ಶ್ರೀನಗರ(ಫೆ.14): ಕಣಿವೆ ರಾಜ್ಯದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಸಿಆರ್ ಪಿಎಫ್ ವಾಹನದ ಮೇಲೆ ಆತ್ಮಾಹುತಿ ದಾಳಿ ಮಾಡಿ 30 ಯೋಧರನ್ನು ಬಲಿ ಪಡೆಯಲಾಗಿದೆ.

ಉರಿ ದಾಳಿಯ ನಂತರ ನಡೆದ ಅತ್ಯಂತ ದೊಡ್ಡ ಮಟ್ಟದ ದಾಳಿ ಇದಾಗಿದ್ದು, ಅತ್ಯಂತ ಯೋಜಿತವಾಗಿ ಆತ್ಮಾಹುತಿ ದಾಳಿ ನಡೆಸಲಾಗಿದೆ.

ಇನ್ನು ಸಿಆರ್ ಪಿಎಫ್ ವಾಹನದ ಮೇಲೆ ದಾಳಿ ನಡೆಸಿ 30 ಯೋಧರನ್ನು ಬಲಿ ಪಡೆದ ಉಗ್ರನನ್ನು ಆದಿಲ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ.

ಕಳೆದ ವರ್ಷವಷ್ಟೇ  ಜೈಶ್-ಎ-ಮೊಹ್ಮದ್ ಸಂಘಟನೆ ಸೇರಿದ್ದ ಆದಿಲ್ ಅಹ್ಮದ್ ದಾರ್, ಸಂಘಟನೆಯಲ್ಲಿ ‘ಗಾಡಿ ಟಕರಾನೆವಾಲಾ’ ಎಂದೇ ಖ್ಯಾತಿ ಗಳಿಸಿದ್ದ.

ಇಂದೂ ಕೂಡ ಸುಮಾರು 350 ಕೆಜಿ ಸ್ಫೋಟಕಗಳನ್ನು ಹೊತ್ತು ಅವಂತಿಪುರ್-ಪುಲ್ವಾಮಾ ಮಾರ್ಗ ಮಧ್ಯೆ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಿಆರ್ ಪಿಎಫ್ ವಾಹನಕ್ಕೆ ಡಿಕ್ಕಿ ಹೊಡೆಸಿದ್ದಾನೆ ಆದಿಲ್ ಅಹ್ಮದ್.

ಇನ್ನು ಕ್ಷಣಕ್ಷಣಕ್ಕೂ ಯೋಧರ ಸಾವಿನ ಸಂಖ್ಯೆ ಏರುತ್ತಲಿದ್ದು, ಗಾಯಗೊಂಡವರ ಪೈಕಿ 13 ಯೋಧರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.

 

ಕಣಿವೆಯಲ್ಲಿ ಉಗ್ರರ ಅಟ್ಟಹಾಸ: IED ದಾಳಿಯಲ್ಲಿ 12 ಯೋಧರು ಹುತಾತ್ಮ! 

ಉರಿ ನಂತರದ ದೊಡ್ಡ ದಾಳಿ: 20 ಯೋಧರು ಹುತಾತ್ಮ!

ಭಯೋತ್ಪಾದಕರ ಕ್ರೂರ ದಾಳಿ: ಏನಂದ್ರು ಪ್ರಧಾನಿ ಮೋದಿ?