ಕಾಲುಂಗುರ ಧರಿಸುವುದರ ಮಹತ್ವವೇನು?

ಭಾರತೀಯ ಹಿಂದೂ ಸಂಪ್ರದಾಯದಲ್ಲಿ ಮುತ್ತೈದೆ ಎಂದರೆ ಹಣೆಗೆ, ಕೈಗೆ, ಕಾಲುಂಗುರ, ಮೂಗುತಿ ಹಾಗೂ ಕಿವಿಯೋಲೆ ಧರಿಸುವ ಸಂಪ್ರದಾಯವಿದೆ. ಹಿರಿಯರು ಯಾವುದೇ ಸಂಪ್ರದಾಯವನ್ನು ಮಾಡುವಾಗ ಅದು ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆಯೂ ಚಿಂತಿಸುತ್ತಿದ್ದರು ಎನಿಸುತ್ತೆ. ಕಾಲುಂಗುರ ತೊಡುವ ಹಿಂದೆಯೂ ಇದೆ ವೈಜ್ಞಾನಿಕ ಸತ್ಯ. ಏನದು?

Significance of wearing toe finger

ಹಿಂದೂ ಸಂಪ್ರದಾಯದಲ್ಲಿ ಕಾಲುಂಗುರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಮದುವೆಯಾದ ಮಹಿಳೆ ಧರಿಸಲೇಬೇಕಾದ ಒಂದು ಮುಖ್ಯವಾದ ಮಂಗಳಕರ ವಸ್ತು ಇದಾಗಿದೆ. ಆದರೆ ಇಂದು ಫ್ಯಾಷನ್ ಗಾಗಿ, ಡೆಕೋರೇಟಿವ್ ಜ್ಯುವೆಲ್ಲರಿ ಆಗಿ ಅಥವಾ ಹೀಲಿಂಗ್ ಪವರ್ ಹೊಂದಿದ ಸ್ಟೋನ್ ಜೊತೆ ಇದನ್ನು ಧರಿಸುತ್ತಾರೆ. 

ಪೌರಾಣಿಕ ಕಾಲದಲ್ಲೂ ನಾವು ಗಮನಿಸಿದಾಗ ರಾಮಾಯಣದಲ್ಲಿ ಕಾಲುಂಗುರದ ಉಲ್ಲೇಖ ಇದೆ. ರಾವಣ ಸೀತೆಯನ್ನು ಅಪಹರಿಸಿದಾಗ ಸೀತೆ ರಾಮನಿಗೆ ಪತ್ತೆ ಹಚ್ಚಲು ಸುಲಭವಾಗಲೆಂದು ತನ್ನ ಕಾಲುಂಗುರವನ್ನು ಎಸೆದಿದ್ದಳಂತೆ. ಅಂದರೆ ಆ ಕಾಲದಿಂದಲೂ ಕಾಲುಂಗುರ ಬಳಕೆಯಲ್ಲಿತ್ತು ಎಂದು ಹೇಳಲಾಗುತ್ತದೆ. 

ಕಾಲುಂಗುರ ಸಾಮಾನ್ಯವಾಗಿ ಬೆಳ್ಳಿಯಿಂದ ಮಾಡಿರುತ್ತಾರೆ. ಇದನ್ನು ಚಿನ್ನದಿಂದಲೇ ಮಾಡಬಹುದಿತ್ತು. ಆದರೆ ಹಿಂದೂ ಸಂಪ್ರದಾಯದಲ್ಲಿ ಸೊಂಟಕ್ಕಿಂತ ಕೆಳಗೆ ಚಿನ್ನ ಧರಿಸಬಾರದೆಂಬ ನಂಬಿಕೆ ಇದೆ. ಚಿನ್ನ ಲಕ್ಷ್ಮಿ ದೇವಿಯ ಸಂಕೇತ. ಆದುದರಿಂದ ಚಿನ್ನವನ್ನು ಕಾಲಿಗೆ ಹಾಕಲು ಜನರು ಇಷ್ಟ ಪಡೋದಿಲ್ಲ. 

ಕಾಲುಂಗುರ ಧರಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ?
- ಎರಡನೇ ಬೆರಳಿಗೆ ಕಾಲುಂಗುರ ಧರಿಸುವುದರಿಂದ ಲೈಂಗಿಕ ಜೀವನ ತೃಪ್ತಿಕರವಾಗಿರುತ್ತದೆ. 
- ಕಾಲುಂಗುರ ಹಾಕುವುದರ ಹಿಂದೆ ವೈಜ್ಞಾನಿಕ ಕಾರಣ ಇದೆ. ಕಾಲಿನ ಎರಡನೇ ಬೆರಳಿನಲ್ಲಿ ಪ್ರೆಷರ್ ಪಾಯಿಂಟ್ ಇದೆ. ಈ ಬೆರಳುಗಳಿಗೆ ಬೆಳ್ಳಿಯ ಉಂಗುರ ಹಾಕುವುದರಿಂದ ಋುತು ಚಕ್ರ ಸಮರ್ಪಕವಾಗಿ ಆಗುತ್ತದೆ. 
- ನೀವು ನಡೆಯುತ್ತಿದ್ದರೆ ಎರಡನೇ ಬೆರಳಿಗೆ ಪ್ರೆಷರ್ ಬೀಳುತ್ತದೆ. ಅವಾಗ ಬೆರಳಿನಲ್ಲಿರುವ ನರ ಗರ್ಭಕೋಶದ ಮೂಲಕ ಹೃದಯದಕ್ಕೆ ಕನೆಕ್ಟ್ ಆಗುತ್ತದೆ. ಇದರಿಂದ ಉತ್ಪಾದಕ ಅಂಗಗಳ ಅರೋಗ್ಯ ಹೆಚ್ಚುತ್ತದೆ. 
- ರಕ್ತದ ಪರಿಚಲನೆ ಉತ್ತಮವಾಗುತ್ತದೆ. ಇದರಿಂದ ಗರ್ಭಕೋಶ ಆರೋಗ್ಯದಿಂದ ಇರಲು ಸಾಧ್ಯ. 
- ಕಾಲಿನ ಎರಡನೇ ಬೆರಳಿಗೆ ಮಸಾಜ್ ಮಾಡುವುದರಿಂದ ಮಹಿಳಾ ಸಂಬಂಧೀ ಸಮಸ್ಯೆಗಳು ನಿವಾರಣೆಯಾಗುತ್ತದೆ. 

ಫ್ಯಾಷನ್‌ಗೆ ಪಿಗ್ಗಿ ಟಿಪ್ಸ್
ಬೆರಳ ಅಂದ ಹೆಚ್ಚಿಸುತ್ತೆ ತರಹೇವಾರಿ ರಿಂಗ್
ಲಿಪ್‌ಸ್ಟಿಕ್‌ನಿಂದ ಹೆಚ್ಚುತ್ತೆ ಸೌಂದರ್ಯ
ಉಂಗುರ ಧರಿಸುವ ಬೆರಳು
ಉಗುರಿನ ಸೌಂದರ್ಯ ಕಾಪಾಡಿಕೊಳ್ಳುವುದೇ ಹೀಗೆ

Latest Videos
Follow Us:
Download App:
  • android
  • ios