MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ತೆಲುಗು ನಿರ್ದೇಶಕನ ಕನ್ನಡ ಸಿನಿಮಾದಲ್ಲಿ ಸುದೀಪ್; ಸದ್ದಿಲ್ಲದೆ ಮತ್ತೊಂದು ಸಿನಿಮಾ ಶುರು?

ತೆಲುಗು ನಿರ್ದೇಶಕನ ಕನ್ನಡ ಸಿನಿಮಾದಲ್ಲಿ ಸುದೀಪ್; ಸದ್ದಿಲ್ಲದೆ ಮತ್ತೊಂದು ಸಿನಿಮಾ ಶುರು?

ನಟ ಸುದೀಪ್ ಅವರು ತಮ್ಮ ಮಾಸ್ ಇಮೇಜ್‌ನಿಂದ ಹೊರಬಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಸಹಾಯಕ ನಿರ್ದೇಶಕರೊಬ್ಬರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದು, 'ಬಿಲ್ಲ ರಂಗ ಬಾಷ' ಚಿತ್ರಕ್ಕೂ ಮುನ್ನವೇ ಈ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ.

2 Min read
Author : Kannadaprabha News
Published : Mar 02 2026, 09:38 AM IST
Share this Photo Gallery
  • FB
  • TW
  • Linkdin
  • Whatsapp
15
ನಟ ಸುದೀಪ್‌
Image Credit : Asianet News

ನಟ ಸುದೀಪ್‌

ನಟ ಸುದೀಪ್‌ ಅವರು ಸದ್ದಿಲ್ಲದೆ ಮತ್ತೊಂದು ಸಿನಿಮಾ ಶುರು ಮಾಡುವ ಸಾಧ್ಯತೆಗಳಿವೆ. ಈಗಾಗಲೇ ನಿರ್ದೇಶಕನ ಜೊತೆಗೆ ಅಂತಿಮ ಹಂತದ ಮಾತುಕತೆ ಆಗಿದೆ ಎನ್ನಲಾಗಿದೆ. ಅಂದಹಾಗೆ ಇವರು ತೆಲುಗಿನ ನಿರ್ದೇಶಕರು. ‘ಪುಷ್ಪ’ ಹಾಗೂ ‘ರಂಗಸ್ಥಳಂ’ ಚಿತ್ರಗಳ ನಿರ್ದೇಶಕ ಸುಕುಮಾರ್‌ ಅವರ ಸಹಾಯಕನಾಗಿದ್ದು, ಮೊದಲ ಬಾರಿಗೆ ಸುದೀಪ್‌ ಅವರಿಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

25
 ರೊಮ್ಯಾಂಟಿಕ್‌ ಕಾಮಿಡಿ
Image Credit : Asianet News

ರೊಮ್ಯಾಂಟಿಕ್‌ ಕಾಮಿಡಿ

ಇದು ರೊಮ್ಯಾಂಟಿಕ್‌ ಕಾಮಿಡಿ ಚಿತ್ರವಾಗಿದೆ. ಸತತವಾಗಿ ಆ್ಯಕ್ಷನ್‌ ಹಾಗೂ ಮಾಸ್‌ ಸಿನಿಮಾಗಳನ್ನೇ ಮಾಡಿಕೊಂಡು ಬಂದಿರುವ ಸುದೀಪ್‌ ಅವರು ಆ ರೀತಿಯ ಚಿತ್ರಗಳಿಂದ ಆಚೆ ಬಂದು ಬೇರೆ ರೀತಿಯ ಕತೆ ಹಾಗೂ ಪಾತ್ರಗಳ ನಿರೀಕ್ಷೆಯಲ್ಲಿದ್ದವರಿಗೆ ತೆಲುಗಿನ ನಿರ್ದೇಶಕರೊಬ್ಬರು ಹೇಳಿದ ಕತೆ ಇಷ್ಟವಾಗಿದೆಯಂತೆ. ಆ ಮೂಲಕ ಆ್ಯಕ್ಷನ್‌ ಇಮೇಜಿನ ಪಾತ್ರಗಳಿಂದ ಸುದೀಪ್‌ ಅವರು ಕೊಂಚ ಆಚೆ ಬರುವುದು ಖಾತ್ರಿ ಆಗಿದೆ.

Related Articles

Related image1
ಕಿಚ್ಚನ ಸಿನಿಮಾ ಜೀವನವನ್ನೇ ಬಾಯಿಗೆ ಬರಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ; ಆ ಘಟನೆಯನ್ನ ಬಿಚ್ಚಿಟ್ಟ ಸುದೀಪ್!
Related image2
ಸ್ಟಾರ್ ನಿರ್ದೇಶಕನ ಜೊತೆ ಲವ್, 3 ವರ್ಷಕ್ಕೆ ಡಿವೋರ್ಸ್! ಯಾರು ಈ ಸುದೀಪ್ ಸಿನಿಮಾ ನಟಿ?
35
ತೆಲುಗು ನಿರ್ದೇಶಕನ ಜೊತೆಗೆ ಕನ್ನಡ ಸಿನಿಮಾ
Image Credit : X

ತೆಲುಗು ನಿರ್ದೇಶಕನ ಜೊತೆಗೆ ಕನ್ನಡ ಸಿನಿಮಾ

‘ತೆಲುಗು ನಿರ್ದೇಶಕನ ಜೊತೆಗೆ ಮಾತುಕತೆ ನಡೆಯುತ್ತಿದೆ. ಯಾವಾಗ ಈ ಸಿನಿಮಾ ಸೆಟ್ಟೇರುತ್ತದೆ ಎಂಬುದು ಗೊತ್ತಿಲ್ಲ. ಆದರೆ, ತೆಲುಗು ನಿರ್ದೇಶಕನ ಜೊತೆಗೆ ಕನ್ನಡ ಸಿನಿಮಾ ಮಾಡುವುದು ಪಕ್ಕಾ’ ಎಂದು ಸುದೀಪ್‌ ಅವರ ಆಪ್ತ ಮೂಲಗಳು ತಿಳಿಸಿವೆ.

45
 ಕತೆ ಹಾಗೂ ಪಾತ್ರ
Image Credit : Colors Kannada

ಕತೆ ಹಾಗೂ ಪಾತ್ರ

‘ಮಾರ್ಕೆಟ್‌ನಲ್ಲಿ ಗೆದ್ದಿದೆ ಎನ್ನುವ ಕಾರಣಕ್ಕೆ ನಾನು ಅದೇ ರೀತಿಯ ಕತೆ ಅಥವಾ ಚಿತ್ರವನ್ನು ಒಪ್ಪುವುದಿಲ್ಲ. ನಾನು ಒಪ್ಪುವ ಸಿನಿಮಾ ನನಗೆ ಉತ್ಸಾಹ ನೀಡಬೇಕು, ಪಾತ್ರ ನನಗೆ ಖುಷಿ ಕೊಡುವಂತಿರಬೇಕು. ನಾನು ಹಿಂದೆ ಮಾಡಿದ ಪಾತ್ರಕ್ಕಿಂತ ಬೇರೆಯದ್ದೇ ಪಾತ್ರ ಆಗಿರಬೇಕು. ಅಥವಾ ನಾನು ಈ ಮೊದಲು ಮಾಡಿದ್ದರೂ ಅದು ಹೊಸತನದೊಂದಿಗೆ ಕೂಡಿರಬೇಕು. ಆ ರೀತಿಯಾಗಿದ್ದರೆ ಮಾತ್ರ ನಾನು ಒಪ್ಪುತ್ತೇನೆ’ ಎಂದು ನಟ ಸುದೀಪ್‌ ಅವರು ಈ ಮೊದಲು ಹೇಳಿಕೊಂಡಿದ್ದರು. ಈಗ ಅವರು ಇಷ್ಟಪಟ್ಟಿರುವಂತೆಯೇ ಕತೆ ಹಾಗೂ ಪಾತ್ರ ದೊರಕಿದೆಯಂತೆ.

ಇದನ್ನೂ ಓದಿ: ಕಲರ್ಸ್ ಜನಮೆಚ್ಚಿದ ಮಂಥರೆ ಇದೀಗ ಜೀ ಕನ್ನಡ ವಾಹಿನಿಯ ಲಕ್ಷ್ಮೀ ನಿವಾಸ ಸೀರಿಯಲ್‌ಗೆ ಖಳನಾಯಕಿ

55
ಬಿಲ್ಲ ರಂಗ ಬಾಷ’
Image Credit : X

ಬಿಲ್ಲ ರಂಗ ಬಾಷ’

ಮತ್ತೊಂದು ಮಾಹಿತಿ ಪ್ರಕಾರ ‘ಬಿಲ್ಲ ರಂಗ ಬಾಷ’ ಚಿತ್ರಕ್ಕೆ ಮೊದಲೇ ಈ ರೊಮ್ಯಾಂಟಿಕ್‌ ಕತೆಯ ಸಿನಿಮಾ ಸೆಟ್ಟೇರುವ ಸಾಧ್ಯತೆಗಳಿವೆ. ಇನ್ನೂ ಈ ಹೊಸ ಚಿತ್ರದ ನಿರ್ಮಾಣ ಸಂಸ್ಥೆ, ನಿರ್ದೇಶಕರ ಹೆಸರು ಇನ್ನಷ್ಟೇ ಗೊತ್ತಾಗಬೇಕಿದೆ.

ಇದನ್ನೂ ಓದಿ: 90s ಕಿಡ್ಸ್ ಹೃದಯ ಹಿಂಡಿದ ಕನ್ನಡದ ಸಿನಿಮಾಗಳು; Gen Zಗಳು ಮಿಸ್ ಮಾಡದೇ ನೋಡ್ಲೇಬೇಕು!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಕಿಚ್ಚ ಸುದೀಪ್
ಸ್ಯಾಂಡಲ್ವುಡ್ ಫಿಲ್ಮ್
ಸ್ಯಾಂಡಲ್‌ವುಡ್
ಟಾಲಿವುಡ್

Latest Videos
Recommended Stories
Recommended image1
90s ಕಿಡ್ಸ್ ಹೃದಯ ಹಿಂಡಿದ ಕನ್ನಡದ ಸಿನಿಮಾಗಳು; Gen Zಗಳು ಮಿಸ್ ಮಾಡದೇ ನೋಡ್ಲೇಬೇಕು!
Recommended image2
Dog Satish ಮಗನಿಗೆ ಡಿಂಪಲ್​ ಕ್ವೀನ್​ ರಚಿತಾ ರಾಮ್​ ನಾಯಕಿ? 1 ಕೋಟಿಗೆ ಆಫರ್​; ಏನಿದು ಬಿಸಿಬಿಸಿ ಸುದ್ದಿ?
Recommended image3
ಹುಸಿಮುನಿಸು, ಪ್ರೀತಿ, ಕೋಳಿ ಜಗಳ; ಮದುವೆಯಾದ್ಮೇಲೆ ವಿಡಿಯೋ ಶೇರ್‌ ಮಾಡಿದ ನಟಿ ರಶ್ಮಿಕಾ ಮಂದಣ್ಣ
Related Stories
Recommended image1
ಕಿಚ್ಚನ ಸಿನಿಮಾ ಜೀವನವನ್ನೇ ಬಾಯಿಗೆ ಬರಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ; ಆ ಘಟನೆಯನ್ನ ಬಿಚ್ಚಿಟ್ಟ ಸುದೀಪ್!
Recommended image2
ಸ್ಟಾರ್ ನಿರ್ದೇಶಕನ ಜೊತೆ ಲವ್, 3 ವರ್ಷಕ್ಕೆ ಡಿವೋರ್ಸ್! ಯಾರು ಈ ಸುದೀಪ್ ಸಿನಿಮಾ ನಟಿ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved