ಬಿಗ್ಬಾಸ್ ಖ್ಯಾತಿಯ ಸ್ಯಾಂಡಲ್ವುಡ್ ನಟಿ ಅನುಷಾ ರೈ ಅವರು ತಮ್ಮ ಸಹಜ ಸೌಂದರ್ಯದ ಗುಟ್ಟನ್ನು ಹೇಳಿದ್ದಾರೆ. ಅವರು ಏನು ಹೇಳಿದಾರೆ ನೋಡಿ..
ಬಿಗ್ಬಾಸ್ ಮೂಲಕ ಫೇಮಸ್ ಆಗಿರೋರುವ 27 ವರ್ಷ ವಯಸ್ಸಿನ ಅನುಷಾ ರೈ. ಇವರು ಕಿರುತೆರೆ ಮತ್ತು ಬೆಳ್ಳಿತೆರೆಗಳಲ್ಲಿ ಇವರು ಗುರುತಿಸಿಕೊಂಡಿದ್ದಾರೆ. ಅಣ್ಣಯ್ಯ, ಸರಯೂ, ರಾಜಕುಮಾರಿ ಸೇರಿದಂತೆ ಹಲವು ಸೀರಿಯಲ್ಗಳಲ್ಲಿ ಅಭಿನಯಿಸಿದ್ದಾರೆ. 2017ರಲ್ಲಿ ಬಿಡುಗಡೆಯಾದ `ಮಹಾನುಭಾವರು' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟರು. ಆ ಬಳಿಕ ಗೋಸಿ ಗ್ಯಾಂಗ್, ಬಿಎಂಡಬ್ಲ್ಯೂ, ದಮಯಂತಿ, ರೈಡರ್, ಖಡಕ್, ಪೆಂಟಗನ್, ಧೈರ್ಯಂ ಸರ್ವತ್ರ ಸಾಧನಂ, ಅಬ್ಬಬ್ಬ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. 'ನಾಗಕನ್ನಿಕೆ' ಹಾಗೂ 'ರಾಜಕುಮಾರಿ' ಸಿನಿಮಾಗಳಿಗೂ ಬಣ್ಣ ಹಚ್ಚಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿರುವ ಇವರು ಹಾಟ್ ಫೋಟೋಶೂಟ್ಗಳಿಂದಲೇ ಫೇಮಸ್. ಬಿಗ್ ಬಾಸ್ ನಿಂದ ಹೊರಗೆ ಬಂದ ನಂತರ ಅನುಷಾ ರೈ ದೇಶ ವಿದೇಶ ಸುತ್ತೋದ್ರಲ್ಲೇ ಬ್ಯುಸಿಯಾಗಿದ್ದಾರೆ. ಅದಕ್ಕೂ ಮುನ್ನ ನಟಿ ಖರ್ಶನಂ, ಪೆಂಟಗಾನ್, ಗೋಸಿ ಗ್ಯಾಂಗ್, ದಮಯಂತಿ, ರೈಡರ್ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದರು.
ಇದೀಗ ನಟಿ ತಮ್ಮ ಸೌಂದರ್ಯದ ಗುಟ್ಟನ್ನು ಹೇಳಿದ್ದಾರೆ. ನಾನು ಇದುವರೆಗೆ ಫೇಷಿಯಲ್ ಮಾಡಲಿಲ್ಲ. ಮುಖವನ್ನು ಕೆಮಿಕಲ್ ಹಾಕಿ ಸೌಂದರ್ಯ ಹಾಳು ಮಾಡಿಕೊಳ್ಳಬೇಡಿ ಎಂದಿರುವ ನಟಿ, ಚಿನ್ನಾಗಿ ನೀರು ಕುಡಿಯಿರಿ, ಫ್ರುಟ್ ಹೆಚ್ಚಾಗಿ ತಿನ್ನಿ. ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ ಎಂದಿದ್ದಾರೆ. ನಿದ್ದೆ ತುಂಬಾ ಮುಖ್ಯ. ಕಣ್ತುಂಬ ನಿದ್ದೆ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದಿರುವ ಅನುಷಾ ಅವರು, ನೀರು ತುಂಬಾ ಕುಡಿಯದಿದ್ದರೆ ತಮ್ಮ ಚರ್ಮ ಕೂಡ ಹಾಳಾಗುವುದನ್ನು ನೋಡಿರುವುದಾಗಿ ಹೇಳಿದ್ದಾರೆ. ಆದ್ದರಿಂದ ನೀರು ಚೆನ್ನಾಗಿ ಕುಡಿಯುವಂತೆ ಸಲಹೆ ಕೊಟ್ಟಿದ್ದಾರೆ.
ಇನ್ನು ನಟಿ ಕುರಿತು ಹೇಳುವುದಾದರೆ, ತುಮಕೂರಿನವರಾಗಿರುವ ಅನುಷಾ ರೈ ಬೆಂಗಳೂರಿನ ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಜಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಕಾಲೇಜಿನಲ್ಲಿ ಇರುವಾಗಲೇ ಮಾಡೆಲಿಂಗ್ ಮಾಡಿ ಫೇಮಸ್ ಆದವರು. 2016ರಲ್ಲಿ 'ಬೆಸ್ಟ್ ಮಾಡೆಲ್ ಆಫ್ ಕರ್ನಾಟಕ' ಎಂಬ ಬಿರುದು ಕೂಡ ಸಿಕ್ಕಿದೆ.
ಈಚೆಗೆ ನಟಿ, ತಮ್ಮ ಕನಸಿನ ಹುಡುಗನ ಬಗ್ಗೆ ಮಾತನಾಡಿದ್ದರು. ಬಿಗ್ಬಾಸ್ ರಂಜಿತ್ ಮತ್ತು ಮಾನಸ ಗೌಡ ಅವರ ಮದುವೆಗೆ ಬಂದ ನಟಿಗೆ ಪಾಪರಾಜಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಅವರು, ನನಗೆ ಡಿ. ಬಾಸ್ (ದರ್ಶನ್) ಥರ ಇದ್ದರೆ ಸಾಕು, ಅಂಥ ಹುಡುಗ ಸಿಕ್ತಾರಾ? ಹುಡುಕೊಂಡು ಬನ್ನಿ, ಮದ್ವೆಯಾಗ್ತೀನಿ. ಆಮೇಲೆ ಕೇಳಿ ಮದ್ವೆ ಯಾವಾಗ ಎಂದು ಎಂದಿದ್ದರು. ಸದ್ಯ ಕೊ*ಲೆ ಕೇಸ್ನಿಂದ ಸದ್ಯ ದರ್ಶನ್ ಅವರು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದು, ಅವರ ಅಭಿಮಾನಿಗಳಿಗೆ ಅವರ ಮೇಲೆ ಇನ್ನಷ್ಟು ಅಭಿಮಾನ ಹೆಚ್ಚಾಗಿದೆ. ಅವರ ಅಭಿಮಾನಿಗಳಲ್ಲಿ ಒಬ್ಬರು ನಟಿ ಅನುಷಾ ಎನ್ನುವುದು ಈಗ ತಿಳಿದಿದೆ. ತಮ್ಮ ಮದುವೆಯಾಗುವ ಹುಡುಗ ಕೂಡ ದರ್ಶನ್ ಅವರಂತೆಯೇ ಇರಬೇಕು ಎನ್ನುವ ಆಸೆ ವ್ಯಕ್ತಪಡಿಸುವ ಮೂಲಕ ಅವರ ಬೆಂಬಲಕ್ಕೆ ನಿಂತಿದ್ದಾರೆ ಎನ್ನುವುದು ತಿಳಿದಿದೆ.
