SpiceJet air hostess: ಲೇಜಿ ಲಾಡ್‌ ಹಾಡಿಗೆ ಡ್ಯಾನ್ಸ್ ಮಾಡಿದ ಸ್ಪೈಸ್ ಜೆಟ್ ಗಗನಸಖಿಯ ವಿಡಿಯೋ ವೈರಲ್

  • ಲೇಜಿ ಲಾಡ್‌ ಹಾಡಿಗೆ ಡ್ಯಾನ್ಸ್ ಮಾಡಿದ ಗಗನಸಖಿ
  • ಸ್ಪೈಸ್ ಜೆಟ್ ಗಗನಸಖಿಯ ಡ್ಯಾನ್ಸ್ ವಿಡಿಯೋ ವೈರಲ್
  • ಗಗನಸಖಿಯ ಡ್ಯಾನ್ಸ್  ಗೆ ನೆಟಿಜನ್‌ಗಳು ಫಿದಾ 
SpiceJet air hostess dances to Lazy Lad at airport

ಸೋಶಿಯಲ್ ಮೀಡಿಯಾಗಳು ಎಂಬುದು ಈಗ ಬಹುತೇಕರ ಬದುಕಿನಲ್ಲಿ ಅವಿಭಾಜ್ಯ ಅಂಗ ಎನಿಸಿಕೊಂಡಿದೆ. ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾದಲ್ಲಿ (social media) ಸಕ್ರಿಯರಾಗಿದ್ದಾರೆ. ಅದರಲ್ಲೂ ಒಂದಷ್ಟು ಪ್ರತಿಭಾವಂತರು ಸೋಶಿಯಲ್ ಮೀಡಿಯಾದ ಕಾರಣದಿಂದಲೇ ಖ್ಯಾತಿ ಗಳಿಸಿದ್ದೂ ಇದೆ. ಹೀಗೆ ಯುವ ಜನರಿಗೆ ಖುಷಿ ನೀಡುವ ಸಂಗತಿಗಳಲ್ಲಿ ಇನ್‌ಸ್ಟಾ ರೀಲ್ ಕೂಡಾ ಒಂದು. ಪ್ರಸಿದ್ಧ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸಾಕಷ್ಟು ಉತ್ಸಾಹಿಗಳು ಖುಷಿಪಡುತ್ತಾರೆ. ಹೀಗೆ ಖುಷಿಯಿಂದ ಕುಣಿಯುವರ ಕೆಲವೊಂದು ವಿಡಿಯೋಗಳು ಕ್ಷಣಮಾತ್ರದಲ್ಲಿ ವೈರಲ್ ಆಗುತ್ತವೆ. ಸದ್ಯ ಅಂತಹದ್ದೇ ವಿಡಿಯೋವೊಂದು ಈಗ ನೆಟ್ಟಿಗರ ಗಮನ ಸೆಳೆದಿದೆ.

ಸ್ಪೈಸ್‌ಜೆಟ್ (SpiceJet ) ಗಗನಸಖಿ ಉಮಾ ಮೀನಾಕ್ಷಿ (Uma Meenakshi) ಅವರು ವಿಮಾನ ನಿಲ್ದಾಣದಲ್ಲಿ (airport) ಈಗ ಹೊಸದೊಂದು ಹಾಡಿಗೆ ಹೆಜ್ಜೆ ಹಾಕಿದ್ದು ಅದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಈ ಹೊಸ ಕ್ಲಿಪ್ ಅನ್ನು ನೆಟಿಜನ್‌ಗಳು ಇಷ್ಟಪಟ್ಟಿದ್ದು, ಸಖತ್ ವೈರಲ್ ಆಗಿದೆ. ಹೊಸ ವಿಡಿಯೋದಲ್ಲಿ ಉಮಾ ವಿಮಾನ ನಿಲ್ದಾಣದಲ್ಲಿ ಲೇಜಿ ಲಾಡ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. 

ಖಾಲಿ ಫ್ಲೈಟ್‌ನಲ್ಲಿ ಟಚ್ ಇಟ್ ಸಾಂಗ್‌ಗೆ ಗಗನ ಸಖಿ ಡ್ಯಾನ್ಸ್

 

 
 
 
 
 
 
 
 
 
 
 
 
 
 
 

A post shared by Uma Meenakshi (@yamtha.uma)

ಈ ಹಿಂದೆ ಕೂಡ ಗಗನಸಖಿ (air hostess) ಉಮಾ ಅವರು ವಿಮಾನ ನಿಲ್ದಾಣದಲ್ಲಿ ಚಲಿಸುವ ವಾಕ್‌ವೇನಲ್ಲಿ ನೃತ್ಯ ಮಾಡುವ ಹೊಸ ವೀಡಿಯೊ Instagram ನಲ್ಲಿ ಪೋಸ್ಟ್ ಮಾಡಿದ್ದರು. ಅದನ್ನು ವೀಕ್ಷಿಸಿದ್ದ ಬಳಿಕ ಸಾಮಾಜಿಕ ಮಾಧ್ಯಮ ಬಳಕೆದಾರರು ಸಂಪೂರ್ಣ ಥ್ರಿಲ್ ಆಗಿದ್ದರು.

ವಿಮಾನದಲ್ಲೇ ಬೆತ್ತಲಾಗಿ ಇಟಾಲಿಯನ್ ಸ್ಮೂಚ್ ಬೇಕೆಂದ..! ಗಗನಸಖಿಯರು ಸುಸ್ತು

 ‘ಟಚ್ ಇಟ್’  ಹಾಡಿಗೆ ಫಿದಾ ಆಗಿದ್ದ ಜನ: ಈ ಹಿಂದೆ ಇಂಡಿಗೋ (indigo) ಗಗನಸಖಿ ಖಾಲಿ ಇರುವ ವಿಮಾನದಲ್ಲಿ ಡ್ಯಾನ್ಸ್ (dance) ಮಾಡಿದ್ದ ವೀಡಿಯೋವನ್ನು ನೋಡಿದ ನೆಟ್ಟಿಗರು ಫಿದಾ ಆಗಿದ್ದರು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಗಗನಸಖಿ ವೃಷ್ ಪಸ್ತೆಲ್  ಸಖತ್ ಆಗಿ ಸ್ಟೆಪ್ ಹಾಕಿದ್ದರು. ಗಾಯಕ ಕಿಡಿಸ್ ‘ಟಚ್ ಇಟ್’ ಹಾಡಿಗೆ ಹೆಜ್ಜೆ ಹಾಕಿದ್ದು, ಆ ವೀಡಿಯೋವನ್ನು ಏವಿಯೇಷನ್ ಲೈಫ್ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿತ್ತು. ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು ಸೋಷಿಯಲ್ ಮೀಡಿಯಾ ಬಳಕೆದಾರರು ಈಗ ಈ ಹಾಡಿನ ಹಿಂದೆ ಬಿದ್ದಿದ್ದಾರೆ.  

Disha Patani Dance; ದಿಶಾ ಪಟಾಣಿ ಡ್ಯಾನ್ಸ್ ವಿಡಿಯೋ ವೈರಲ್, ಸಪೂರ ಸೊಂಟದ ಮೋಡಿ!

ವಿಡಿಯೊದಲ್ಲಿ, ವಿಮಾನ ನಿಲುಗಡೆ ಸಮಯದಲ್ಲಿ ಗಗನಸಖಿ  ಟಚ್ ಇಟ್ ಗೆ ಡ್ಯಾನ್ಸ್ ಮಾಡುವುದನ್ನು ಕಾಣಬಹುದು. ವಿಮಾನ (airplane) ಖಾಲಿಯಾಗಿತ್ತು. ಆಕೆಯ ವಿಡಿಯೋವನ್ನು ಆಕೆಯ ಸಹೋದ್ಯೋಗಿಯೊಬ್ಬರು ರೆಕಾರ್ಡ್ ಮಾಡಿದಂತೆ ಕಾಣುತ್ತದೆ. ಡ್ಯಾನ್ಸ್ ನೋಡಿ ಜನರು ಮೆಚ್ಚಿಕೊಂಡಿದ್ದಾರೆ. ಶಟಪ್ ಎಂದು ಆಕೆ ವಿಡಿಯೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ನೀವು ಸೋಷಿಯಲ್ ಮಿಡಿಯಾ ಟ್ರೆಂಡ್‌ಗಳನ್ನು ನೋಡುತ್ತಲೇ ಇರುವವರಾಗಿದ್ದರೆ ಇಂತಹ ಅನೇಕ ವೈರಲ್ ವಿಡಿಯೋಗಳು ನಿಮ್ಮ ಗಮನ ಸೆಳೆಯುತ್ತದೆ.

Atrangi Re song out: ಸಖತ್‌ ಆಗಿ ಸ್ಟೆಪ್ಸ್ ಹಾಕಿದ್ದಾರೆ ಸಾರಾ!

ಪ್ರತಿದಿನ ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ರೀತಿಯ ವಿಡಿಯೋಗಳು ಮತ್ತು ಫೋಟೋಗಳು  ಬಹಳ ವೈರಲ್ ಆಗುತ್ತವೆ. ಈ ರೀತಿ ವಿಡಿಯೋಗಳು ವೈರಲ್ ಆದಾಗ ಅದರಲ್ಲಿರುವ ವ್ಯಕ್ತಿಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಫೇಮಸ್ ಆಗಿ ಬಿಡುತ್ತಾರೆ. 

Viral Video: ತಲೆಗೆ ಕೈಗೆ ಫುಲ್ ಬ್ಯಾಂಡೇಜ್, ಆದ್ರೂ ಡ್ಯಾನ್ಸ್‌ ಜೋಶ್‌ಗೆ ಕಮ್ಮಿ ಇಲ್ಲ

Latest Videos
Follow Us:
Download App:
  • android
  • ios