ ಕರೆ ನೀಡಿದ್ದಾರೆ.  ಇದೀಗ ಈ ಪ್ರತಿಭಟನೆ ಹಿಂಸಾ ರೂಪ ಪಡೆಯದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಮುಂಜಜಾಗ್ರತ ಕ್ರಮ ಕೈಗೊಳ್ಳಲು ಮುಂದಾಗಿದೆ. ಈಗಾಗಲೇ ದೆಹಲಿ ಸೇರಿದಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ. ಕಟ್ಟು ನಿಟ್ಟಿನ ಪೊಲೀಸ್ ಬಂದೋಬಸ್ತ್ ಮಾಡಲು ಆದೇಶಿಸಲಾಗಿದೆ.

Latest Videos
Follow Us:
Download App:
  • android
  • ios