Asianet Suvarna News Asianet Suvarna News

ಕೊರೋನಾ ತಾಂಡವ, ಆಂಬ್ಯುಲೆನ್ಸ್ ಸಿಬ್ಬಂದಿಯ ಯಡವಟ್ಟು, ಕ್ಯಾಮೆರಾದಲ್ಲಿ ಸೆರೆ!

ಅತ್ತ ಕೊರೋನಾ ತಾಂಡವ, ಇತ್ತ ಸಿಬ್ಬಂದಿಯ ಎಡವಟ್ಟು| ಕ್ಯಾಮೆರಾದಲ್ಲಿ ಸೆರೆಯಾಯ್ತು ಆಂಬ್ಯುಲೆನ್ಸ್ ಸಿಬ್ಬಂದಿಯ ಬೇಜವಾಬ್ದಾರಿ ನಡೆ| ಸಿಬ್ಬಂದಿಯೇ ಹೀಗ್ಮಾಡಿದ್ರೆ ಹೇಗಪ್ಪಾ?

Ambulance Staff Throw Hand Gloves On Public Road While Coming To Pick Coronavirus Suspects in Mumbai
Author
Bangalore, First Published Mar 28, 2020, 3:26 PM IST

ಮುಂಬೈ(ಮಾ.28): ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಜಂಟಿಯಾಗಿ ಕಟ್ಟು ನಿಟ್ಟಿನ ಕ್ರಮ ವಹಿಸುತ್ತಿದೆ. ಹೀಗಿದ್ದರೂ ಕೆಲವರ ಬೇಜವಾಬ್ದಾರಿತನ ನಡೆ, ಈ ಮಾರಕ ರೋಗ ಹರಡುವಲ್ಲಿ ಬೆಂಕಿಗೆ ಸುರಿದ ತುಪ್ಪದಂತೆ ಕೆಲಸ ಮಾಡುತ್ತಿದೆ. ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ಇದಕ್ಕೆ ಸಾಕ್ಷಿ ಎಂಬಂತಿದೆ.

ಹೌದು ಮುಂಬೈನ ಅಂಧೇರಿಯ ಬಿಂದ್ರಾ ಕಾಂಪ್ಲೆಕ್ಸ್ ಬಳಿ ನಡೆದ ಘಟನೆಯ ವಿಡಿಯೋ ಇದಾಗಿದೆ. ಇಲ್ಲಿ ಕೊರೋನಾ ಶಂಕಿತರನ್ನು ಕರೆದೊಯ್ಯಲು ಬಂದಿದ್ದ ಆಂಬ್ಯುಲೆನ್ಸ್ ಸಿಬ್ಬಂದಿ ತಾನು ಧರಿಸಿದ್ದ ಗ್ಲೌಸ್‌ಗಳನ್ನು ರಸ್ತೆ ಬದಿಯಲ್ಲೇ ಎಸೆದು ತೆರಳಿರುವ ದೃಶ್ಯಗಳು ಇದರಲ್ಲಿವೆ. ಹೀಗಿರುವಾಗ ಸಿಬ್ಬಂದಿಯ ಈ ಪುಟ್ಟ ಬೇಜವಾಬ್ದಾರಿ ನಡೆದ ಎಷ್ಟು ಜನರ ಜೀವಕ್ಕೆ ಸಂಕಷ್ಟವಾಗಲಿದೆ ಎಂಬುವುದು ಯೋಚಿಸಬೇಕಾದ ವಿಚಾರವಾಗಿದೆ. 

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಇನ್ನು ಭಾರತದಲ್ಲಿ ಅತಿ ಹೆಚ್ಚು ಸೋಂಕಿತರು ಮಹಾರಾಷ್ಟ್ರದಲ್ಲಿದ್ದಾರೆಂಬುವುದು ಅಂಕಿ ಅಂಶಗಳಿಂದ ಬಯಲಾಗಿದೆ. ಇಲ್ಲಿ ಕೊರೋನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪೀಡಿತರ ಸಂಖ್ಯೆ 150ರ ಗಡಿ ದಾಟಿದೆ. ಸದ್ಯ ಕೊರೋನಾ ನಿಯಂತ್ರಿಸಲು ಇಡೀ ದೇಶದಾದ್ಯಂತ ಲಾಕ್‌ಡೌನ್‌ ಹೇರಿದ್ದು, ಇಂತಹ ಸಂದರ್ಭದಲ್ಲಿ ಚಿಕ್ಕ ಪುಟ್ಟ ಬಬೇಜವಾಬ್ದಾರಿ ನಡೆಯೂ ಮಾರಕವಾಗಿ ಪರಿಣಮಿಸುತ್ತವೆ ಎಂಬಬುವುದರಲ್ಲಿ ಅನುಮಾನವಿಲ್ಲ.

Follow Us:
Download App:
  • android
  • ios