ರಂಜಿತ್-ಮಾನಸಾ ವಿವಾಹಕ್ಕೆ ಆಗಮಿಸಿದ್ದ ನಟಿ ಅನುಷಾ ರೈ, ದರ್ಶನ್ ರಂತಹ ವರ ಸಿಕ್ಕರೆ ಮದುವೆಯಾಗುವುದಾಗಿ ಹೇಳಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಈ ನಟಿ, ಮಾಡೆಲಿಂಗ್ ಹಿನ್ನೆಲೆಯುಳ್ಳವರಾಗಿದ್ದು, ಹಲವು ಚಿತ್ರ-ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಧಾರ್ಮಿಕ ಕ್ಷೇತ್ರಗಳಿಗೂ ಭೇಟಿ ನೀಡಿದ್ದರು.
ಬಿಗ್ಬಾಸ್ ರಂಜಿತ್ ಮತ್ತು ಮಾನಸ ಗೌಡ ಅವದರ ಮದುವೆ ಇಂದು ಅದ್ಧೂರಿಯಾಗಿ ನಡೆದಿದೆ. ಇವರ ಮದುವೆಗೆ ಹಲವಾರು ಸೆಲೆಬ್ರಿಟಿಗಳು, ಬಿಗ್ಬಾಸ್ ಸ್ಪರ್ಧಿಗಳು ಬಂದಿದ್ದರು. ಅವರಲ್ಲಿ ಒಬ್ಬರು ಚಂದನವನದ ಬೆಡಗಿ ಅನುಷಾ ರೈ. ಬಿಗ್ ಬಾಸ್ ಸೀಸನ್ 11ರಲ್ಲಿ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಅನುಷಾ, 50ನೇ ದಿನಕ್ಕೆ ಬಿಗ್ ಬಾಸ್ ಪಯಣ ಮುಗಿಸಿ ನಟಿ ಅನುಷಾ ರೈ ಹೊರಬಂದವರು. ಈಚೆಗಷ್ಟೇ ಪ್ರಯಾಗ್ ರಾಜ್ನ ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡಿ ಸದ್ದು ಮಾಡಿದ್ದರು. ಬಳಿಕ ರಾಮ ಜನ್ಮ ಭೂಮಿ ಅಯೋಧ್ಯೆಗೆ ತೆರಳಿ, ರಾಮಲಲ್ಲಾ ದರ್ಶನ ಪಡೆದು ಬಂದಿದ್ದರು. ಅಷ್ಟೇ ಅಲ್ಲದೇ, ಊರ ಹಬ್ಬದಲ್ಲಿ ನಿಗಿನಿಗಿ ಕೆಂಡವನ್ನು ತುಳಿಯುವ ಮೂಲಕ ಹರಕೆ ತೀರಿಸಿದ್ದರು. ಸಾಮಾನ್ಯವಾಗಿ ಯಾರೇ ಆಗಲಿ ಹರಕೆ ಹೊತ್ತುಕೊಂಡಿದ್ದರೆ, ಈ ರೀತಿ ಮಾಡುವುದು ಸಂಪ್ರದಾಯ. ಅನುಷಾ ಅವರು ಏನು ಹರಕೆ ಹೊತ್ತುಕೊಂಡಿದ್ದರು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ಆದರೆ, ಇದೀಗ ಬಿಗ್ಬಾಸ್ ರಂಜಿತ್ ಮತ್ತು ಮಾನಸ ಗೌಡ ಅವರ ಮದುವೆಗೆ ಬಂದ ನಟಿಗೆ ಪಾಪರಾಜಿಗಳು, ಮದುವೆಯ ಬಗ್ಗೆ ಕೇಳಿದ್ದಾರೆ. ಆಗ ನಟಿ, ನನಗೆ ಡಿ. ಬಾಸ್ (ದರ್ಶನ್) ಥರ ಇದ್ದರೆ ಸಾಕು, ಅಂಥ ಹುಡುಗ ಸಿಕ್ತಾರಾ? ಹುಡುಕೊಂಡು ಬನ್ನಿ, ಮದ್ವೆಯಾಗ್ತೀನಿ. ಆಮೇಲೆ ಕೇಳಿ ಮದ್ವೆ ಯಾವಾಗ ಎಂದು ಅಂತ ರಿಪ್ಲೈ ಮಾಡಿದ್ದಾರೆ. ಸದ್ಯ ಕೊ*ಲೆ ಕೇಸ್ನಿಂದ ಸದ್ಯ ದರ್ಶನ್ ಅವರು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದು, ಅವರ ಅಭಿಮಾನಿಗಳಿಗೆ ಅವರ ಮೇಲೆ ಇನ್ನಷ್ಟು ಅಭಿಮಾನ ಹೆಚ್ಚಾಗಿದೆ. ಅವರ ಅಭಿಮಾನಿಗಳಲ್ಲಿ ಒಬ್ಬರು ನಟಿ ಅನುಷಾ ಎನ್ನುವುದು ಈಗ ತಿಳಿದಿದೆ. ತಮ್ಮ ಮದುವೆಯಾಗುವ ಹುಡುಗ ಕೂಡ ದರ್ಶನ್ ಅವರಂತೆಯೇ ಇರಬೇಕು ಎನ್ನುವ ಆಸೆ ವ್ಯಕ್ತಪಡಿಸುವ ಮೂಲಕ ಅವರ ಬೆಂಬಲಕ್ಕೆ ನಿಂತಿದ್ದಾರೆ ಎನ್ನುವುದು ತಿಳಿದಿದೆ. ಈ ವಿಡಿಯೋ ಅನ್ನು ಬಿಗ್ ಸಮಾಚಾರ ಯುಟ್ಯೂಬ್ ಚಾನೆಲ್ನಲ್ಲಿ ಶೇರ್ ಮಾಡಲಾಗಿದೆ.
ನಿಗಿನಿಗಿ ಕೆಂಡ ತುಳಿದು ಹರಕೆ ತೀರಿಸಿದ ಬಿಗ್ಬಾಸ್ ಬ್ಯೂಟಿ ಅನುಷಾ ರೈ: ವಿಡಿಯೋ ನೋಡಿ ಫ್ಯಾನ್ಸ್ ಶಾಕ್
ಇನ್ನು ನಟಿಯ ಕುರಿತು ಹೇಳುವುದಾದರೆ, ಇನ್ನು ನಟಿ 27 ವರ್ಷ ವಯಸ್ಸಿನ ಅನುಷಾ ರೈ ಕುರಿತು ಹೇಳುವುದಾದರೆ, ಇವರು ತುಮಕೂರಿನವರು. ಬೆಂಗಳೂರಿನ ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಜಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಕಾಲೇಜಿನಲ್ಲಿ ಇರುವಾಗಲೇ ಮಾಡೆಲಿಂಗ್ ಮಾಡಿ ಫೇಮಸ್ ಆದವರು. 2016ರಲ್ಲಿ 'ಬೆಸ್ಟ್ ಮಾಡೆಲ್ ಆಫ್ ಕರ್ನಾಟಕ' ಎಂಬ ಬಿರುದು ಕೂಡ ಸಿಕ್ಕಿದೆ.
ಕಿರುತೆರೆ ಮತ್ತು ಬೆಳ್ಳಿತೆರೆಗಳಲ್ಲಿ ಇವರು ಗುರುತಿಸಿಕೊಂಡಿದ್ದಾರೆ. ಅಣ್ಣಯ್ಯ, ಸರಯೂ, ರಾಜಕುಮಾರಿ ಸೇರಿದಂತೆ ಹಲವು ಸೀರಿಯಲ್ಗಳಲ್ಲಿ ಅಭಿನಯಿಸಿದ್ದಾರೆ. 2017ರಲ್ಲಿ ಬಿಡುಗಡೆಯಾದ `ಮಹಾನುಭಾವರು' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟರು. ಆ ಬಳಿಕ ಗೋಸಿ ಗ್ಯಾಂಗ್, ಬಿಎಂಡಬ್ಲ್ಯೂ, ದಮಯಂತಿ, ರೈಡರ್, ಖಡಕ್, ಪೆಂಟಗನ್, ಧೈರ್ಯಂ ಸರ್ವತ್ರ ಸಾಧನಂ, ಅಬ್ಬಬ್ಬ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. 'ನಾಗಕನ್ನಿಕೆ' ಹಾಗೂ 'ರಾಜಕುಮಾರಿ' ಸಿನಿಮಾಗಳಿಗೂ ಬಣ್ಣ ಹಚ್ಚಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿರುವ ಇವರು ಹಾಟ್ ಫೋಟೋಶೂಟ್ಗಳಿಂದಲೇ ಫೇಮಸ್. ಬಿಗ್ ಬಾಸ್ ನಿಂದ ಹೊರಗೆ ಬಂದ ನಂತರ ಅನುಷಾ ರೈ ದೇಶ ವಿದೇಶ ಸುತ್ತೋದ್ರಲ್ಲೇ ಬ್ಯುಸಿಯಾಗಿದ್ದಾರೆ. ಅದಕ್ಕೂ ಮುನ್ನ ನಟಿ ಖರ್ಶನಂ, ಪೆಂಟಗಾನ್, ಗೋಸಿ ಗ್ಯಾಂಗ್, ದಮಯಂತಿ, ರೈಡರ್ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದರು.
ಬಿಗ್ಬಾಸ್ನಲ್ಲಿ ಒಂದೂವರೆ ಲಕ್ಷದ ಬಟ್ಟೆ ತೋರಿಸುವಷ್ಟ್ರಲ್ಲಿ ಹೀಗಾಗೋಯ್ತು... ನಟಿ ಅನುಷಾ ರೈ ನೋವಿನ ನುಡಿ



