ಭಾರತದ ಪ್ರತೀಕಾರಕ್ಕೆ ಬೆದರಿದ ಪಾಕ್, ಭದ್ರತಾ ಸಂಸ್ಥೆಗಳೊಂದಿಗೆ ಟಾಕ್..!
ಭಾರತದ ಪ್ರತೀಕಾರಕ್ಕೆ ಬೆದರಿತಾ ಪಾಕಿಸ್ತಾನ..?ಪಾಕಿಸ್ತಾನ ಭದ್ರತಾ ಸಂಸ್ಥೆಗಳ ಜತೆ ಪಾಕಿಸ್ತಾನ ಮಾತುಕತೆ! ಭಾರತೀಯ ಸೇನೆ ಕಾರ್ಯಾಚರಣೆ ಭೀತಿ ಹಿನ್ನೆಲೆಯಲ್ಲಿ ಅಲರ್ಟ್ ಆದ ಪಾಕ್! ಭಾರತದ ಸಂಭಾವ್ಯ ದಾಳಿ ಎದುರಿಸಲು ಸಜ್ಜಾಗುತ್ತಿದೆ ಪಾಕಿಸ್ತಾನ! ಸಂಭಾವ್ಯ ದಾಳಿ ಎದುರಿಸಲು ಸಜ್ಜಾಗುವಂತೆ ಭದ್ರತಾ ಸಂಸ್ಥೆಗಳಿಗೆ ಪಾಕ್ ಸೂಚನೆ
ಶ್ರೀನಗರ, (ಫೆ.14): ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಗುರುವಾರ(ಫೆ.14)ದಂದು ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ.
ಜೈಷ್-ಎ-ಮೊಹಮ್ಮದ್ ಸಂಘಟನೆಯ ಆತ್ಮಾಹುತಿ ದಾಳಿಕೋರ ಆದಿಲ್ ಆಹ್ಮದ್ ದರ್ ದಾಳಿ ಮಾಡಿ ಸಾಯುವುದಕ್ಕೂ ಮುನ್ನ ವಿಡಿಯೋ ಸಂದೇಶ ನೀಡಿದ್ದಾನೆ. ಈ ಪೈಶಾಚಿಕ ಕೃತ್ಯದಲ್ಲಿ 42 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.
ಈ ನಾಯಿಯೇ ಇಂದು ಬೊಗಳಿದ್ದು: ಪ್ಲ್ಯಾನ್ ಹೇಗೆ ಮಾಡಿದ್ದು?
ಈ ಘೋರ ಕೃತ್ಯಕ್ಕೆ ಪ್ರತೀಕಾರ ಆಗಲೇಬೇಕೆಂದು ಇಡೀ ಭಾರತ ಸಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸುತ್ತಿದೆ. ಇನ್ನು ಘಟನೆ ಬಗ್ಗೆ ಎನ್ಐಎ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿದೆ.
ತಕ್ಷಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಸಭೆಯಲ್ಲಿ ಚರ್ಚಿಸುತ್ತಿದ್ದಾರೆ. ಈ ಸಭೆಯಲ್ಲಿ ಪ್ರಧಾನ ಮಂತ್ರಿ ಸಚಿವಾಲಯ, ಗೃಹ ಸಚಿವಾಲಯದ ಅಧಿಕಾರಿಗಳು ಭಾಗಿಯಾಗಿದ್ದಾರೆ.
ಭಯೋತ್ಪಾದಕರ ಕ್ರೂರ ದಾಳಿ: ಏನಂದ್ರು ಪ್ರಧಾನಿ ಮೋದಿ?
ಭಾರತದ ಪ್ರತೀಕಾರಕ್ಕೆ ಬೆದರಿತಾ ಪಾಕಿಸ್ತಾನ..?
ಹೌದು..ಇತ್ತ ಎನ್ಐಎ ತುರ್ತು ಸಭೆ ನಡೆಯುತ್ತಿದ್ದಂತೆಯೇ ಅತ್ತ ಪಾಪಿ ಪಾಕಿಸ್ತಾನ ಅಲರ್ಟ್ ಆಗಿದೆ. ಭಾರತೀಯ ಸೇನೆ ಕಾರ್ಯಾಚರಣೆ ಭೀತಿ ಹಿನ್ನೆಲೆಯಲ್ಲಿ ಅಲರ್ಟ್ ಆದ ಪಾಕ್, ಭಾರತದ ಸಂಭಾವ್ಯ ದಾಳಿ ಎದುರಿಸಲು ಸಜ್ಜಾಗುವುಂತೆ ತನ್ನ ಭದ್ರತಾ ಸಂಸ್ಥೆಗಳಿಗೆ ಸೂಚನೆ ನೀಡಿದೆ.