ಕಡಲೆಕಾಯಿ ಚಟ್ನಿಯು ದೋಸೆ, ಇಡ್ಲಿ ಮತ್ತು ವಡೆಯಂತಹ ದಕ್ಷಿಣ ಭಾರತದ ಖಾದ್ಯಗಳಿಗೆ ಅತ್ಯುತ್ತಮವಾದ ಕಾಂಬಿನೇಶನ್.
1 ಕಪ್ ಕಡಲೆಕಾಯಿ, 2-3 ಹಸಿರುಮೆಣಸಿನಕಾಯಿ, ಬೆಳ್ಳುಳ್ಳಿ, ನಿಂಬೆ ರಸ, ಜೀರಿಗೆ, ಉಪ್ಪು, ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕರಿಬೇವು ಮತ್ತು ಒಣಮೆಣಸಿನಕಾಯಿ.
ಎಣ್ಣೆಯನ್ನು ಬಿಸಿ ಮಾಡಿ ಕಡಲೆಕಾಯಿಯನ್ನು ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ. ನಂತರ ತಣ್ಣಗಾಗಿಸಿ ತರಿತರಿಯಾಗಿ ರುಬ್ಬಿಕೊಳ್ಳಿ
ಹಸಿರುಮೆಣಸಿನಕಾಯಿ, ಬೆಳ್ಳುಳ್ಳಿ, ನಿಂಬೆ ರಸ, ಜೀರಿಗೆ, ಉಪ್ಪು ಮತ್ತು ನೀರನ್ನು ಸೇರಿಸಿ ನುಣ್ಣಗೆ ರುಬ್ಬಿ. ಇದಕ್ಕೆ ರುಬ್ಬಿಕೊಂಡ ಕಡಲೆಕಾಯಿ ಮಿಶ್ರಣ ಸೇರಿಸಿ.
ಒಗ್ಗರಣೆಗಾಗಿ ಎಣ್ಣೆ ಕಾಯಿಸಿ ಸಾಸಿವೆ, ಉದ್ದಿನಬೇಳೆ, ಒಣಮೆಣಸಿನಕಾಯಿ, ಕರಿಬೇವು ಮತ್ತು ಇಂಗನ್ನು ಸೇರಿಸಿ.
ತಯಾರಾದ ಒಗ್ಗರಣೆಯನ್ನು ರುಬ್ಬಿಕೊಂಡ ಚಟ್ನಿಯ ಮೇಲೆ ಹಾಕಿ. ಈಗ ರುಚಿಯಾದ ಕಡಲೆಕಾಯಿ ಚಟ್ನಿ ಸವಿಯಲು ಸಿದ್ಧ.
Gardening Tips: ಬಾಲ್ಕನಿಯಲ್ಲೇ ಸೋರೆಕಾಯಿ ಬೆಳೆಸೋಕೆ ಅಕ್ಕಿ ನೀರು ಹಾಕಿ
ರಂಜಾನ್ ತಿಂಗಳಲ್ಲಿ ಸ್ಪೆಷಲ್ ಫುಡ್ ಸಿಗುವ ಬೆಂಗಳೂರಿನ ಪ್ರಮಖ ಸ್ಥಳಗಳು
ಪನೀರ್ ಅಂದ್ರೆ ಇಷ್ಟನಾ? ಪ್ರತಿದಿನ ಅತಿಯಾಗಿ ತಿಂದ್ರೆ ಈ ಸಮಸ್ಯೆಗಳು ಗ್ಯಾರಂಟಿ!
ನೀವು ಪ್ರತಿದಿನ ಗ್ರೀನ್ ಟೀ ಕುಡೀತೀರಾ? ಹಾಗಿದ್ರೆ ಈ ವಿಷಯಗಳು ನಿಮಗೆ ಗೊತ್ತಿರಲಿ!