Asianet Suvarna News Asianet Suvarna News

ಭಯೋತ್ಪಾದಕರ ಕ್ರೂರ ದಾಳಿ: ಏನಂದ್ರು ಪ್ರಧಾನಿ ಮೋದಿ?

ಉಗ್ರರ ಕುಕೃತ್ಯಕ್ಕೆ ಭಾರತೀಯ ಸೇನೆಯೇ ನಲುಗಿ ಹೋಗಿದೆ. ಕಣಿವೆ ರಾಜ್ಯದಲ್ಲಿ ನಡೆದ ಭೀಕರ ದಾಳಿಗೆ ಹುತಾತ್ಮರಾಗಿದ್ದು 26 ಮಂದಿ ವೀರ ಯೋಧರು. ಈ ಪೈಶಾಚಿಕ ಕೃತ್ಯವನ್ನು ನರೇಂದ್ರ ಮೋದಿ ಅವರು ತೀವ್ರವಾಗಿ ಖಂಡಿಸಿದ್ದಾರೆ. 

PM Narendra Modi Reacts on Pulwana terror attack
Author
Bengaluru, First Published Feb 14, 2019, 7:17 PM IST

ಶ್ರೀನಗರ(ಫೆ.14): ಉರಿ ಸೇನಾ ನೆಲೆ ಮೇಲೆ ನಡೆದ ದಾಳಿಯ ಬಳಿಕ ಕಣಿವೆಯಲ್ಲಿ ಉಗ್ರರು ಮತ್ತೊಂದು ದೊಡ್ಡ ದಾಳಿ ನಡೆಸಿದ್ದು, ಸಿಆರ್ ಪಿಎಫ್ ಯೋಧರ ವಾಹನದ ಮೇಲೆ IED ಸ್ಫೋಟಿಸಿದ್ದಾರೆ.

ಉಗ್ರರ ಈ ಪೈಶಾಚಿಕ ಕೃತ್ಯಕ್ಕೆ 26 ಯೋಧರು ಹುತಾತ್ಮರಾಗಿದ್ದಾರೆ.  ಯೋಧರ ಮೇಲೆ ದೌರ್ಜನ್ಯವೆಸಗಿದ ಉಗ್ರರ ಕೃತ್ಯಕ್ಕೆ ಮೋದಿ ಖಂಡನೆ ವ್ಯಕ್ತಪಡಿಸಿದ್ದಾರೆ.

ಉರಿ ನಂತರದ ದೊಡ್ಡ ದಾಳಿ: 20 ಯೋಧರು ಹುತಾತ್ಮ!

‘ಯೋಧರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ. ಉಗ್ರರ ಈ ದಾಳಿ ಅತ್ಯಂತ ಹೀನ, ಘನಘೋರ ಕೃತ್ಯ. ಇಡೀ ದೇಶ ಹುತಾತ್ಮ ಯೋಧರ ಕುಟುಂಬಗಳಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದೆ' ಎಂದು ಮೋದಿ ಗುಡುಗಿದ್ದಾರೆ.

ಉಗ್ರರ ದಾಳಿಗೆ ಅರುಣ್ ಜೇಟ್ಲಿ ಖಂಡನೆ ವ್ಯಕ್ತಪಡಿಸಿದ್ದು,  ಉಗ್ರರ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ. ಉಗ್ರರಿಗೆ ಮರೆಯಲಾಗದ ಪಾಠ ಕಲಿಸುತ್ತೇವೆ ಎಂದು ಟ್ವಿಟ್ಟರ್ ನಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಎಚ್ಚರಿಕೆ ನೀಡಿದ್ದಾರೆ.

'ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಯೋಧರ ಮೇಲೆ ಕೃತ್ಯ ಖಂಡನೆ. ಯೋಧರು ಹುತಾತ್ಮರಾದ ನೋವು ಹೇಳಿಕೊಳ್ಳಲು ಪದಗಳೇ ಇಲ್ಲ. ಹುತಾತ್ಮ ಯೋಧರ ಕುಟುಂಬಕ್ಕೆ ನನ್ನ ಸಂತಾಪ ಇದೆ' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
 

Follow Us:
Download App:
  • android
  • ios