ರಾಜ್ಯದಲ್ಲಿ ಒಂದೇ ದಿನ ಗರಿಷ್ಠ ಕೊರೋನಾ ಕೇಸ್, ನಟಿಗೂ ತಟ್ಟಿತಾ ವೈರಸ್?ಮಾ.28ರ ಟಾಪ್ 10 ಸುದ್ದಿ!
ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 900ರ ಗಡಿ ತಲಪುತ್ತಿದೆ. ಇದು ಆತಂಕಕಾರಿಯಾಗಿದೆ. ಇದರ ಜೊತೆಗೆ ರಾಜ್ಯದಲ್ಲಿ ಒಂದೇ ದಿನ 6 ಕೊರೋನಾ ವೈರಸ್ ಕೇಸ್ ದೃಢಪಟ್ಟಿರುವುದು ಮತ್ತಷ್ಟು ತಲೆನೋವು ತಂದಿದೆ. ನಮ್ಮ ವಾತಾವರಣಕ್ಕೆ ವೈರಸ್ ಹರಡಲ್ಲ, ಮದ್ಯ ಕುಡಿದರೆ ಕೊರೋನಾ ಬರಲ್ಲ ಎಂದು ಎಡವಟ್ಟು ಮಾಡಿದ 300 ಮಂದಿ ಸಾವನ್ನಪ್ಪಿದ್ದಾರೆ. 14 ದಿನಗಳ ಹೋಂ ಕ್ವಾರಂಟೈನ್ ನಂತರ ಕನ್ನಡ ನಟಿ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಪ್ರಧಾನಿ ಮೋದಿ ಭಾಷಣ, ಜಗ್ಗೇಶ್ ಎಚ್ಚರಿಕೆ ಸೇರಿದಂತೆ ಮಾರ್ಚ್ 28ರ ಟಾಪ್ 10 ಸುದ್ದಿ ಇಲ್ಲಿವೆ.
ರಾಜ್ಯದಲ್ಲಿ ಒಂದೇ ದಿನ 6 ಮಂದಿಗೆ ಕೊರೋನಾ, ಸೋಂಕಿತರ ಸಂಖ್ಯೆ 75ಕ್ಕೇರಿಕೆ!...
ದೂರದ ಚೀನಾದಲ್ಲಿ ಕಾಣಿಸಿಕೊಂಡಿದ್ದ ಕೊರೋನಾ ವೈರಸ್ ಕಣ್ಮುಚ್ಚಿ ತೆರೆಯುವಷ್ಟರಲ್ಲಿ ನಮ್ಮ ದೇಶ, ರಾಜ್ಯ, ಜಿಲ್ಲೆ, ಗ್ರಾಮಕ್ಕೂ ಕಾಲಿಟ್ಟಿದೆ. ಈಗಾಗಲೇ ಸೋಂಕಿತರ ಸಂಖ್ಯೆ 900ರ ಗಡಿ ತಲುಪುತ್ತಿದೆ. ಈ ಮಾರಕ ಕೊರೋನಾ ತಡೆಯುವ ನಿಟ್ಟಿನಲ್ಲಿ ಸರ್ಕಾರ ಇಡೀ ದೇಶಾದ್ಯಂತ 21 ದಿನದ ಲಾಕ್‌ಡೌನ್ ಹೇರಿದೆಯಾದರೂ ಅನೇಕ ಮಂದಿ ಇದನ್ನು ಗಂಭೀರವಾಗಿ ಪರಿಗಣಿಸದೆ ರಸ್ತೆಗಿಳಿಯುತ್ತಿದ್ದಾರೆ. ಹೀಗಿರುವಾಗ ಕರ್ನಾಟಕದಲ್ಲೂ ಆತಂಕಕಾರಿ ಬೆಳವಣಿಗೆ ಕಂಡು ಬಂದಿದೆ. ಈ ಕುರಿತಾಗಿ ಖುದ್ದು ಆರೋಗ್ಯ ಸಚಿವ ಶ್ರೀರಾಮುಲು ಮಾಹಿತಿ ಬಿಚ್ಚಿಟ್ಟಿದ್ದಾರೆ.
ಮದ್ಯ ಕುಡಿದರೆ ಗುಣಮುಖ ಎಂದು ಮೆಥೆನಾಲ್ ಸೇವಿಸಿದ 300 ಜನರ ಸಾವು!...
ಮದ್ಯ ಸೇವಿಸಿದರೆ ಕೊರೋನಾದಿಂದ ಗುಣಮುಖರಾಗಬಹುದು ಎಂಬ ವದಂತಿ ನಂಬಿ ಕೈಗಾರಿಕೆಗಳಲ್ಲಿ ಬಳಸುವ ಮೆಥೆನಾಲ್ ಸೇವಿಸಿದ ಪರಿಣಾಮ 300ಕ್ಕೂ ಹೆಚ್ಚು ಜನ ಸಾವನ್ನಪ್ಪಿ, 1000ಕ್ಕೂ ಹೆಚ್ಚು ಜನ ಅನಾರೋಗ್ಯ ಪೀಡಿತರಾಗಿರುವ ಘಟನೆ ಇರಾನ್‌ನಲ್ಲಿ ಸಂಭವಿಸಿದೆ.
ಐಪಿಎಲ್ ಫೈನಲ್‌ಗಿಂತಲೂ ಹೆಚ್ಚಿನ ವೀಕ್ಷಕರ ಸೆಳೆದ ಮೋದಿ ಭಾಷಣ!.
ಕೊರೋನಾ ವ್ಯಾಪಿಸುವುದನ್ನು ತಡೆಗಾಗಿ 21 ದಿನಗಳ ಕಾಲ ದೇಶವನ್ನೇ ಲಾಕ್‌ಡೌನ್ ಮಾಡುವುದಾಗಿ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ದೇಶವನ್ನುದ್ದೇಶಿಸಿ ಭಾಷಣವನ್ನು ಭಾರೀ ಸಂಖ್ಯೆ ಜನ ವೀಕ್ಷಿಸಿದ್ದಾರೆ ಎಂಬುದು ಬಾರ್ಕ್ ರೇಟಿಂಗ್‌ನಿಂದ ಗೊತ್ತಾಗಿದೆ.
ಕೊರೋನಾ ತಾಂಡವ, ಆಂಬ್ಯುಲೆನ್ಸ್ ಸಿಬ್ಬಂದಿಯ ಯಡವಟ್ಟು, ಕ್ಯಾಮೆರಾದಲ್ಲಿ ಸೆರೆ!...
ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಜಂಟಿಯಾಗಿ ಕಟ್ಟು ನಿಟ್ಟಿನ ಕ್ರಮ ವಹಿಸುತ್ತಿದೆ. ಹೀಗಿದ್ದರೂ ಕೆಲವರ ಬೇಜವಾಬ್ದಾರಿತನ ನಡೆ, ಈ ಮಾರಕ ರೋಗ ಹರಡುವಲ್ಲಿ ಬೆಂಕಿಗೆ ಸುರಿದ ತುಪ್ಪದಂತೆ ಕೆಲಸ ಮಾಡುತ್ತಿದೆ. ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ಇದಕ್ಕೆ ಸಾಕ್ಷಿ ಎಂಬಂತಿದೆ.
ಪೊಲೀಸ್ ಸೇವೆಗೆ ಹಾಜರಾದ ಭಾರತದ ಕ್ರೀಡಾ ತಾರೆಯರು!
ದೇಶದ ಸ್ಟಾರ್ ಕ್ರೀಡಾಪಟುಗಳು ಇದೀಗ ಕೊರೋನಾ ವೈರಸ್ ಎದುರು ಸೆಣಸಲು ಖಾಕಿ ತೊಟ್ಟು ಜನರ ಸೇವೆಗೆ ನಿಂತಿದ್ದಾರೆ. ಈ ಮೂಲಕ ನಾವು ಪದಕ ಗೆಲ್ಲಲೂ ರೆಡಿ ಹಾಗೆಯೇ ಜನರ ಸೇವೆ ಮಾಡಲು ರೆಡಿ ಎನ್ನುವ ಸಂದೇಶ ರವಾನಿಸಿದ್ದಾರೆ.
ಬೀದಿ, ಪಬ್ ರಸ್ತೆಗಿಳಿದು ತಪ್ಪು ಮಾಡುತ್ತಿರುವವರಿಗೆ ಜಗ್ಗೇಶ್ ಎಚ್ಚರಿಕೆ.
ಅಮೆರಿಕದಲ್ಲಿಯೇ ಚೀನಾಕ್ಕಿಂತ ಕೊರೋನಾ ವೈರಸ್ ಸೋಂಕಿತರು ಹೆಚ್ಚಾಗಿದ್ದಾರೆ. ಲಾಕ್ ಡೌನ್ ಮಾಡಿದರೂ ಇಟಲಿ, ಸ್ಪೇನ್ ಹಾಗೂ ಅಮೆರಿಕದಂಥ ಆರ್ಥಿಕವಾಗಿ ಮುಂದುವರಿದ ದೇಶಗಳ ನಾಗರಿಕರು ಬೀದಿಗೆ ಬಂದಿದ್ದರ ಪರಿಣಾಮ ಇಂಥ ಶಿಕ್ಷೆ ಅನುಭವಿಸುತ್ತಿವೆ. ಭಾರತದಲ್ಲಿ ಸ್ಥಿತಿ ಹೀಗೆ ಆಗಬಾರದು. ದಯವಿಟ್ಟು ಮನೆಯಲ್ಲಿಯೇ ಇರಿ. ಏನೂ ಆಗಲ್ಲವೆಂದು ನಿರ್ಲಕ್ಷಿಸಿ ರಸ್ತೆಗೆ ಇಳಿದರೆ ಅಪಾಯ ಕಟ್ಟಿಟ್ಟ ಬುತ್ತಿ...
ಯಶ್ ಚಿತ್ರದ ನಾಯಕಿಗೂ ಕೊರೋನಾ ಕಾಟ; 14 ದಿನ ಕ್ವಾರಂಟೈನ್ ಅನಿವಾರ್ಯ!.
ರಾಕಿಂಗ್ ಸ್ಟಾರ್ ಯಶ್ ನಟಿಗೆ ಆರೋಗ್ಯದಲ್ಲಿ ಏರು-ಪೇರು ಕಾಣಿಸಿಕೊಂಡಿದೆ. 14 ದಿನಗಳ ಹೋಂ ಕ್ವಾರಂಟೈನ್ ನಂತರ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಮೂಲಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಎಚ್ಚರ...! ಬಂದಿದೆ, ಕೊರೋನಾ ಮ್ಯಾಪ್ ಹೆಸರಲ್ಲಿ ಮಾಹಿತಿ ಕದಿಯುವ ವೈರಸ್!.
ಮೊಬೈಲ್‌ನಲ್ಲಿ ಬರುವ ಕೊರೋನಾ ಕುರಿತ ಮಾಹಿತಿಗಳಿಗಾಗಿ ಜನ ಬೆನ್ನುಬಿದ್ದಿರುವಾಗಲೇ ಹ್ಯಾಕರ್‌ಗಳು, ಕೊರೋನಾ ಹೆಸರಿನಲ್ಲೇ ಮಾಲ್‌ವೇರ್‌ಗಳನ್ನು ಸೃಷ್ಟಿಸಿ, ಮಾಹಿತಿ ಕದಿಯುತ್ತಿರುವ ಆಘಾತಕಾರಿ ಬೆಳವಣಿಗೆ ಮಹಾರಾಷ್ಟ್ರದಲ್ಲಿ ಕಂಡುಬಂದಿದೆ. ಹೀಗಾಗಿ ಇಂಥ ಮಾಹಿತಿ ಕದಿಯುವ ಲಿಂಕ್‌ಗಳ ಬಗ್ಗೆ ಎಚ್ಚರವಾಗಿರಿ ಎಂದು ಮಹಾರಾಷ್ಟ್ರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಕೊರೋನಾ ವೈರಸ್ ಬಿಸಿ ಮುಟ್ಟದ ಕೆಲವಷ್ಟೇ ದೇಶಗಳು ಇವು!.
ಚೀನಾದ ವುಹಾನ್‌ನಿಂದ ಪ್ರಾರಂಭವಾದ ಕರೋನಾ ವೈರಸ್ ಇಂದು ವಿಶ್ವದ ಹಲವು ದೇಶಗಳಲ್ಲಿ ಹಾನಿಯನ್ನುಂಟುಮಾಡಿದೆ. ಚೀನಾದ ವೈರಸ್ ಕೊರೋನಾ ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಹರಡಿದೆ. ದಿನ ದಿನೇ ತನ್ನ ವ್ತಾಪ್ತಿ ವಿಸ್ತರಿಸುತ್ತಿರುವ ಕೊರೋನಾಗೆ ಇಗಾಗಲೇ ಸಾವಿರಾರು ಜನ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆಯೂ ಏರುತ್ತಿದೆ. ಇದು ಹರಡದಂತೆ ತಡೆಗಟ್ಟಲು ಹಲವು ದೇಶಗಳು ಲಾಕ್‌ಡೌನ್ ಆಗಿವೆ. ಆದರೆ ವಿಶ್ವದ ಕೆಲವು ದೇಶಗಳಿಗೆ ವೈರಸ್ ಇನ್ನೂ ಹರಡಿಲ್ಲ.ಈ ಕೆಲವು ದೇಶಗಳಲ್ಲಿ ಶಂಕಿತರು ಕಂಡು ಬಂದಿದ್ದರೂ, ಅವರ ವರದಿಗಳು ನೆಗಟಿವ್ ಆಗಿವೆ.
ಭಾರತ ಲಾಕ್‌ಡೌನ್; ದೆಹಲಿಯಿಂದ ಬಿಹಾರ ತಲುಪಲು 3 ಕಾರ್ಮಿಕರ ಐಡಿಯಾಗೆ ದಂಗಾದ ಪೊಲೀಸ್!.
ಕೊರೋನಾ ವೈರಸ್‌ನಿಂದ ಭಾರತ ಲಾಕ್‌ಡೌನ್ ಆಗಿದೆ. ಪ್ರಧಾನಿ ಮೋದಿ ಲಾಕ್‌ಡೌನ್ ಘೋಷಣೆ ಮಾಡುತ್ತಿದ್ದಂತೆ ಪಣ್ಣ, ನಗರಗಳಲ್ಲಿನ ಕೂಲಿ ಕಾರ್ಮಿಕರು ಬೆಚ್ಚಿ ಬಿದ್ದಿದ್ದಾರೆ. ಕಾರಣ ಇತ್ತ ಕೂಲಿಯೂ ಇಲ್ಲ, ಅತ್ತ ಮನೆ ಸೇರಲು ಸಾರಿಗೆ ವ್ಯವಸ್ಥೆಯೂ ಇಲ್ಲ. ಹೇಗಾದರೂ ಮಾಡಿ ಮನೆ ಸೇರಿಕೊಂಡರೆ ಸಾಕು, ಗೆಡ್ಡೆ ಗೆಣಸು ತಿಂದಾದ್ರೂ ಬದುಕಬಲ್ಲೆ ಎಂದುಕೊಂಡು ಮೂವರು ಕಾರ್ಮಿಕರು ದೆಹಲಿಯಿಂದ ತಮ್ಮ ಊರಾದ ಬಿಹಾರ ಸೇರಲು ಉಪಾಯ ಮಾಡಿದ್ದಾರೆ. ಇವರ ಐಡಿಯಾಗೆ ಉತ್ತರ ಪ್ರದೇಶದ ಪೊಲೀಸರೇ ದಂಗಾಗಿ ಹೋಗಿದ್ದಾರೆ.