ನವದೆಹಲಿ(ಫೆ.14): ಮಹತ್ವದ ಬೆಳವಣಿಗೆಯೊಂದರಲ್ಲಿ ಪುಲ್ವಾಮಾ ದಾಳಿಯನ್ನು ವಿಶ್ವದ ಬಲಾಢ್ಯ ರಾಷ್ಟ್ರಗಳು ಖಂಡಿಸಿದ್ದು, ಭಯೋತ್ಪಾದನೆ ವಿರುದ್ದದ ಹೋರಾಟದಲ್ಲಿ ಭಾರತದ ಬೆಂಬಲಕ್ಕೆ ನಿಲ್ಲುವ ಭರವಸೆ ನೀಡಿವೆ.

ಅಮೆರಿಕ, ಫ್ರಾನ್ಸ್, ನೇಪಾಳ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಪುಲ್ವಾಮಾ ದಾಳಿಯನ್ನು ಖಂಡಿಸಿದ್ದು, ಭಯೋತ್ಪಾದನೆ ನಿರ್ಮೂಲನೆಗಾಗಿ ಭಾರತದ ಜೊತೆ ಕೈ ಜೋಡಿಸುವುದಾಗಿ ಹೇಳಿವೆ.

ಪುಲ್ವಾಮಾ ದಾಳಿಯನ್ನು ಪೈಶಾಚಿಕ ಕೃತ್ಯ ಎಂದು ಖಂಡಿಸಿರುವ ಫ್ರಾನ್ಸ್, ಉಗ್ರರನ್ನು ಮಟ್ಟ ಹಾಕುವಲ್ಲಿ ಭಾರತಕ್ಕೆ ತನ್ನ ಸಂಪೂರ್ಣ ಬೆಂಬಲ ಇದೆ ಎಂದು ಸಾರಿದೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿರುವ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ, ಸಂಕಷ್ಟದ ಸಮಯದಲ್ಲಿ ಭಾರತದ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ.

ಕಣಿವೆಯಲ್ಲಿ ಉಗ್ರರ ಅಟ್ಟಹಾಸ: IED ದಾಳಿಯಲ್ಲಿ 12 ಯೋಧರು ಹುತಾತ್ಮ!

ಉರಿ ನಂತರದ ದೊಡ್ಡ ದಾಳಿ: 20 ಯೋಧರು ಹುತಾತ್ಮ!

ಭಯೋತ್ಪಾದಕರ ಕ್ರೂರ ದಾಳಿ: ಏನಂದ್ರು ಪ್ರಧಾನಿ ಮೋದಿ?

ಈ ನಾಯಿಯೇ ಇಂದು ಬೊಗಳಿದ್ದು: ಪ್ಲ್ಯಾನ್ ಹೇಗೆ ಮಾಡಿದ್ದು?

ಭಯೋತ್ಪಾದಕ ದಾಳಿ: ಪತ್ರಿಕಾಗೋಷ್ಠಿ ರದ್ದುಗೊಳಿಸಿದ ಪ್ರಿಯಾಂಕಾ!

ಭಾರತದ ಪ್ರತೀಕಾರಕ್ಕೆ ಬೆದರಿದ ಪಾಕ್, ಭದ್ರತಾ ಸಂಸ್ಥೆಗಳೊಂದಿಗೆ ಟಾಕ್..!