ಭಾರತದ ಬ್ರ್ಯಾಂಡ್ ಮಿವಿ ಒನ್ ಇದೀಗ ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ವಿಶೇಷ ಅಂದರೆ ಚೀನಾ ಫೋನ್‌ಗಳಿಂತ ಉತ್ತಮ ಗುಣಮಟ್ಟದ ಫೋನ್ ಇದು. ಇಷ್ಟೇ ಅಲ್ಲ ಅದಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ. ಜೊತೆಗೆ ಡಿಸ್ಕೌಂಟ್ ಆಫರ್ ಕೂಡ ಲಭ್ಯವಿದೆ.
ನವದೆಹಲಿ (ಸೆ.24) ಭಾರತದ ಮಾರುಕಟ್ಟೆಯಲ್ಲಿ ಚೀನಾ ಫೋನ್‌ಗಳೇ ಹೆಚ್ಚು ಆವರಿಸಿಕೊಂಡಿದೆ. ಕಡಿಮೆ ಬೆಲೆ, ಉತ್ತಮ ಸ್ಟೋರೇಜ್, ಅತ್ಯಾಧುನಿಕ ಫೀಚರ್, ಗುಣಮಟ್ಟದ ಕ್ಯಾಮೆರಾಗಳ ಕಾರಣ ಚೀನಾ ಫೋನ್‌ಗಳೇ ಹೆಚ್ಚು ಮಾರಾಟ ಕಾಣುತ್ತಿದೆ. ಇದೀಗ ಚೀನಾ ಫೋನ್‌ಗಳಿಗೆ ಸೆಡ್ಡು ಹೊಡೆಯಲು ಭಾರತದ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಮಿವಿ ಒನ್ ಇದೀಗ 5ಜಿ ಫೋನ್ ಲಾಂಚ್ ಮಾಡಿದೆ. ಮಿವಿ ಬಿಡುಗಡೆ ಮಾಡಿರುವ ಫೋನ್ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ವಿಶೇಷ ಅಂದರೆ ಆರಂಭಿಕ ಮಾರಾಟದಲ್ಲಿ 3000 ರೂಪಾಯಿ ಡಿಸ್ಕೌಂಟ್ ಬೆಲೆಯಲ್ಲಿ ಲಭ್ಯವಿದೆ.
ಮಿವಿ ಒನ್ 5ಜಿ ಫೋನ್ ವಿಶೇಷತೆ ಹಾಗೂ ಬೆಲೆ
ಮಿವಿ ಒನ್ 5ಜಿ ಪೋನ್ ಹಲವು ವಿಶೇಷತೆ ಹೊಂದಿದೆ. ಜೊತೆಗೆ ಚೀನಾ ಫೋನ್‌ಗಳಿಗೆ ಠಕ್ಕರ್ ಕೊಡುವುದು ಬಹುತೇಕ ಖಚಿತವಾಗಿದೆ. ಪ್ರಮುಖವಾಗಿ ಇದು ಭಾರತದಲ್ಲೇ ತಯಾರಾದ, ಭಾರತದ ಕಂಪನಿಯ ಫೋನ್. ಇನ್ನು ಕ್ವಾಲ್ಕಾಮ್ ಪ್ರೊಸೆಸರ್, 8ಜಿಬಿ RAM ವೇರಿಯೆಂಟ್, 5 ವಿವಿಧ ಬಣ್ಣಗಳು, 50ಎಂಪಿ ಕ್ಯಾಮೆರಾ, 90Hz ರೀಫ್ರೆಶ್ ರೇಟ್ ಸೇರಿದಂತೆ ಹಲವು ವಿಶೇಷತೆ ಈ ಫೋನ್‌ನಲ್ಲಿದೆ. ಇದರ ಆರಂಭಿಕ ಬೆಲೆ 14,999 ರೂಪಾಯಿ. ಜೊತೆಗೆ ಆರಂಭಿಕ ಹಂತದಲ್ಲಿ ಇನ್‌ಸ್ಟಾಂಟ್ ಡಿಸ್ಕೌಂಟ್ 3000 ರೂಪಾಯಿವರೆಗೂ ಸಿಗಲಿದೆ.
ಮಿವಿ ಒನ್ 5ಜಿ ಫೋನ್ ಬೆಲೆ ಹಾಗೂ ವೇರಿಯೆಂಟ್
- ಮಿವಿ ಒನ್ 5ಜಿ ಫೋನ್ 4GB RAM ಹಾಗೂ 128 ಜಿಬಿ ಸ್ಟೋರೇಜ್: 14,999 ರೂಪಾಯಿ
- ಮಿವಿ ಒನ್ 5ಜಿ ಫೋನ್ 6GB RAM ಹಾಗೂ 128 ಜಿಬಿ ಸ್ಟೋರೇಜ್: 15,999 ರೂಪಾಯಿ
- ಮಿವಿ ಒನ್ 5ಜಿ ಫೋನ್ 8GB RAM ಹಾಗೂ 128 ಜಿಬಿ ಸ್ಟೋರೇಜ್: 16,999 ರೂಪಾಯಿ
3000 ರೂಪಾಯಿ ಡಿಸ್ಕೌಂಟ್
ಭಾರತದ ಮಾರುಕಟ್ಟೆಗೆ ಮಿವಿ ಒನ್ 5ಜಿ ಫೋನ್ ಲಾಂಚ್ ಆಗಿದೆ. ಇಕಾಮರ್ಸ್ ಮೂಲಕ ಅಕ್ಟೋಬರ್ 8 ರಿಂದ ಖರೀದಿಗೆ ಲಭ್ಯವಿದೆ. ಬಿಗ್ ಬಿಲಿಯನ್ ಡೇಸ್ ಮೂಲಕ ಖರೀದಿ ಮಾಡುವುದಾದರೆ 3000 ರೂಪಾಯಿ ಇನ್‌ಸ್ಟಾಂಟ್ ಡಿಸ್ಕೌಂಟ್ ಸಿಗಲಿದೆ.
ಮಿವಿ ಒನ್ 5ಜಿ ಫೋನ್ 50ಎಂಪಿ ಕ್ಯಾಮೆರಾ ಹೊಂದಿದೆ. ಸೆಲ್ಫಿ ಹಾಗೂ ವಿಡಿಯೋ ಕಾಲ್ಸ್‌ಗೆ 8ಎಂಪಿ ಫ್ರಂಟ್ ಕ್ಯಾಮೆರಾ ಆಯ್ಕೆ ಹೊಂದಿದೆ. 6.74 ಇಂಚಿನ HD+ ಡಿಸ್‌ಪ್ಲೇ, 90Hz ರೀಫ್ರೆಶ್ ರೇಟ್, ಆ್ಯಂಡ್ರಾಯ್ಡ್ 16 ಆಪರೇಟಿಂಗ್ ಸಿಸ್ಟಮ್, ಕ್ವಾಲ್ಕಾಂ ಸ್ನಾಪ್‌ಡ್ರಾಗನ್ 4 Gen 2 ಪ್ರೊಸೆಸರ್, 6000mAh ಬ್ಯಾಟರಿ ಸೇರಿದಂತೆ ಹಲವು ವಿಶೇಷತೆಗಳು ಈ ಫೋನ್‌ನಲ್ಲಿದೆ.

