ದೆಹಲಿ(ಎ.09): ಗಗನ ಸಖಿಯನ್ನು ಚುಂಬಿಸಲು ಎರಡು ಬಾರಿ ಬೆತ್ತಲೆಯಾಗಿ ಪ್ರಯಾಣಿಕನೊಬ್ಬ ಡ್ರಾಮಾ ಮಾಡಿದ ವಿಲಕ್ಷಣ ಘಟನೆ ಏರ್‌ಏಷ್ಯಾ ಫ್ಲೈಟ್‌ನಲ್ಲಿ ನಡೆದಿದೆ. ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

ವಿಮಾನಯಾನ ಸಚಿವಾಲಯ ಪರಿಶೀಲಿಸಿದ ಆಂತರಿಕ ವರದಿಯ ಪ್ರಕಾರ ಪ್ರಯಾಣಿಕನು ಬೆತ್ತಲೆಯಾಗಿ ತನ್ನೇ ಲ್ಯಾಪ್‌ಟಾಪ್ ಮುರಿದು ಸಿಬ್ಬಂದಿಯಿಂದ ಇಟಾಲಿಯನ್ ಸ್ಮೂಚ್ ಅನ್ನು ಕೇಳಿದ್ದಾನೆ.

ಈ ಟ್ರಿಕ್‌ ಬಳಸಿದರೆ ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರಲ್ಲ!

ಸೋಮವಾರ ಟ್ರಿಪ್‌ನಲ್ಲಿ ಪ್ರಯಾಣಿಕ ಕ್ಯಾಬಿನ್ ಸಿಬ್ಬಂದಿ ಸದಸ್ಯರಲ್ಲಿ ಇಟಾಲಿಯನ್ ಸ್ಮೂಚ್‌ ಬೇಕೆಂದು ಹಠ ಮಾಡಿದ್ದಾನೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ವರದಿ ತಿಳಿಸಿದೆ.

ಪ್ರಯಾಣಿಕನಿಗೆ ಸಮಾಧಾನವಾಗಿ ಕುಳಿತುಕೊಳ್ಳಲು ಸೂಚಿಸಲಾಯಿತು. ವ್ಯಕ್ತಿ ಮದ್ಯ ಸೇವಿಸಿದ್ದಾರೆಯೇ ಅಥವಾ ಮಾದಕ ವಸ್ತು ತೆಗೆದುಕೊಂಡಿದ್ದಾರೆಯೇ ಎಂದೂ ಪರಿಶೀಲಿಸಲಾಗಿತ್ತು. ಆದರೆ ಅಂತಹ ಯಾವ ಸಮಸ್ಯೆಯೂ ಇರಲಿಲ್ಲ. ಪ್ರಜ್ಞಾವಸ್ಥೆಯಲ್ಲಿದ್ದುಕೊಂಡೃ ಮುತ್ತಿಗಾಗಿ ಕಿತ್ತಾಟ ಮಾಡಿದ್ದಾನೆ ಈತ.

ರಾಫೆಲ್ ಯುದ್ಧ ವಿಮಾನ ಒಪ್ಪಂದ: ಭ್ರಷ್ಟಾಚಾರ ಆರೋಪ ತಿರಸ್ಕರಿಸಿದ ದಸಾಲ್ಟ್ ಏವಿಯೇಶನ್!

ಒಬ್ಬ ವ್ಯವಸ್ಥಾಪಕಿ ತನ್ನ ಆಸನದಲ್ಲಿ ಬೆತ್ತಲೆಯಾಗಿರುವ ವ್ಯಕ್ತಿಯನ್ನು ಕಂಡು ಆಘಾತಕ್ಕೊಳಗಾದರು. ಅವನನ್ನು ಬಟ್ಟೆ ಧರಿಸಬೇಕೆಂದು ಕೇಳಿಕೊಂಡರು. ಒಮ್ಮೆ ಬಟ್ಟೆ ಧರಿಸಿದರೂ ಮತ್ತೆ ವಿಮಾನ ಇಳಿಯುವಾಗ ಪ್ರಯಾಣಿಕ ಬೆತ್ತಲಾಗಿದ್ದ.

ಅವನು ಕೆಳಗಿಳಿದ ನಂತರ ಮತ್ತೆ ವಿವಸ್ತ್ರಗೊಂಡನು. ತನ್ನ ಬಟ್ಟೆಗಳನ್ನು ತೆಗೆದು ಎಎಐ ಭದ್ರತಾ ಸಿಬ್ಬಂದಿಯ ಎದುರೇ ತನ್ನ ಸ್ವಂತ ಲ್ಯಾಪ್‌ಟಾಪ್ ಅನ್ನು ನೆಲಕ್ಕೆ ಹೊಡೆದು ಮುರಿದಿದ್ದಾನೆ.

ಕಾಶಿ ವಿಶ್ವನಾಥ ಮಂದಿರದ ಭಾಗ ನೆಲಸಮಾಡಿ ಮಸೀದಿ ನಿರ್ಮಾಣ; ಸಮೀಕ್ಷೆಗೆ ಕೋರ್ಟ್ ಒಪ್ಪಿಗೆ!

ಆರಂಭದಲ್ಲಿ ಪ್ರಯಾಣಿಕ ಕ್ಯಾಬಿನ್ ಸಿಬ್ಬಂದಿಯೊಂದಿಗೆ ಲೈಫ್ ಜಾಕೆಟ್‌ಗಳ ಬಗ್ಗೆ ತೀವ್ರ ವಾದ ಪ್ರಾರಂಭಿಸಿದ್ದಾನೆ. ನಂತರ ವಿಮಾನದಲ್ಲಿದ್ದ ಸಿಬ್ಬಂದಿಯೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾನೆ. ಇದ್ದಕ್ಕಿದ್ದಂತೆ ವಿಮಾನದಲ್ಲಿದ್ದಾಗ ಎಲ್ಲಾ ಬಟ್ಟೆಗಳನ್ನು ತೆಗೆದು ಬೆತ್ತಲಾಗಿದ್ದಾನೆ ಎಂದು ಮತ್ತೊಬ್ಬ ಪ್ರಯಾಣಿಕ ಹೇಳಿದ್ದಾರೆ.

ಏರ್‌ಏಷ್ಯಾ ಸಿಬ್ಬಂದಿ ಪೊಲೀಸ್ ದೂರು ದಾಖಲಿಸಿದ್ದು, ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರಯಾಣಿಕನಿಗೆ ನಿರ್ದಿಷ್ಟ ಕಾಲಾವಧಿಗೆ ವಿಮಾನ ಪ್ರಯಾಣ ನಿಷೇಧವನ್ನು ಹೇರಿದ್ದಾರೆ ಎನ್ನಲಾಗಿದೆ.