ಶ್ರೀನಗರ(ಫೆ.14): ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತೆ ಅಟ್ಟಹಾಸ ಮೆರೆದಿದ್ದು, IED ಸ್ಫೋಟದಲ್ಲಿ ಕನಿಷ್ಠ 12 ಸಿಆರ್ ಪಿಎಫ್ ಯೋಧರು ಮೃತಪಟ್ಟಿದ್ದಾರೆ.

ಇಲ್ಲಿನ ಅವಂತಿಪುರ್-ಪುಲ್ವಾಮಾ ಮಾರ್ಗ ಮಧ್ಯೆ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಉಗ್ರರು IED ಸ್ಫೋಟಿಸಿದ್ದು, ಈ ಮಾರ್ಗವಾಗಿ ಹೋಗುತ್ತಿದ್ದ ಸಿಆರ್ ಪಿಎಫ್ ವಾಹನ ದಾಳಿಗೆ ತುತ್ತಾಗಿದೆ.

ವಾಹನದಲ್ಲಿದ್ದ 12 ಯೋಧರು ಮೃತಪಟ್ಟಿದ್ದರೆ, ಇತರ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.  ಇನ್ನು  ದಾಳಿಯ ಹೊಣೆಯನ್ನು ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.