ಮದ್ಯ ಸೇವಿಸಿದರೆ ಕೊರೋನಾದಿಂದ ಗುಣಮುಖರಾಗಬಹುದು ಎಂಬ ವದಂತಿ| ಮದ್ಯ ಕುಡಿದರೆ ಗುಣಮುಖ ಎಂದು ಮೆಥೆನಾಲ್‌ ಸೇವಿಸಿದ 300 ಜನರ ಸಾವು!

ಟೆಹ್ರಾನ್‌(ಮಾ.28): ಮದ್ಯ ಸೇವಿಸಿದರೆ ಕೊರೋನಾದಿಂದ ಗುಣಮುಖರಾಗಬಹುದು ಎಂಬ ವದಂತಿ ನಂಬಿ ಕೈಗಾರಿಕೆಗಳಲ್ಲಿ ಬಳಸುವ ಮೆಥೆನಾಲ್‌ ಸೇವಿಸಿದ ಪರಿಣಾಮ 300ಕ್ಕೂ ಹೆಚ್ಚು ಜನ ಸಾವನ್ನಪ್ಪಿ, 1000ಕ್ಕೂ ಹೆಚ್ಚು ಜನ ಅನಾರೋಗ್ಯ ಪೀಡಿತರಾಗಿರುವ ಘಟನೆ ಇರಾನ್‌ನಲ್ಲಿ ಸಂಭವಿಸಿದೆ.

ಇರಾನ್‌ಲ್ಲಿ ಮದ್ಯಪಾನಕ್ಕೆ ನಿಷೇಧವಿದೆ. ಹೀಗಾಗಿ ಜನ ಕೊರೋನಾ ಭೀತಿಯಿಂದಾಗಿ ಬಚಾವ್‌ ಆಗಲು, ಕೈಗಾರಿಕೆಗಳಲ್ಲಿ ಬಳಸುವ ಮೆಥೆನಾಲ್‌ ಅನ್ನೇ ಕುಡಿದಿದ್ದಾರೆ. ಇದರಿಂದ ಆರೋಗ್ಯ ಹದಗೆದ್ದು ಕಳೆದ ಕೆಲ ದಿನಗಳಿಂದ 300ಕ್ಕೂ ಹೆಚ್ಚು ಜನ ಸಾವನ್ನಪಿದ್ದಾರೆ.

ಕೊರೋನಾ ತಾಂಡವ, ಆಂಬ್ಯುಲೆನ್ಸ್ ಸಿಬ್ಬಂದಿಯ ಯಡವಟ್ಟು, ಕ್ಯಾಮೆರಾದಲ್ಲಿ ಸೆರೆ!

ಇರಾನ್‌ನಲ್ಲಿ ಈವರೆಗೆ 29000 ಮಂದಿಗೆ ಕೊರೋನಾ ಸೋಂಕು ದೃಢವಾಗಿದ್ದು, 2200 ಜನ ಸಾವನ್ನಪ್ಪಿದ್ದಾರೆ.