ಬಂಡೀಪುರದಲ್ಲಿ 'ಫ್ರೆಂಡ್ಸ್ ಆಫ್ ಬಂಡೀಪುರ' ಕಾರ್ಯಕ್ರಮದಡಿಯಲ್ಲಿ APC ಕ್ಯಾಂಪ್‌ಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಮೂಲಕ NTCA ಕಾಯ್ದೆ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ. 

ವರದಿ - ಪುಟ್ಟರಾಜು. ಆರ್. ಸಿ ಏಷಿಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ

ಚಾಮರಾಜನಗರ (ಜೂ.13): ರಾಜ್ಯದಲ್ಲಿ ಅತಿ ಹೆಚ್ಚ ಹುಲಿ ಹೊಂದಿರುವ ಹುಲಿ ಸಂರಕ್ಷಿತ ಪ್ರದೇಶ ಅಂದ್ರೆ ಅದು ಬಂಡೀಪುರ. ಬಂಡೀಪುರದ ಸಫಾರಿಗೆ ಅದರ ಪ್ರಕೃತಿಯ ಸೊಬಗಿಗೆ ಮನ ಸೋಲದವರೇ ಇಲ್ಲ. ಆದ್ರೆ ಇಲ್ಲಿಯ ಅಧಿಕಾರಿಗಳು ಜಾರಿಗೆ ತರುವ ಯೋಜನೆಗಳು ಒಂದಲ್ಲ ಒಂದು ವಿವಾದಕ್ಕೆ ಎಡೆ ಮಾಡಿಕೊಡ್ತಿವೆ. ಅಧಿಕಾರಿ ಮಾಡ್ತಾಯಿರೊ ಎಡವಟ್ಟಿನಿಂದ ಪರಿಸರವಾದಿಗಳು ಆಕ್ಷೇಪ ಎತ್ತಿದ್ದಾರೆ. ಅಷ್ಟಕ್ಕೂ ಈ ಅರಣ್ಯ ಅರಣ್ಯಾಧಿಕಾರಿಯ ಎಡವಟ್ಟಾದ್ರು ಏನು ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ..

ಬಿಂದಾಸ್ ಆಗಿ ಅರಣ್ಯದಲ್ಲಿ ವಿಹಾರ ನಡೆಸ್ತಾಯಿದ್ದಾರಲ್ಲ ಇದು ಬೇರೆ ಎಲ್ಲೂ ಅಲ್ಲ ಬಂಡೀಪುರದ APC ಕ್ಯಾಂಪ್ ನಲ್ಲಿ.. ಹೌದು APC ಅಂದ್ರೆ ಕಳ್ಳ ಬೇಟೆ ಶಿಬಿರ.. ವನ್ಯ ಮೃಗಗಳನ್ನು ಬೇಟೆಯಾಡುವುದನ್ನ ತಗೆಯಲು ಹಾಗೂ ಹುಲಿ ಸೇರಿದಂತೆ ಇನ್ನಿತರೆ ಕಾಡು ಪ್ರಾಣಿಗಳಿಗೆ ಅಪಾಯ ಎದುರಾದಾಗ ಈ ಕ್ಯಾಂಪ್ ನಿಂದಲೇ ಸಿಬ್ಬಂದಿ ಅಖಾಡಕ್ಕೆ ಇಳಿದು ರಕ್ಷಿಸುವ ಕೆಲಸ ಮಾಡ್ತಾರೆ. ಇಂತಹ ಪ್ರದೇಶ ಟೈಗರ್ ಕೋರ್ ಹ್ಯಾಬಿಟೇಟ್ ಪ್ರದೇಶದಲ್ಲಿ ಇರುತ್ತೆ ಅಂದ್ರೆ ಡೀಪ್ ಫಾರೆಸ್ಟ್ ಒಳಗಡೆ ಈ ಕ್ಯಾಂಪ್ ಗಳನ್ನು ನಿರ್ಮಾಣ ಮಾಡಲಾಗಿರುತ್ತೆ ಇಲ್ಲಿ ಸಾರ್ವಜನಿಕರಿಗೆ ಪ್ರವೇಶವಿಲ್ಲ. NTCA ಕಾಯ್ದೆಯಡಿ ಯಾರನ್ನು ಸಹ ಈ ಪ್ರದೇಶಕ್ಕೆ ಕರೆದುಕೊಂಡು ಹೋಗಬಾರದು ಜೊತೆಗೆ ಇದನ್ನು ಸಹ ರಿವೀಲ್ ಮಾಡಬಾರದು. ಆದ್ರೆ ಅರಣ್ಯ ಸಿಬ್ಬಂದಿ ಈ ಜಾಗಕ್ಕೆ ಫ್ರೆಂಡ್ಸ್ ಆಫ್ ಬಂಡೀಪುರ ಶಿರ್ಷಿಕೆಯಡಿಯಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಬಂದು ರಿವೀಲ್ ಮಾಡಲಾಗುತ್ತಿದೆ ಇದರಿಂದ ಪರಿಸರವಾದಿಗಳು ಭಾರೀ ವಿರೋದ ವ್ಯಕ್ತಪಡಿಸುತ್ತಿದ್ದಾರೆ.

ಫ್ರೆಂಡ್ಸ್ ಆಫ್ ಬಂಡೀಪುರ ಅಂದ್ರೆ ಸಾರ್ವಜನಿಕರಿಗೆ ಅರಣ್ಯ ಹಾಗೂ ಅದರ ಸಂರಕ್ಷಣೆ ಮತ್ತು ವನ್ಯ ಮೃಗಗಳ ಕುರಿತು ಮಾಹಿತಿ ನೀಡುವುದು ಇದು ಉತ್ತಮ ಕಾರ್ಯ ನಿಜ ಆದರೆ ಎಪಿಸಿ ಕ್ಯಾಂಪ್ ಗಳಿಗೆ ಪ್ರವಾಸಿಗರನ್ನ ಕರೆದುಕೊಂಡು ಹೋದ್ರೆ ಆ ಸ್ಥಳ ರಿವೀಲ್ ಆಗುತ್ತೆ ಒಂದು ವೇಳೆ ಯಾರಾದ್ರು ಬೇಟೆಯಾಡಲು ಬಂದ್ರೆ ಈ ಸ್ಥಳವನ್ನ ಗುರುತಿಸಿಕೊಂಡು ಹುಲಿ, ಜಿಂಕೆ, ಅಥವ ಆನೆಗಳನ್ನ ಶಿಕಾರಿಯಾಡುವ ಸಾದ್ಯತೆಯಿದೆ ಈ ಸ್ಥಳವನ್ನ ರಿವೀಲ್ ಮಾಡುವುದು ಎನ್.ಟಿ.ಸಿ.ಎ ಕಾಯ್ದೆಯ ವಿರೋಧ ಎಂಬುದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪರಿಸರ ಆಸಕ್ತರು, ಪ್ರವಾಸಿಗರು ಹಾಗು ಮಕ್ಕಳಿಗೆ ಪರಿಸರ, ಅರಣ್ಯ ಹಾಗು ವನ್ಯ ಜೀವಿ ಸಂರಕ್ಷಣೆ ಕುರಿತು ಅರಿವು ಮೂಡಿಸಲು ರೂಪಿಸಿರುವ ಕಾರ್ಯಕ್ರಮವೆ ಫ್ರೆಂಡ್ಸ್ ಆಫ್ ಬಂಡಿಪುರ ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಾಗಾರಕ್ಕೆ ಆನ್ ಲೈನ್ ನಲ್ಲಿ ನಿಗದಿತ ಶುಲ್ಕ ಪಾವತಿಸಿ ನೋಂದಾಯಿಸಿಕೊಂಡವರಿಗೆ ಬಂಡಿಪುರ ಕೋರ್ ಕ್ರಿಟಿಕಲ್ ಟೈಗರ್ ಹ್ಯಾಬಿಟೆಟ್ ವ್ಯಾಪ್ತಿಯಲ್ಲಿರುವ ಇಲಾಖಾ ಕಾಟೇಜ್ ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ ನಾಲ್ಕು ಬಾರಿ ಜಂಗಲ್ ಸಫಾರಿ, ತಜ್ಞರಿಂದ ಕಾಡು, ಪಕ್ಷಿ, ಚಿಟ್ಟೆ, ಕಪ್ಪೆ ಗ್ರಾಸ್ ಲ್ಯಾಂಡ್, ಸೋಲಾ ಫಾರೆಸ್ಟ್ ಹೀಗೆ ಕಾಡುಗಳ ಬಗ್ಗೆ ಉಪನ್ಯಾಸ ಸೇರಿದಂತೆ ಪರಿಸರ ಸಂರಕ್ಷಣೆ ಸಂಬಂಧಿತ ಚಟುವಟಿಕೆಗಳ ಬಗ್ಗೆ ತಿಳಿಸಲಾಗುವುದು.

ಸಫಾರಿಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಮರಳಾಲ ಕ್ಯಾಂಪ್ ಸಹ ಸಿಗುತ್ತೆ. ಅಲ್ಲಿ ಪ್ರವಾಸಿಗರಿಗೆ ಅರಣ್ಯ ಸಿಬ್ಬಂದಿ ಕೆಲಸದ ಬಗ್ಗೆ ಅರಿವು ಮೂಡಿಸುವ ಭಾಗವಾಗಿ ಅವರನ್ನು ಕರೆದುಕೊಂಡು ಹೋಗಿದ್ದೇವೆ. ಹುಲ್ಲುಗಾವಲು ಪ್ರದೇಶಕ್ಕೂ ಕೂಡ ಕರೆದುಕೊಂಡು ಹೋಗಿ ಸೋಲೋ ಫಾರೆಸ್ಟ್ ಹೇಗಿರುತ್ತೆ ಇದು ಸಸ್ಯಹಾರಿ ಪ್ರಾಣಿಗಳಿಗೆ ಅನುಕೂಲವಾಗುತ್ತದೆ ಎಂಬ ಮಾಹಿತಿ ಕೊಡ್ತಿದ್ದೇವೆ ಅಂತ ಬಂಡಿಪುರ ನಿರ್ದೇಶಕರಾದ ಪ್ರಭಾಕರನ್ ತಿಳಿಸಿದ್ದಾರೆ.

ಕಳೆದ ತಿಂಗಳ ಹಿಂದೆ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕೇರಳದ ಮಲಯಾಳಂ ಚಿತ್ರಕ್ಕೆ ಶೂಟಿಂಗ್ ಗೆ ಅನುಮತಿ ಕೊಟ್ಟು ಎನ್.ಟಿ.ಸಿ.ಎ ಕಾಯ್ದೆ ಉಲ್ಲಂಘನೆ ಮಾಡಿದ ಪ್ರಕರಣ ಮಾಸುವ ಮುನ್ನವೇ ಮತ್ತೆ ಈಗ ಫ್ರೆಂಡ್ಸ್ ಆಫ್ ಬಂಡೀಪುರ ಹೆಸರಿನಲ್ಲಿ ಮತ್ತೆ NTCA ಕಾಯ್ದೆ ಉಲ್ಲಂಘನೆ ಮಾಡಿ ಮತ್ತೆ ಬಂಡೀಪುರ ಅರಣ್ಯ ಸಿಬ್ಬಂದಿ ಎಡವಟ್ಟು ಮಾಡಿಕೊಂಡಿದ್ದು ನಿಜಕ್ಕು ದುರಂತವೇ ಸರಿ..