ಮತ್ತೆ ಭಾರತೀಯ ಸೇನೆಯನ್ನು ಕೆಣಕಿದ ಭಯೋತ್ಪಾದಕರು| ಉರಿ ದಾಳಿ ನಂತರ ನಡೆದ ದೊಡ್ಡ ಮಟ್ಟದ ದಾಳಿ| ಉಗ್ರರ ದಾಳಿಗೆ 20 ಸಿಆರ್‌ಪಿಎಫ್ ಯೋಧರು ಹುತಾತ್ಮ| ಸಿಆರ್‌ಪಿಎಫ್ ವಾಹನದ ಮೇಲೆ IED ದಾಳಿ ನಡೆಸಿದ ಹೇಡಿಗಳು|
ಶ್ರೀನಗರ(ಫೆ.14): ಉರಿ ಸೇನಾ ನೆಲೆ ಮೇಲೆ ನಡೆದ ದಾಳಿಯ ಬಳಿಕ ಕಣಿವೆಯಲ್ಲಿ ಉಗ್ರರು ಮತ್ತೊಂದು ದೊಡ್ಡ ದಾಳಿ ನಡೆಸಿದ್ದು, ಸಿಆರ್ ಪಿಎಫ್ ಯೋಧರ ವಾಹನದ ಮೇಲೆ IED ಸ್ಫೋಟಿಸಿದ್ದಾರೆ.
ಇಲ್ಲಿನ ಅವಂತಿಪುರ್-ಪುಲ್ವಾಮಾ ಮಾರ್ಗ ಮಧ್ಯೆ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಉಗ್ರರು IED ಸ್ಫೋಟಿಸಿದ್ದು, ಈ ಮಾರ್ಗವಾಗಿ ಹೋಗುತ್ತಿದ್ದ ಸಿಆರ್ ಪಿಎಫ್ ವಾಹನ ದಾಳಿಗೆ ತುತ್ತಾಗಿದೆ.
ಸ್ಕಾರ್ಪಿಯೋ ಕಾರಿನಲ್ಲಿ ಬಂದ ಉಗ್ರರು ಸಿಆರ್ ಪಿಎಫ್ ವಾಹನದ ಮೇಲೆ ದಾಳಿ ನಡೆಸಿದ್ದು, ಘಟನೆಯಲ್ಲಿ ಕನಿಷ್ಠ 20 ಯೋಧರು ಮೃತಪಟ್ಟು 40 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 13 ಯೋಧರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ದಾಳಿಯ ಹೊಣೆಯನ್ನು ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.
