ಖಾಲಿ ವಿಮಾನದಲ್ಲಿ ಗಗನ ಸಖಿಯ ಡ್ಯಾನ್ಸ್ ಇಂಡಿಗೋ ಗಗನಸಖಿಯ ಸಖತ್ ಡ್ಯಾನ್ಸ್ ವೈರಲ್

ನೀವು ಸೋಷಿಯಲ್ ಮಿಡಿಯಾ ಟ್ರೆಂಡ್‌ಗಳನ್ನು ನೋಡುತ್ತಲೇ ಇರುವವರಾಗಿದ್ದರೆ ಈ ಗಗನ ಸಖಿಯ ಡ್ಯಾನ್ಸ್ ಖಂಡಿತಾ ನೋಡಿರುತ್ತೀರಿ. ಶ್ರೀಲಂಕಾದ ಸಿಂಗರ್ ಯೊಹಾನಿ ಹಾಡಿದ ಮನಿಕೆ ಮಗೆ ಹಿತೆ ಎನ್ನುವ ಸಿನ್ಹಾಲ ಭಾಷೆಯ ಹಾಡಿಗೆ ಗಗನ ಸಖಿ ಖಾಲಿ ವಿಮಾನದಲ್ಲಿ ಸಖತ್ ಡ್ಯಾನ್ಸ್ ಮಾಡೋನದನ್ನು ನೋಡಿದ್ದೀರಲ್ಲ. ಈಗ ಇಂಡಿಗೋ ಗಗನಸಖಿಯ ಸರದಿ.

ಕಿಡಿ ವೈರಲ್ ಸಾಂಗ್ ಚಟ್‌ ಇಟ್‌ಗೆ ಇಂಡಿಗೋ ಗಗನಸಖಿ ಡ್ಯಾನ್ಸ್ ಮಾಡಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು ಸೋಷಿಯಲ್ ಮೀಡಿಯಾ ಬಳಕೆದಾರರು ಈಗ ಈ ಹಾಡಿನ ಹಿಂದೆ ಬಿದ್ದಿದ್ದಾರೆ. ಈ ವಿಡಿಯೋ 550 ಸಾವಿರ ವ್ಯೂಸ್ ಗಳಿಸಿದೆ. ವೃಷ್ ಪಸ್ತೆಲ್ ಎನ್ನುವ ಗಗನಸಖಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿದ್ದು ನಂತರ ಎಲ್ಲೆಡೆ ಶೇರ್ ಆಗಿದೆ.

ಅಪರಿಚಿತ ಮಗುವಿಗೆ ವಿಮಾನದಲ್ಲೇ ಎದೆ ಹಾಲುಣಿಸಿದ ಏರ್ ಹಾಸ್ಟೆಸ್

ವಿಡಿಯೊದಲ್ಲಿ, ವಿಮಾನ ನಿಲುಗಡೆ ಸಮಯದಲ್ಲಿ ಏರ್ ಹೋಸ್ಟೆಸ್ ಟಚ್ ಇಟ್ ಗೆ ಡ್ಯಾನ್ಸ್ ಮಾಡುವುದನ್ನು ಕಾಣಬಹುದು. ವಿಮಾನ ಖಾಲಿಯಾಗಿತ್ತು. ಆಕೆಯ ವಿಡಿಯೋವನ್ನು ಆಕೆಯ ಸಹೋದ್ಯೋಗಿಯೊಬ್ಬರು ರೆಕಾರ್ಡ್ ಮಾಡಿದಂತೆ ಕಾಣುತ್ತದೆ. ಡ್ಯಾನ್ಸ್ ನೋಡಿ ಜನರು ಮೆಚ್ಚಿಕೊಂಡಿದ್ದಾರೆ. ಶಟಪ್ ಎಂದು ಆಕೆ ವಿಡಿಯೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.

View post on Instagram

ಈ ಹಿಂದೆ ಮಲೈಕಾ ಅರೋರಾ ಮತ್ತು ಆಕೆಯ ಸಹೋದರಿ ಟಚ್ ಇಟ್ ಗೆ ನೃತ್ಯ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೀಡಿಯೊವನ್ನು ಇಲ್ಲಿ ನೋಡಿ:

View post on Instagram

YouTube video player