ಸ್ಯಾಂಡಲ್‌ವುಡ್‌ ಕಿಲಾಡಿ ಕಿಂಗ್‌, ನವರಸ ನಾಯಕ ಜಗೇಶ್‌ ಕೊರೋನಾ ವೈರಸ್‌ಯಿಂದ ಎಚ್ಚರವಾಗಿರಲು ಜನರಲ್ಲಿ ಮನವಿ ಮಾಡುತ್ತಿದ್ದಾರೆ.

ಚೀನಾದಿಂದ ಭಾರತಕ್ಕೆ ಬಂದಿರುವ ಕೊರೋನಾ ವೈರಸ್‌ ದಿನೇ ದಿನೇ ಕಾಡ್ಗಿಚ್ಚಿನಂತೆ ಹಳ್ಳಿ ಹಳ್ಳಿಗೂ ಹಬ್ಬುತ್ತಿವೆ. ಈಗಾಗಲೇ ಭಾರತದಲ್ಲಿ ಈ ರೋಗ ಮೂರನೇ ಹಂತ ತಲುಪಿದೆ. ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಕಾಲ ಭಾರತ ಲಾಕ್‌ಡೌಕ್‌ ಘೋಷಣೆಯೂ ಮಾಡಿದ್ದಾರೆ.  ಅನಗತ್ಯವಾಗಿ ಸಾರ್ವಜನಿಕರು ರಸ್ತೆಗೆ ಇಳಿಯದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅದನ್ನೂ ಮೀರಿ ಕೆಲ ಪುಂಡ-ಪೋಕರಿಗಳು ಜಾಲಿ ರೈಡ್ ಎಂದೆಲ್ಲಾ ಸುತ್ತಾಡುತ್ತಿರುವುದು ನಿರ್ಲಕ್ಷ್ಯ ಮಾಡುವಂಗಿಲ್ಲ.

8 ವರ್ಷ ಹಿಂದೆ ಭೇಟಿಯಾದ ದೇವರ ಮಗನಿಗೆ ವೀಲ್‌ಚೇರ್‌ ನೀಡಿದ 'ನಾಯಕ'!

ಚಾಚೂ ತಪ್ಪದೆ ಪ್ರಧಾನಿ ಮಾತುಗಳನ್ನು ಪಾಲಿಸುತ್ತಿರುವ ಜಗ್ಗಣ್ಣ ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ. ವಿಶ್ವಕ್ಕೆ ದೊಡ್ಡಣ್ಣ ನಾನು ಎಂದು ಮರೆಯುತ್ತಿರುವ ಅಮೆರಿಕಾ ಬಗ್ಗೆ ಮಾತನಾಡಿದ್ದಾರೆ.  ' ವಿಶ್ವಕ್ಕೆ ದೊಡ್ಡಣ್ಣ ನಾನು ಎನ್ನುತ್ತಿದ್ದ #america ಕೊರೋನಾ ಮಾರಿ ಪ್ರವೇಶದಿಂದ ನಡುಗುತ್ತಿದೆ! ಕಾರಣ ಭಯವಲ್ಲ ಅವಿವೇಕಿ ಸಮುದಾಯ ಏನೂ ಆಗದು ಎಂದು ಬೀದಿಗೆ ಪಬ್ಬಿಗೆ ತೆವಲಿಗೆ ರಸ್ತೆಗಿಳಿದ ಮಹಾಮಾರಿ ವಕ್ಕರಿಸಿದೆ! ಎಚ್ಚರ Dont underestimate ಬೆಂಗಳೂರು ಪಕ್ಕ ತಮಕೂರಿಗೂ ನುಗ್ಗಿದೆ! ಸ್ವಲ್ಪ ಯಾಮಾರಿದ್ರೂ ರಾಜ್ಯಕ್ಕೆ ಕಂಟಕ!' ಎಂದು ಬರೆದುಕೊಂಡಿದ್ದಾರೆ.

ವೈರಸ್‌ ಚೀತಾದಿಂದಲ್ಲೇ ಇರಬಹುದು ಆದರೆ ಇದರಿಂದ ಹೆಚ್ಚಿನ ಪರಿಣಾಮ ಎದುರಿಸುತ್ತಿರುವುದ ಅಮೇರಿಕಾ. ಆರ್ಥಿಕವಾಗಿ ಮುಂದು ವರೆದ ದೇಶಗಳಾದ ಇಟಲಿ, ಸ್ಪೇನ್‌ ಹಾಗೂ ಅಮೆರಿಕಾದ ನಾಗರಿಕರು ಲಾಕ್‌ಡೌನ್‌ ಮಾಡಿದರೂ ನಿರ್ಲಕ್ಷಿಸಿ ಬೀದಿಗೆ ಬಂದ ಪರಿಣಾಮವೇ ಈ ಶಿಕ್ಷೆ.

ಚಾಚೂ ತಪ್ಪದೇ ಪ್ರಧಾನಿ ಮಾತುಗಳನ್ನು ಪಾಲಿಸುತ್ತಿರುವ ಜಗ್ಗಣ್ಣ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ. ವಿಶ್ವಕ್ಕೆ ದೊಡ್ಡಣ್ಣ ತಾನೆಂದು ಮೆರೆಯುವ ಅಮೆರಿಕದ ಹಾಗೂ ಅಲ್ಲಿಯ ಜನರ ಬಗ್ಗೆ ಕಿಡಿಕಾರಿದ್ದಾರೆ. 'ವಿಶ್ವಕ್ಕೆ ದೊಡ್ಡಣ್ಣ ನಾನು ಎನ್ನುತ್ತಿದ್ದ #America ಕೊರೋನಾ ಮಾರಿಯ ಅಟ್ಟಹಾಸದಿಂದ ನಡುಗುತ್ತಿದೆ! ಕಾರಣ ಭಯವಲ್ಲ. ಅವಿವೇಕಿ ಸಮುದಾಯ ಏನೂ ಆಗದೆಂದು ಬೀದಿಗೆ ಇಳಿಯಿತು. ತೆವಲು ತೀರಿಸಿಕೊಳ್ಳಲು ಪಬ್ಬಿಗೆ ಹೋಯಿತು. ಅದಕ್ಕೇ ಬಂದ ಮಾರಿಯನ್ನು ಕಳುಹಿಸಲು ಆಗದೇ ಅನುಭವಿಸುತ್ತಿದೆ. ಎಚ್ಚರ Don't underestimate. ಈಗಾಗಲೇ ಬೆಂಗಳೂರು ಪಕ್ಕ ತಮಕೂರಿಗೂ ಈ ರೋಗ ನುಗ್ಗಿದೆ! ಸ್ವಲ್ಪ ಯಾಮಾರಿದ್ರೂ ರಾಜ್ಯಕ್ಕೇ ಕಂಟಕ!' ಎಂದು ಬರೆದು ಕೊಂಡಿದ್ದಾರೆ.

ಈ ವೈರಸ್ ಜನಕ ಚೀನಾವಾದರೂ ಇತರೆ ದೇಶಗಳು ಈ ರೋಗದಿಂದ ಹೆಚ್ಚು ಅನುಭವಿಸುತ್ತಿವೆ. ಅಮೆರಿಕದಲ್ಲಿ ಆಗಲೇ ಚೀನಾಕ್ಕಿಂತಲೂ ಹೆಚ್ಚು ಸೋಂಕಿತರು ಇದ್ದಾರೆ.  ಆರ್ಥಿಕವಾಗಿ ಮುಂದು ವರೆದ ದೇಶಗಳಾದ ಇಟಲಿ, ಸ್ಪೇನ್‌ ಹಾಗೂ ಅಮೆರಿಕದ ನಾಗರಿಕರು ಲಾಕ್‌ಡೌನ್‌ ಮಾಡಿದರೂ, ನಿರ್ಲಕ್ಷಿಸಿ ಬೀದಿಗೆ ಬಂದ ಪರಿಣಾಮವೇ ಇಂಥ ಅವಸ್ಥೆ ಬಂದಿರುವುದು.